ಮಧ್ಯಪ್ರದೇಶ: ಗಂಡ ಹೆಂಡತಿ ಜಗಳ ನಡುವೆ ಹೆಂಡತಿಯ ಮೂಗು ಕಚ್ಚಿ ಓಡಿದ ಗಂಡ, ಪ್ರಕರಣ ದಾಖಲು

Madhya Pradesh: ದಿನೇಶ್ ಇತ್ತೀಚೆಗೆ ಟೀನಾಳ ಪೋಷಕರ ಮನೆಗೆ ಭೇಟಿ ನೀಡಿ ನಿರ್ವಹಣೆ ವಿಷಯದ ಬಗ್ಗೆ ಚರ್ಚಿಸಿದರು, ಮತ್ತು ಗಂಡ ಮತ್ತು ಹೆಂಡತಿ ನಡುವೆ ತೀವ್ರ ವಾಗ್ವಾದ ನಡೆಯಿತು. ಕೋಪಗೊಂಡ ದಿನೇಶ್ ತನ್ನ ಪುತ್ರಿಯರ ಮುಂದೆ ಟೀನಾ ಮೇಲೆ ಹಲ್ಲೆ ಮಾಡಿದನು ಮತ್ತು ಆಕೆಯ ಮೂಗನ್ನು ಕಚ್ಚಿದ್ದಾನೆ

ಮಧ್ಯಪ್ರದೇಶ: ಗಂಡ ಹೆಂಡತಿ ಜಗಳ ನಡುವೆ ಹೆಂಡತಿಯ ಮೂಗು ಕಚ್ಚಿ ಓಡಿದ ಗಂಡ, ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 27, 2021 | 12:06 PM

ರತ್ಲಾಮ್: ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಗಂಡ ಹೆಂಡತಿಜಗಳ ಮಧ್ಯೆ ಕೋಪಗೊಂಡ ಗಂಡ ಹೆಂಡತಿ ಮೂಗು ಕಚ್ಚಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ. ಸಂತ್ರಸ್ತೆ ಟೀನಾಳ ಪತಿ ದಿನೇಶ್ ಮಾಲಿಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಅಲೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲೋಟೆ ಪೊಲೀಸ್ ಠಾಣೆಯ ಪ್ರಭಾರಿ ನೀರಜ್ ಸರ್ವಾನ್ ಪ್ರಕಾರ, ದಿನೇಶ್ ಮತ್ತು ಟೀನಾ 2008 ರಲ್ಲಿ ಉಜ್ಜಯಿನಿಯಲ್ಲಿ ಮದುವೆಯಾದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತನ್ನ ಪತಿ ನಿರುದ್ಯೋಗಿ ಮತ್ತು ಮದ್ಯ ಸೇವಿಸಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮದುವೆಯಾದ ತಕ್ಷಣ ಟೀನಾ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದಳು. ಕಿರುಕುಳದಿಂದ ಬೇಸತ್ತು ಆಕೆ ತನ್ನ ಹೆಣ್ಣುಮಕ್ಕಳೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದು ಅಡುಗೆ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದಳು. 2019 ರಲ್ಲಿ ಆಕೆ ತನ್ನ ಪತಿಯಿಂದ ಕುಟುಂಬ ನಿರ್ವಹಣೆಯ ವೆಚ್ಚಕ್ಕೆ ಕೋರಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಳು.

ದಿನೇಶ್ ಇತ್ತೀಚೆಗೆ ಟೀನಾಳ ಪೋಷಕರ ಮನೆಗೆ ಭೇಟಿ ನೀಡಿ ನಿರ್ವಹಣೆ ವಿಷಯದ ಬಗ್ಗೆ ಚರ್ಚಿಸಿದರು, ಮತ್ತು ಗಂಡ ಮತ್ತು ಹೆಂಡತಿ ನಡುವೆ ತೀವ್ರ ವಾಗ್ವಾದ ನಡೆಯಿತು. ಕೋಪಗೊಂಡ ದಿನೇಶ್ ತನ್ನ ಪುತ್ರಿಯರ ಮುಂದೆ ಟೀನಾ ಮೇಲೆ ಹಲ್ಲೆ ಮಾಡಿದನು ಮತ್ತು ಆಕೆಯ ಮೂಗನ್ನು ಕಚ್ಚಿದ್ದಾನೆ. ಟೀನಾ ಮೂಗಿನಿಂದ ರಕ್ತಸ್ರಾವವಾಗುವುದನ್ನು ಗಮನಿಸಿದಾಗ ದಿನೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಟೀನಾ ಮತ್ತು ಆಕೆಯ ಹೆಣ್ಣು ಮಕ್ಕಳ ಕೂಗು ಕೇಳಿದ ನೆರೆಹೊರೆಯವರು ಸಹಾಯ ಮಾಡಲು ಬಂದು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಅಲೋಟೆ ಪೊಲೀಸ್ ಠಾಣೆಯ ಪ್ರಭಾರಿ ನೀರಜ್ ಸರ್ವಾನ್ ತಿಳಿಸಿದ್ದಾರೆ.

ಇದನ್ನೂ ಓದಿDigital Health Mission Launch: ಆಯುಷ್ಮಾನ್​ ಆರೋಗ್ಯ ಡಿಜಿಟಲ್​ ಮಿಷನ್​ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಇದನ್ನೂ ಓದಿ: ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ಮೋದಿಗೆ ಆತಿಥ್ಯ ನೀಡಿದ್ದು ಕುಂದಾಪುರದ ಆನಂದ ಪೂಜಾರಿ!

(Madhya Pradesh husband bit off wife’s nose in a fit of rage over a domestic dispute)

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ