AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶ: ಸಂಪ್ರದಾಯದಂತೆ ಮಾಡಿಲ್ಲ ತಾಯಿಯ ಅಂತಿಮ ಸಂಸ್ಕಾರ; ಮಗನ ವಿರುದ್ಧ ಎಫ್‌ಐಆರ್‌

ಭೋಪಾಲ್‌ನ ಬೈರಸಿಯಾ ತಹಸಿಲ್‌ನ ಗುಂಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 55 ವರ್ಷದ ಜಗದೀಶ್ ಅಲಿಯಾಸ್ ಜಗ್ಗ ತನ್ನ ತಾಯಿ ತುಳಸಿ ಬಾಯಿ (80 ವರ್ಷ) ಅವರೊಂದಿಗೆ ದಿಲ್ಲೌಡ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ತಾಯಿ ಸಾವಿಗೀಡಾದಾಗ ಅವರ ಅಂತಿಮ ಸಂಸ್ಕಾರ ಮಾಡಲು ಹಣವಿಲ್ಲದೇ ಜಗ್ಗ, ತಮ್ಮ ಊರಿನಿಂದ ಸುಮಾರು 300 ಮೀಟರ್ ದೂರದಲ್ಲಿರವ ಕಾಡಿನಲ್ಲಿ ತಾಯಿಯ ಶವ ದಫನ ಮಾಡಿದ್ದಾನೆ.

ಮಧ್ಯಪ್ರದೇಶ: ಸಂಪ್ರದಾಯದಂತೆ ಮಾಡಿಲ್ಲ ತಾಯಿಯ ಅಂತಿಮ ಸಂಸ್ಕಾರ; ಮಗನ ವಿರುದ್ಧ ಎಫ್‌ಐಆರ್‌
ಪ್ರಾತಿನಿಧಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on: Feb 19, 2024 | 7:36 PM

Share

ಭೋಪಾಲ್ ಫೆಬ್ರುವರಿ 19: ಮಧ್ಯಪ್ರದೇಶದ (Madhya Pradesh) ಭೋಪಾಲ್​​ನಲ್ಲಿ (Bhopal) ಸಂಪ್ರದಾಯದಂತೆ ತಾಯಿಯ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಮಾಡದೇ ಇದ್ದ ಯುವಕನೊಬ್ಬನ ವಿರುದ್ಧ ಎಫ್ಐಆರ್ ದಾಖಲಾಗಿದೆ. ತಾಯಿ ಸಾವನ್ನಪ್ಪಿದ ಬಳಿಕ ಮಗ ಆಕೆಯನ್ನು 300 ಮೀಟರ್ ದೂರದ ಕಾಡಿನಲ್ಲಿ ಹೂತಿಟ್ಟು ಮನೆಗೆ ಬಂದ ಬಳಿಕ ಮತ್ತೆ ಮಲಗಿದ್ದ ಎನ್ನಲಾಗಿದೆ. ಬೆಳಗ್ಗೆ ಅಕ್ಕಪಕ್ಕದವರು ತಾಯಿಯನ್ನು ವಿಚಾರಿಸಿದಾಗ ನಿನ್ನೆ ರಾತ್ರಿ ನಡೆದ ಘಟನೆಯನ್ನು ತಿಳಿಸಿದ್ದಾನೆ. ಇದನ್ನು ಕೇಳಿದ ಜನರು ಈತನ ಮೇಲೆ ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸ್ ತಂಡವು ಸಂಪ್ರದಾಯದಂತೆ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದೆ.ಅಂತ್ಯಕ್ರಿಯೆ ಮಾಡಲು ತನ್ನ ಬಳಿ ಹಣವಿಲ್ಲ ಎಂದು ಮಗ ಹೇಳಿದ್ದಾನೆ.

ಭೋಪಾಲ್‌ನ ಬೈರಸಿಯಾ ತಹಸಿಲ್‌ನ ಗುಂಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 55 ವರ್ಷದ ಜಗದೀಶ್ ಅಲಿಯಾಸ್ ಜಗ್ಗ ತನ್ನ ತಾಯಿ ತುಳಸಿ ಬಾಯಿ (80 ವರ್ಷ) ಅವರೊಂದಿಗೆ ದಿಲ್ಲೌಡ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ತುಳಸಿ ಬಾಯಿಯ ಆರೋಗ್ಯ ಕೆಲವು ದಿನಗಳಿಂದ ಹದಗೆಟ್ಟಿತ್ತು. ಫೆಬ್ರವರಿ 13 ರ ರಾತ್ರಿ, ತುಳಸಿ ಬಾಯಿ ಮತ್ತು ಅವರ ಮಗ ತಮ್ಮ ಮನೆಯಲ್ಲಿ ಮಲಗಿದ್ದರು ಆದರೆ ಈ ಸಮಯದಲ್ಲಿ ತುಳಸಿ ಬಾಯಿ ಅನಾರೋಗ್ಯದಿಂದ ನಿಧನರಾದರು. ಅಷ್ಟರಲ್ಲಿ ಎಚ್ಚರಗೊಂಡ ಜಗ್ಗ ತನ್ನ ತಾಯಿಯ ಶವವನ್ನು ನೋಡಿ ಮನೆಯಿಂದ ದೂರದಲ್ಲಿರುವ ಕಾಡಿಗೆ ಒಯ್ದು ಹೂತು ಹಾಕಿದ್ದಾನೆ. ಇದಾದ ನಂತರ ಜಗ್ಗ ತನ್ನ ಮನೆಗೆ ಹಿಂತಿರುಗಿ ಏನೂ ಆಗಿಲ್ಲ ಎಂಬಂತೆ ಮಲಗಿದ್ದ.

ಬೆಳಗ್ಗೆ ಎದ್ದಾಗ ಜಗ್ಗ ಎಂದಿನಂತೆ ಮನೆಯ ಹೊರಗೆ ಕುಳಿತಿದ್ದ. ಈ ಸಮಯದಲ್ಲಿ, ಹತ್ತಿರದ ನೆರೆಹೊರೆಯವರು ಅವನ ತಾಯಿಯ ಬಗ್ಗೆ ಕೇಳಿದ್ದಾರೆ. ಜಗ್ಗ ರಾತ್ರಿಯ ಸಂಪೂರ್ಣ ಕಥೆಯನ್ನು ಹೇಳಿದನು. ಜಗ್ಗಾ ಮಾತು ಕೇಳಿ ಜನರು ತುಳಸಿ ಬಾಯಿಯ ಕೊಲೆಯ ಶಂಕೆ ವ್ಯಕ್ತಪಡಿಸಿದರು. ನಂತರ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರ ಮಾತು ಕೇಳಿದ ತಕ್ಷಣ ಜಗ್ಗ ತನ್ನ ಮನೆಯಿಂದ ಓಡಿಹೋಗಿದ್ದಾನೆ.

ಸಂಪ್ರದಾಯದಂತೆ ಅಂತಿಮ ವಿಧಿವಿಧಾನ

ಪೊಲೀಸರು ಸ್ಥಳಕ್ಕಾಗಮಿಸಿ ತಾಯಿಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ತುಳಸಿ ಬಾಯಿಯದ್ದು ಸಹಜ ಸಾವು ಇದಾದ ನಂತರ ಫೆಬ್ರವರಿ 15 ರಂದು ಪೊಲೀಸ್ ತಂಡ ಮತ್ತು ಸಂಬಂಧಿಕರು ಸೇರಿ ಸಂಪ್ರದಾಯದಂತೆ ಶವವನ್ನು ಅಂತ್ಯಸಂಸ್ಕಾರ ಮಾಡಿದರು.

ಇದನ್ನೂ ಓದಿ: ಇಂದು ಸುದಾಮ ಕೃಷ್ಣನಿಗೆ ಚೀಲದಲ್ಲಿ ಅಕ್ಕಿ ನೀಡುತ್ತಿದ್ದರೆ ಅದು ಭ್ರಷ್ಟಾಚಾರ ಆಗುತ್ತಿತ್ತು: ಮೋದಿ 

ಸಿಕ್ಕಿಬಿದ್ದ ಜಗ್ಗ

ಸ್ವಲ್ಪ ಸಮಯದಲ್ಲೇ ಜಗ್ಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಯಾಕೆ ತಾಯಿಯ ಶವವನ್ನು ಹೂತಿಟ್ಟೆ ಎಂದು ಪೊಲೀಸರು ಕೇಳಿದಾಗ, ಜಗ್ಗ ತನ್ನ ಬಳಿ ಇದ್ದದ್ದು ಕೇವಲ 150 ರೂಪಾಯಿಗಳು, ಆದ್ದರಿಂದ ತನ್ನ ತಾಯಿಯ ಅಂತ್ಯಕ್ರಿಯೆಯನ್ನು ಸಂಪ್ರದಾಯದಂತೆ ಮಾಡಲು ಸಾಧ್ಯವಿಲ್ಲ, ಆದ್ದರಿಂದ ತನ್ನ ತಾಯಿಯ ಶವವನ್ನು ಹೂಳುವುದು ಸರಿ ಎಂದು ತೀರ್ಮಾನಿಸಿದೆ. ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಮನೆಯಿಂದ 300 ಕಿ.ಮೀ ದೂರದ ಕಾಡಿಗೆ ಹೋಗಿ ಅಲ್ಲಿಯೇ ಸಮಾಧಿ ಮಾಡಿದೆ. ಇದಾದ ಬಳಿಕ ಮನೆಗೆ ಬಂದು ಮತ್ತೆ ಮಲಗಿದೆ ಎಂದು ಹೇಳಿದ್ದಾನೆ. ತನಿಖೆಯ ನಂತರ ಪೊಲೀಸರು ಜಗ್ಗ ವಿರುದ್ಧ ಸೆಕ್ಷನ್ 297 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ