ಇಂದು ಸುದಾಮ ಕೃಷ್ಣನಿಗೆ ಚೀಲದಲ್ಲಿ ಅಕ್ಕಿ ನೀಡುತ್ತಿದ್ದರೆ ಅದು ಭ್ರಷ್ಟಾಚಾರ ಆಗುತ್ತಿತ್ತು: ಮೋದಿ

ಉತ್ತರ ಪ್ರದೇಶದ ಸಂಭಾಲ್​​​ನಲ್ಲಿ  ಕಲ್ಕಿ ಧಾಮ ದೇವಾಲಯದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಮೋದಿ, ಪ್ರಮೋದ್ ಜೀ, ನೀವು ನನಗೆ ಏನನ್ನೂ ನೀಡದಿರುವುದು ಒಳ್ಳೆಯದು, ಸಮಯ ಬದಲಾಗಿದೆ. ಇಂದಿನ ಯುಗದಲ್ಲಿ ಸುದಾಮನು ಶ್ರೀಕೃಷ್ಣನಿಗೆ ಅಕ್ಕಿ ಕೊಟ್ಟರೆ ಆ ವಿಡಿಯೊ ಹೊರಬಿದ್ದರೆ ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್‌ ಹಾಕಿ, ಶ್ರೀಕೃಷ್ಣನಿಗೆ ಏನೋ ಕೊಡಲಾಗಿದೆ, ಶ್ರೀಕೃಷ್ಣ ಭ್ರಷ್ಟಾಚಾರ ಮಾಡುತ್ತಿದ್ದಾನೆ ಎಂಬ ತೀರ್ಪು ಬರುತ್ತಿತ್ತು ಎಂದಿದ್ದಾರೆ.

ಇಂದು ಸುದಾಮ ಕೃಷ್ಣನಿಗೆ ಚೀಲದಲ್ಲಿ ಅಕ್ಕಿ ನೀಡುತ್ತಿದ್ದರೆ ಅದು ಭ್ರಷ್ಟಾಚಾರ ಆಗುತ್ತಿತ್ತು: ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Feb 19, 2024 | 6:28 PM

ಸಂಭಾಲ್ ಫೆಬ್ರುವರಿ 19: ಇಂದು ಸುದಾಮ ಅಕ್ಕಿ ಕೊಟ್ಟರೆ ಶ್ರೀಕೃಷ್ಣನಿಗೂ ಭ್ರಷ್ಟಾಚಾರದ ಆರೋಪ ಬರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಉತ್ತರ ಪ್ರದೇಶದ (Uttar Pradesh)  ಸಂಭಾಲ್​​​ನಲ್ಲಿ  ಕಲ್ಕಿ ಧಾಮ ದೇವಾಲಯದ(Kalki Dham Temple) ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡುತ್ತಿದ್ದರವರು. ಶ್ರೀ ಕಲ್ಕಿ ಧಾಮ ನಿರ್ಮಾಣ ಟ್ರಸ್ಟ್ ಅಧ್ಯಕ್ಷ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ತಮ್ಮ ಭಾಷಣದಲ್ಲಿ, “ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ನಮ್ಮಲ್ಲಿ ಏನೂ ಇಲ್ಲ, ನಮ್ಮಲ್ಲಿರುವುದು  ಭಾವನೆಗಳು ಮಾತ್ರ ಎಂದು ಹೇಳಿದ್ದರು. ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಮೋದಿ ಅವರು (ಆಚಾರ್ಯ ಪ್ರಮೋದ್ ಕೃಷ್ಣಂ) ಎಲ್ಲರಿಗೂ ಕೊಡಲು ಏನಾದರೂ ಇದೆ ಆದರೆ ನನ್ನ ಬಳಿ ಏನೂ ಇಲ್ಲ, ನಾನು ನನ್ನ ಭಾವನೆಗಳನ್ನು ವ್ಯಕ್ತಪಡಿಸಬಲ್ಲೆ ಎಂದು ಹೇಳಿದರು.

ಪ್ರಮೋದ್ ಜೀ, ನೀವು ನನಗೆ ಏನನ್ನೂ ನೀಡದಿರುವುದು ಒಳ್ಳೆಯದು, ಸಮಯ ಬದಲಾಗಿದೆ. ಇಂದಿನ ಯುಗದಲ್ಲಿ ಸುದಾಮನು ಶ್ರೀಕೃಷ್ಣನಿಗೆ ಅಕ್ಕಿ ಕೊಟ್ಟರೆ ಆ ವಿಡಿಯೊ ಹೊರಬಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಹಾಕಿ, ಶ್ರೀಕೃಷ್ಣನಿಗೆ ಏನೋ ಕೊಡಲಾಗಿದೆ, ಶ್ರೀಕೃಷ್ಣ ಭ್ರಷ್ಟಾಚಾರ ಮಾಡುತ್ತಿದ್ದಾನೆ ಎಂಬ ತೀರ್ಪು ಬರುತ್ತಿತ್ತು. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರಷ್ಟೇ ಸಾಕು. ಏನನ್ನೂ ನೀಡದಿರುವುದು ಉತ್ತಮ ಎಂದು ಹೇಳಿದ್ದಾರೆ.

ಮೋದಿ ಭಾಷಣ

ಕಲ್ಕಿಧಾಮ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಮೋದಿ, ಇಂದು ಸಂತರ ಶ್ರದ್ಧೆ ಹಾಗೂ ಸಾರ್ವಜನಿಕರ ಉತ್ಸಾಹದಿಂದ ಮತ್ತೊಂದು ಪುಣ್ಯಕ್ಷೇತ್ರದ ಶಂಕುಸ್ಥಾಪನೆ ನಡೆಯುತ್ತಿದ್ದು, ಆಚಾರ್ಯರು ಮತ್ತು ಸಂತರ ಸಮ್ಮುಖದಲ್ಲಿ ಭವ್ಯವಾದ ಕಲ್ಕಿ ಧಾಮದ ಶಂಕುಸ್ಥಾಪನೆ ಮಾಡುವ ಸೌಭಾಗ್ಯ ಸಿಕ್ಕಿದೆ. ಕಲ್ಕಿ ಧಾಮವು ಭಾರತೀಯ ನಂಬಿಕೆಯ ಮತ್ತೊಂದು ಶ್ರೇಷ್ಠ ಕೇಂದ್ರವಾಗಿ ಹೊರಹೊಮ್ಮುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಇದು ಸಾಂಸ್ಕೃತಿಕ ಪುನರುಜ್ಜೀವನದ ಅದ್ಭುತ ಕ್ಷಣವಾಗಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರದ ಭವ್ಯ ಉದ್ಘಾಟನೆ, ಅಬುಧಾಬಿಯಲ್ಲಿ ಮತ್ತೊಂದು ದೇವಾಲಯ, ಕಾಶಿ ವಿಶ್ವನಾಥ ದೇವಾಲಯದ ನವೀಕರಣ ಮತ್ತು ಕಾಶಿಯ ಪರಿವರ್ತನೆಯನ್ನು ನಾವು ನೋಡಿದ್ದೇವೆ. “ಯಾತ್ರಾ ಕೇಂದ್ರಗಳುಮತ್ತು ವೈದ್ಯಕೀಯ ಕಾಲೇಜುಗಳನ್ನು ಸಹ ನಿರ್ಮಿಸಲಾಗುತ್ತಿದೆ”. ಇದು ಭಾರತದ ಸಾಂಸ್ಕೃತಿಕ ಜಾಗೃತಿ ಮತ್ತು ಅಭಿವೃದ್ಧಿಯ ಕ್ಷಣ ಎಂದಿದ್ದಾರೆ ಮೋದಿ.

ಇದನ್ನೂ ಓದಿ: Shri Kalki Dham Temple: ಕಲ್ಕಿ ಧಾಮ್‌ ಶಂಕುಸ್ಥಾಪನೆ, ಇದು ನನಗೆ ಸಿಕ್ಕ ಸೌಭಾಗ್ಯ ಎಂದ ಪ್ರಧಾನಿ ಮೋದಿ

“ಜನವರಿ 22 ರಾಮ ಮಂದಿರವನ್ನು ತೆರೆದಾಗ, ಹೊಸ ಯುಗ, ಹೊಸ ಚಕ್ರದ ಆರಂಭವಾಗಿದೆ. ಕಲ್ಕಿ ದೇವಸ್ಥಾನವು ಭವಿಷ್ಯದ ಸಿದ್ಧತೆಯಾಗಿದೆ. ಇದು ಕಲ್ಕಿ ಅವತಾರದ ದೇವಾಲಯವಾಗಿದ್ದು, ವಿಷ್ಣುವಿನ ಎಲ್ಲಾ ಹತ್ತು ಅವತಾರಗಳಿಗೆ ಗರ್ಭಗುಡಿಯನ್ನು ಹೊಂದಿರುತ್ತದೆ, ”ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ