ಅಮ್ಮನ ಲಾಲಿ ಇಲ್ಲ, ಬೆಚ್ಚನೆಯ ಅಪ್ಪುಗೆಯಿಲ್ಲ, ಕಲ್ಲೇ ಹಾಸಿಗೆ, ಮೈಮೇಲೆ ಇರುವೆಗಳ ಸಾಲು, ಹೇಗೋ ಬದುಕಿಬಂತು ಮಗು
ಅಮ್ಮನ ಲಾಲಿ ಇಲ್ಲ, ಬೆಚ್ಚನೆಯ ಅಪ್ಪುಗೆ ಇಲ್ಲ, ಚೂಪಾದ ಕಲ್ಲುಗಳ ಮೇಲೆ, ತೆರೆದ ಆಕಾಶವನ್ನು ನೋಡುತ್ತಾ ನವಜಾತ ಶಿಶು ಮಲಗಿತ್ತು. ಮೈಮೇಲೆಲ್ಲಾ ಇರುವೆಗಳ ಸಾಲು ಆದರೂ ಚೂರು ಉಸಿರು ಉಳಿಸಿಕೊಂಡಿತ್ತು. ಇದು ಮಧ್ಯಪ್ರದೇಶದ ಛಿಂದ್ವಾರದಲ್ಲಿ ನಡೆದ ಘಟನೆ. ತಂದೆ-ತಾಯಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು. ಅವರಿಗೆ ಈಗಾಗಲೆ ಮೂವರು ಮಕ್ಕಳಿದ್ದರು.

ಛಿಂದ್ವಾರಾ, ಅಕ್ಟೋಬರ್ 02: ಅಮ್ಮನ ಲಾಲಿ ಇಲ್ಲ, ಬೆಚ್ಚನೆಯ ಅಪ್ಪುಗೆ ಇಲ್ಲ, ಚೂಪಾದ ಕಲ್ಲುಗಳ ಮೇಲೆ, ತೆರೆದ ಆಕಾಶವನ್ನು ನೋಡುತ್ತಾ ನವಜಾತ ಶಿಶು(Baby) ಮಲಗಿತ್ತು. ಮೈಮೇಲೆಲ್ಲಾ ಇರುವೆಗಳ ಸಾಲು ಆದರೂ ಚೂರು ಉಸಿರು ಉಳಿಸಿಕೊಂಡಿತ್ತು. ಇದು ಮಧ್ಯಪ್ರದೇಶದ ಛಿಂದ್ವಾರದಲ್ಲಿ ನಡೆದ ಘಟನೆ. ತಂದೆ-ತಾಯಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು. ಅವರಿಗೆ ಈಗಾಗಲೆ ಮೂವರು ಮಕ್ಕಳಿದ್ದರು.
ಮತ್ತೆ ಗರ್ಭಿಣಿಯಾಗಿದ್ದನ್ನು ಎಲ್ಲರಿಂದ ಮುಚ್ಚಿಟ್ಟಿದ್ದರು. ಮಧ್ಯಪ್ರದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವವರು ಸರ್ಕಾರಿ ನೌಕರಿ ಕಳೆದುಕೊಳ್ಳುತ್ತಾರೆ. ಸರ್ಕಾರದ ಕೆಲವು ನಿಯಮಗಳಿವೆ. ಈಗಾಗಲೇ ಮೂವರು ಮಕ್ಕಳಿದ್ದಾರೆ ಇನ್ನೊಂದಾದರೆ ಖಂಡಿತವಾಗಿಯೂ ತಾವು ಕೆಲಸವನ್ನು ಕಳೆದುಕೊಳ್ಳುತ್ತೇವೆ ಎಂಬ ಭಯದಲ್ಲಿ ಆಗ ತಾನೆ ಹುಟ್ಟಿದ್ದ, ಇನ್ನೂ ಕಣ್ಣು ತೆರೆಯದ ಕಂದಮ್ಮನನ್ನು ಕಾಡಿನಲ್ಲಿ ಬಿಟ್ಟು ಪೋಷಕರು ಪರಾರಿಯಾಗಿದ್ದರು.
72 ಗಂಟೆಗಳ ಕಾಲ ಹೇಗೋ ಉಸಿರು ಬಿಗಿ ಹಿಡಿದುಕೊಂಡು ಮಗು ಬದುಕುಳಿದಿತ್ತು, ಒಂದು ಕಡೆ ತಣ್ಣನೆಯ ವಾತಾವರಣ, ಕೀಟಗಳ ಕಾಟ, ಕಲ್ಲಿನಡಿ ಉಸಿರುಗಟ್ಟುವ ಸ್ಥಿತಿಯಲ್ಲಿದ್ದರೂ ಉಸಿರಿತ್ತು. ಗ್ರಾಮಸ್ಥರು ಮಗುವನ್ನು ಪತ್ತೆ ಮಾಡಿದ್ದರು. ಜನರು ಕಲ್ಲುಗಳ ನಡುವೆ ರಕ್ತಸಿಕ್ತವಾಗಿದ್ದ ಮಗುವನ್ನು ರಕ್ಷಿಸಿದ್ದಾರೆ.
ಮತ್ತಷ್ಟು ಓದಿ: Shocking News: ಆಟವಾಡುತ್ತಾ ನಾಗರಹಾವನ್ನು ಕಚ್ಚಿ ಸಾಯಿಸಿದ 1 ವರ್ಷದ ಮಗು!
ಸರ್ಕಾರಿ ಶಿಕ್ಷಕರಾಗಿರುವ ತಂದೆ ಬಬ್ಲು ದಾಂಡೋಲಿಯಾ ಮತ್ತು ತಾಯಿ ರಾಜಕುಮಾರಿ ದಾಂಡೋಲಿಯಾ ತಮ್ಮ ಮಗು ನಾಲ್ಕನೇ ಮಗು ಎಂಬ ಕಾರಣಕ್ಕೆ ಮಗುವನ್ನು ಎಸೆಯಲು ನಿರ್ಧರಿಸಿದ್ದರು.
ಸೆಪ್ಟೆಂಬರ್ 23 ರ ಬೆಳಗಿನ ಜಾವ, ರಾಜಕುಮಾರಿ ಮನೆಯಲ್ಲಿಯೇ ಮಗುವಿಗೆ ಜನ್ಮ ನೀಡಿದರು. ಕೆಲವೇ ಗಂಟೆಗಳಲ್ಲಿ, ಮಗುವನ್ನು ಕಾಡಿನ ಕತ್ತಲೆಗೆ ಹೊತ್ತುಕೊಂಡು ಹೋಗಿ ಎಸೆದು ಬಂದಿದ್ದರು.
ನಂದನವಾಡಿ ಗ್ರಾಮದಲ್ಲಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದವರಿಗೆ ಮೊದಲು ಕೂಗು ಕೇಳಿಸಿತು. ಮೊದಲು ಪ್ರಾಣಿ ಎಂದು ಭಾವಿಸಿದ್ದರು. ಆದರೆ ನಾವು ಹತ್ತಿರ ಹೋದಾಗ ಅದು ಮಗುವಿನ ಅಳು ಎಂಬುದು ಗೊತ್ತಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಯಾವ ಪೋಷಕರು ಕೂಡ ಇಂಥಾ ನಿರ್ಧಾರ ಎಂದೂ ತೆಗೆದುಕೊಳ್ಳಬಾರದು ಎಂದಿದ್ದಾರೆ. ಛಿಂದ್ವಾರದ ಆಸ್ಪತ್ರೆಗೆ ಕಳುಹಿಸಲಾಗಿದೆ.ಪೊಲೀಸರು ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




