ಮಧ್ಯಪ್ರದೇಶ: ರಸಗೊಬ್ಬರಕ್ಕಾಗಿ ಎರಡು ದಿನಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆ ಸಾವು
ಮಹಿಳೆಯೊಬ್ಬರು ಎರಡು ದಿನಗಳಿಂದ ರಸಗೊಬ್ಬರ(Fertilizer)ಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು, ಆರೋಗ್ಯ ಏಕಾಏಕಿ ಹದಗೆಟ್ಟು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ. ಭೂರಿಯಾ ಬಾಯಿ ಎಂಬ 50 ವರ್ಷದ ಮಹಿಳೆ ಮಂಗಳವಾರ ಬಮೋರಿ ಪ್ರದೇಶದ ರಸಗೊಬ್ಬರ ವಿತರಣಾ ಕೇಂದ್ರಕ್ಕೆ ಬಂದಿದ್ದರು. ಆದರೆ ಸ್ಟಾಕ್ ಲಭ್ಯವಿಲ್ಲದ ಕಾರಣ ಚೀಲವನ್ನು ಪಡೆಯಲು ಸಾಧ್ಯವಾಗಲಿಲ್ಲ. ಅವರು ಮರುದಿನ ಮತ್ತೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತರು. ಸಂಜೆಯವರೆಗೂ ಸರಬರಾಜು ಬರದ ಕಾರಣ, ಅವರು ತೀವ್ರ ಚಳಿಯಲ್ಲಿ ಕೇಂದ್ರದ ಹೊರಗೆ ರಾತ್ರಿ ಕಳೆದರು, ನಂತರ ಅವರ ಆರೋಗ್ಯವು ಶೀಘ್ರವಾಗಿ ಹದಗೆಟ್ಟಿತ್ತು.

ಗುನಾ, ನವೆಂಬರ್ 28: ಮಹಿಳೆಯೊಬ್ಬರು ಎರಡು ದಿನಗಳಿಂದ ರಸಗೊಬ್ಬರ(Fertilizer)ಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು, ಆರೋಗ್ಯ ಏಕಾಏಕಿ ಹದಗೆಟ್ಟು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ. ಭೂರಿಯಾ ಬಾಯಿ ಎಂಬ 50 ವರ್ಷದ ಮಹಿಳೆ ಮಂಗಳವಾರ ಬಮೋರಿ ಪ್ರದೇಶದ ರಸಗೊಬ್ಬರ ವಿತರಣಾ ಕೇಂದ್ರಕ್ಕೆ ಬಂದಿದ್ದರು. ಆದರೆ ಸ್ಟಾಕ್ ಲಭ್ಯವಿಲ್ಲದ ಕಾರಣ ಚೀಲವನ್ನು ಪಡೆಯಲು ಸಾಧ್ಯವಾಗಲಿಲ್ಲ. ಅವರು ಮರುದಿನ ಮತ್ತೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತರು. ಸಂಜೆಯವರೆಗೂ ಸರಬರಾಜು ಬರದ ಕಾರಣ, ಅವರು ತೀವ್ರ ಚಳಿಯಲ್ಲಿ ಕೇಂದ್ರದ ಹೊರಗೆ ರಾತ್ರಿ ಕಳೆದರು, ನಂತರ ಅವರ ಆರೋಗ್ಯವು ಶೀಘ್ರವಾಗಿ ಹದಗೆಟ್ಟಿತ್ತು.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತ ಕುಟುಂಬಕ್ಕೆ ನೆರವು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆದಾಗ್ಯೂ, ರಸಗೊಬ್ಬರ ಕೊರತೆಯ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.
ಮಹಿಳೆಗೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು, ತಡರಾತ್ರಿಯಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ ಎಂದು ಗುಣ ಜಿಲ್ಲಾಧಿಕಾರಿ ಕಿಶೋರ್ ಕುಮಾರ್ ಕನ್ಯಾಲ್ ಹೇಳಿದ್ದಾರೆ. ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಸಾಕಷ್ಟು ಇದೆ ಎಂದು ಅವರು ಹೇಳಿದ್ದಾರೆ.ಟೋಕನ್ ವ್ಯವಸ್ಥೆ ಈಗಾಗಲೇ ಇದೆ, ರೈತರು ವಿತರಣಾ ಕೇಂದ್ರಗಳಲ್ಲಿ ರಾತ್ರಿಯಿಡೀ ತಂಗಬಾರದು ಎಂದು ಸೂಚನೆ ನೀಡಿದ್ದಾರೆ.
ಮತ್ತಷ್ಟು ಓದಿ: ಕರ್ನಾಟಕದಲ್ಲಿ ರಸಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ: ರೈತರ ಕೂಗಿಗೆ ಕಿವಿಯಾದ ಪ್ರಹ್ಲಾದ್ ಜೋಶಿ ಆ್ಯಂಡ್ ಟೀಮ್
ಸ್ಥಳೀಯ ವರದಿಗಳು ಹಲವಾರು ಕೇಂದ್ರಗಳಲ್ಲಿ, ವಿಶೇಷವಾಗಿ ಬಾಗೇರಿಯಲ್ಲಿ, ರಸಗೊಬ್ಬರ ಕೊರತೆ ಇದೆ ಜತೆಗೆ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲಿ 274 ರೂ. ರಸಗೊಬ್ಬರ ಚೀಲವನ್ನು 400 ರೂ.ವರೆಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಇದೇ ಕೇಂದ್ರಕ್ಕೆ ಈ ಹಿಂದೆ ಕಾಂಗ್ರೆಸ್ ಶಾಸಕ ರಿಷಿ ಅಗರ್ವಾಲ್ ಭೇಟಿ ನೀಡಿದ್ದರು, ಅವರು ಕಾಯುತ್ತಿದ್ದ ರೈತರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದ್ದರು. ಇದರ ಹೊರತಾಗಿಯೂ, ಪರಿಸ್ಥಿತಿ ಅಸ್ತವ್ಯಸ್ತವಾಗಿತ್ತು, ಇದು ಮಹಿಳೆಯ ಸಾವಿಗೆ ಕಾರಣವಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




