ಮಧ್ಯಪ್ರದೇಶದಲ್ಲಿ ಭಾಗಶಃ ತಿಂದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ, ಹುಲಿ ದಾಳಿ ಶಂಕೆ
ಮಧ್ಯಪ್ರದೇಶದ ಅರಣ್ಯ ಪ್ರದೇಶದಲ್ಲಿ ಭಾಗಶಃ ತಿಂದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಗುರುವಾರ 62 ವರ್ಷದ ವ್ಯಕ್ತಿಯೊಬ್ಬರ ದೇಹವನ್ನು ಭಾಗಶಃ ತಿಂದು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಧ್ಯಪ್ರದೇಶದಲ್ಲಿ ಭಾಗಶಃ ತಿಂದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ದೇಹ ಪತ್ತೆಯಾಗಿದ್ದು, ಹುಲಿ ದಾಳಿ ಶಂಕೆ ವ್ಯಕ್ತಪಡಿಸಲಾಗಿದೆ. ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಗುರುವಾರ 62 ವರ್ಷದ ವ್ಯಕ್ತಿಯೊಬ್ಬರ ದೇಹವನ್ನು ಭಾಗಶಃ ತಿಂದು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮನುಷ್ಯನನ್ನು ಹುಲಿ ಅಥವಾ ಚಿರತೆ ಕೊಂದಿದೆಯೇ ಎಂದು ಅರಣ್ಯ ಇಲಾಖೆ ಘೋಷಿಸದಿದ್ದರೂ, ಸ್ಥಳೀಯರು ಇದು ಹುಲಿ ದಾಳಿಯೇ ಇರಬೇಕು ಎಂದು ಅಂದಾಜಿಸುತ್ತಿದ್ದಾರೆ.
ಈ ಪ್ರದೇಶದಲ್ಲಿ ಹುಲಿಯು ಮನುಷ್ಯನನ್ನು ಭಾಗಶಃ ತಿಂದು ಹಾಕಿರುವ ಘಟನೆ ಇದೇ ಮೊದಲ ಬಾರಿಗೆ ವರದಿಯಾಗಿದೆ. ಮೃತವ್ಯಕ್ತಿಯನ್ನು ನೀಮ್‌ಖೇಡ ಗ್ರಾಮದ ನಿವಾಸಿ ಮಣಿರಾಮ್ ಜಾತವ್ ಎಂದು ಗುರುತಿಸಲಾಗಿದೆ ಕೆಲಸದ ನಿಮಿತ್ತ ಪಕ್ಕದ ಗ್ರಾಮಕ್ಕೆ ಹೋದಾಗ ಘಟನೆ ನಡೆದಿದೆ. ಮಧ್ಯಾಹ್ನದವರೆಗೂ ವಾಪಸ್ ಬಾರದೆ ಇದ್ದಾಗ ಮನೆಯವರು ಹುಡುಕಾಟ ನಡೆಸಿದ್ದಾರೆ.
ಮತ್ತಷ್ಟು ಓದಿ:ಹಾಸನದಲ್ಲಿ ಚಿರತೆ ದಾಳಿಗೆ ಹಸು ಬಲಿ, ಮೂರು ಹಸುಗಳಿಗೆ ಗಂಭೀರ ಗಾಯ, ಕೋಲಾರದಲ್ಲಿ ಕರು ತಿಂದ ಚಿರತೆ!
ಗುರುವಾರ ಸಂಜೆ ಅರಣ್ಯ ಪ್ರದೇಶದಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಜಾತವ್ ಶವ ಪತ್ತೆಯಾಗಿದೆ. ತಜ್ಞರ ಪ್ರಕಾರ, ಅವರ ದೇಹದ ಮೇಲಿನ ಗಾಯಗಳು ಅವನನ್ನು ಹುಲಿ ಕೊಂದು ತಿಂದಿದೆ ಎಂದು ಸೂಚಿಸುತ್ತದೆ.
ಸ್ಥಳೀಯರ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದ ನೀಮಖೇಡ ಗ್ರಾಮದ ಸಮೀಪವಿರುವ ಕಾಡಿನಲ್ಲಿ ಕನಿಷ್ಠ ಎರಡು ಹುಲಿಗಳು ಸುತ್ತಾಡುತ್ತಿರುವುದನ್ನು ಅವರು ನೋಡಿದ್ದಾರೆ.
ಮುಂದಿನ ದಿನಗಳಲ್ಲಿ ಅರಣ್ಯಕ್ಕೆ ಹೋಗದಂತೆ ಸ್ಥಳೀಯರಿಗೆ ಎಚ್ಚರಿಕೆಯನ್ನೂ ನೀಡಲಾಯಿತು. ಮೃತರ ಸಂಬಂಧಿಕರಿಗೆ ಎಂಟು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.
ಈ ಪ್ರದೇಶದಲ್ಲಿ ಕಳೆದ ಹಲವು ದಶಕಗಳಲ್ಲಿ ಹುಲಿ ಮನುಷ್ಯನನ್ನು ಕೊಂದಿರು ಘಟನೆ ವರದಿಯಾಗಿಲ್ಲ. ಆದಾಗ್ಯೂ, ಜನವರಿ 2021 ರಲ್ಲಿ, ಬುಧವಾರದ ಘಟನೆ ನಡೆದ ನೀಮ್ಖೇಡ ಗ್ರಾಮದಿಂದ ಸುಮಾರು 10 ಕಿಮೀ ದೂರದಲ್ಲಿರುವ ಗೋಪಿ ಸೂರ್ ಗ್ರಾಮದಲ್ಲಿ 12 ವರ್ಷದ ಬಾಲಕಿಯನ್ನು ಚಿರತೆ ಕೊಂದಿತ್ತು. ಬಾಲಕಿಯನ್ನು ಕೊಂದ ಚಿರತೆ ಆಕೆಯನ್ನು ತಿಂದಿರಲಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ