AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಎರಡನೇ ಅಲೆ ಭೀತಿಗೆ ತತ್ತರ.. ಮಧ್ಯಪ್ರದೇಶದಲ್ಲಿ ನಾಳೆಯಿಂದ ಲಾಕ್​ಡೌನ್

ಮಧ್ಯಪ್ರದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿರುವ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದ್ದು, ಏಪ್ರಿಲ್ 9 ರಿಂದ 12 ರವರೆಗೆ ಮಧ್ಯಪ್ರದೇಶದ ನಗರಗಳಲ್ಲಿ ಲಾಕ್​ಡೌನ್ ಘೋಷಣೆಯಾಗಿದೆ. ದೆಹಲಿ, ಪಂಜಾಬ್, ಮುಂಬೈ, ಪುಣೆ, ಕೋಲ್ಕತ್ತಾ ಮುಂತಾದೆಡೆ ಈಗಾಗಲೇ ನೈಟ್​ ಕರ್ಫ್ಯೂ, ವೀಕೆಂಡ್​ ಲಾಕ್​ಡೌನ್​ನಂತಹ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಕೊರೊನಾ ಎರಡನೇ ಅಲೆ ಭೀತಿಗೆ ತತ್ತರ.. ಮಧ್ಯಪ್ರದೇಶದಲ್ಲಿ ನಾಳೆಯಿಂದ ಲಾಕ್​ಡೌನ್
ಸಾಂದರ್ಭಿಕ ಚಿತ್ರ
Skanda
| Updated By: ಸಾಧು ಶ್ರೀನಾಥ್​|

Updated on: Apr 08, 2021 | 12:16 PM

Share

ಭೋಪಾಲ್: ದೇಶಾದ್ಯಂತ ಕೊರೊನಾ ಸೋಂಕಿನ ಎರಡನೇ ಅಲೆ ಅತ್ಯಂತ ವೇಗವಾಗಿ ಹಬ್ಬುತ್ತಿದ್ದು ಆತಂಕ ಸೃಷ್ಟಿಸಿದೆ. ಮೊದಲ ಅಲೆಗಿಂತಲೂ ಹೆಚ್ಚು ಅಪಾಯಕಾರಿಯಾಗಿ ವರ್ತಿಸುತ್ತಿರುವ ಈ ಬಾರಿಯ ಸೋಂಕಿನ ಬಗ್ಗೆ ಎಲ್ಲಾ ರಾಜ್ಯಗಳೂ ಚಿಂತಾಕ್ರಾಂತವಾಗಿವೆ. ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ಗಮನಿಸಿ ಅಪಾಯದಿಂದ ಪಾರಾಗಲು ಮಧ್ಯಪ್ರದೇಶ ರಾಜ್ಯ ಲಾಕ್​ಡೌನ್​ ಮೊರೆ ಹೋಗಿದೆ. ಈ ಬಗ್ಗೆ ಅಧಿಕೃತ ಆದೇಶ ಹೊರಬಿದ್ದಿದ್ದು ಮಧ್ಯಪ್ರದೇಶದ ಎಲ್ಲಾ ನಗರಗಳಲ್ಲೂ ಲಾಕ್​ಡೌನ್ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಮಧ್ಯಪ್ರದೇಶದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿರುವ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದ್ದು, ಏಪ್ರಿಲ್ 9 ರಿಂದ 12 ರವರೆಗೆ ಮಧ್ಯಪ್ರದೇಶದ ನಗರಗಳಲ್ಲಿ ಲಾಕ್​ಡೌನ್ ಘೋಷಣೆಯಾಗಿದೆ. ದೆಹಲಿ, ಪಂಜಾಬ್, ಮುಂಬೈ, ಪುಣೆ, ಕೋಲ್ಕತ್ತಾ ಮುಂತಾದೆಡೆ ಈಗಾಗಲೇ ನೈಟ್​ ಕರ್ಫ್ಯೂ, ವೀಕೆಂಡ್​ ಲಾಕ್​ಡೌನ್​ನಂತಹ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು ಪರಿಸ್ಥಿತಿ ಬಿಗಡಾಯಿಸಿದರೆ ಇನ್ನೂ ಕಠಿಣ ನಿಯಮಗಳ ಮೊರೆ ಹೋಗಲು ಬಹುತೇಕ ರಾಜ್ಯಗಳು ಸನ್ನದ್ಧವಾಗಿವೆ.

ಇನ್ನೊಂದೆಡೆ ವಾರಣಾಸಿ, ಕಾನ್ಪುರ ಹಾಗೂ ಲಕ್ನೋ ನಗರಗಳಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಛತ್ತೀಸಗಡ ರಾಜ್ಯದ ರಾಯ್​ಪುರದಲ್ಲಿ ಈಗಾಗಲೇ ಹತ್ತು ದಿನಗಳ ಕಾಲ ಲಾಕ್​ಡೌನ್ ಮಾಡಲಾಗಿದೆ. ಅಂತೆಯೇ, ಪರಿಸ್ಥಿತಿಯನ್ನು ಗಮನಿಸಿಕೊಂಡು ಕಠಿಣ ನಿಯಮಾವಳಿಗಳನ್ನು ವಿಸ್ತರಿಸುವುದಾಗಿ ಆಯಾ ರಾಜ್ಯ ಸರ್ಕಾರಗಳು ಸೂಚನೆ ನೀಡಿವೆ.

ಬೆಂಗಳೂರಿನಲ್ಲಿ ಸೆಕ್ಷನ್ 144 ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಬೆಂಗಳೂರು ನಗರದಲ್ಲಿ ಸಿಆರ್​ಪಿಸಿ ಸೆಕ್ಷನ್ 144 ನಿರ್ಬಂಧ ಹೇರಿದೆ. ಸಾರ್ವಜನಿಕರ ಸುರಕ್ಷೆ ಮತ್ತು ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ ಹೇಳಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಅಪಾರ್ಟ್​ಮೆಂಟ್ ವಸತಿ ಸಮುಚ್ಚಯದಲ್ಲಿರುವ ಈಜುಕೊಳ, ಜಿಮ್, ಪಾರ್ಟಿ ಹಾಲ್ ಮೊದಲಾದವುಗಳ ಕಾರ್ಯಾಚರಣೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸಹಿ ಹಾಕಿರುವ ಆದೇಶದವನ್ನು ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳುಹಿಸಿಕೊಡಲಾಗಿದೆ. ರಾಜ್ಯದಲ್ಲಿ ಮಂಗಳವಾರ 6,000ಕ್ಕಿಂತಲೂ ಹೆಚ್ಚು ಕೊರೊನಾವೈರಸ್ ಸೋಂಕು ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಈ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಲಾಕ್​ಡೌನ್ ಭೀತಿ​: ವದಂತಿಗೆ ಬೆದರಿ ಗುಳೆ ಹೊರಟ ಕೂಲಿ ಕಾರ್ಮಿಕರು 

ಮಹಾರಾಷ್ಟ್ರದಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯ ಲಾಕ್​ಡೌನ್ ಘೋಷಣೆ