ದಾರಿ ಮಧ್ಯೆ ಬೈಕ್ ನಿಲ್ಲಿಸಿ, ಪತ್ನಿ-ಮಕ್ಕಳನ್ನು ಬಾವಿಗೆ ತಳ್ಳಿದ ವ್ಯಕ್ತಿಗಾಗಿ ಪೊಲೀಸರ ಹುಡುಕಾಟ
Madhya Pradesh Crime: ಪತಿಗೆ ಎರಡನೇಯದೂ ಹೆಣ್ಣುಮಗುವೇ ಹುಟ್ಟಿದ್ದು ಸ್ವಲ್ಪವೂ ಇಷ್ಟವಿರಲಿಲ್ಲ. ಆತನಿಗೆ ಮಗ ಬೇಕು ಎಂದು ಬಲವಾದ ಆಸೆಯಿತ್ತು. ಅದೇ ಕಾರಣಕ್ಕೆ ಈ ಕೃತ್ಯ ಮಾಡಿದ್ದಾನೆ ಎಂದು ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ.
ಛತ್ತರ್ಪುರ: ಪತ್ನಿ ಮತ್ತು ಮಕ್ಕಳ್ನು ಬಾವಿಗೆ ತಳ್ಳಿ, ಮೇಲಿಂದ ಕಲ್ಲು ಎತ್ತಿಹಾಕಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಲು ಹುಡುಕುತ್ತಿದ್ದಾರೆ. ಇವನ ಕೃತ್ಯದಿಂದಾಗಿ ಅವರ 8 ವರ್ಷದ ಮಗಳು ಮೃತಪಟ್ಟಿದ್ದಾಳೆ. ಪತ್ನಿ ಮತ್ತು ಮೂರು ತಿಂಗಳ ಮಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಧ್ಯಪ್ರದೇಶದ ಛತ್ತರ್ಪುರದ ರಾಜಾ ಭೈಯಾ ಯಾದವ್ ಪತ್ನಿ ಮೂರು ತಿಂಗಳ ಹಿಂದಷ್ಟೇ ಹೆಣ್ಣುಮಗುವಿಗೆ ಜನ್ಮನೀಡಿದ್ದರು. ಮೊದಲಿನದ್ದೂ ಮಗಳೇ ಆಗಿದ್ದು, 8 ವರ್ಷ ಆಗಿದೆ. ತವರು ಮನೆಯಲ್ಲೇ ಇದ್ದ ಪತ್ನಿ ಮತ್ತು ಮಕ್ಕಳನ್ನು ಕರೆದುಕೊಂಡು ಬರಲು ಈ ರಾಜಾ ಭೈಯಾ ಹೋಗಿದ್ದ. ಅಲ್ಲೇ ಪಕ್ಕದ ಪನ್ನಾ ಜಿಲ್ಲೆಯಲ್ಲಿ ಪತ್ನಿಯ ತವರು ಮನೆಯಿತ್ತು. ಶನಿವಾರ ಬೈಕ್ ಮೇಲೆ ಅವರನ್ನು ಕರೆದುಕೊಂಡು ಬರುತ್ತಿದ್ದ ರಾಜಾ ಭೈಯಾ ರಸ್ತೆ ಮಧ್ಯೆ ಸಿಗುವ ಪಡೋಯಿ ಗ್ರಾಮದ ಬಾವಿಯ ಬಳಿ ಬೈಕ್ ನಿಲ್ಲಿಸಿ, ಪತ್ನಿ ಮತ್ತು ಮಕ್ಕಳನ್ನು ಅದರೊಳಗೆ ತಳ್ಳಿದ್ದಾನೆ. ಮತ್ತೆ ಮೇಲಿಂದ ಕಲ್ಲನ್ನೂ ಎಸೆದಿದ್ದಾನೆ. ಕೂಗಾಟ ಕೇಳಿ ಸ್ಥಳೀಯರೆಲ್ಲ ಬಂದು ಪತ್ನಿ ಮತ್ತು ಮೂರು ತಿಂಗಳ ಮಗುವನ್ನು ಕೂಡಲೇ ರಕ್ಷಿಸಿದ್ದಾರೆ. ಆದರೆ 8ವರ್ಷದ ಮಗಳು ಬದುಕುಳಿಯಲಿಲ್ಲ ಎಂದು ಚಂಡ್ಲಾ ಪೊಲೀಸ್ ಠಾಣೆಯ ಅಧಿಕಾರಿ ರಾಜೇಂದ್ರ ಸಿಂಗ್ ಘಟನೆಯ ಬಗ್ಗೆ ವಿವರಿಸಿದ್ದಾರೆ.
ಪತಿಗೆ ಎರಡನೇಯದೂ ಹೆಣ್ಣುಮಗುವೇ ಹುಟ್ಟಿದ್ದು ಸ್ವಲ್ಪವೂ ಇಷ್ಟವಿರಲಿಲ್ಲ. ಆತನಿಗೆ ಮಗ ಬೇಕು ಎಂದು ಬಲವಾದ ಆಸೆಯಿತ್ತು. ಅದೇ ಕಾರಣಕ್ಕೆ ಈ ಕೃತ್ಯ ಮಾಡಿದ್ದಾನೆ ಎಂದು ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ರಾಜಾ ಯಾದವ್ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ.
Madhya Pradesh Crime A Man Pushes Wife and two Daughters Into Well In Madhya Pradesh
Published On - 9:55 am, Mon, 7 June 21