ವಿಕಾಸ ಯಾತ್ರೆ ಕಾರ್ಯಕ್ರಮದ ಮಧ್ಯೆ, ಕುರ್ತಾ ಬಿಚ್ಚಿ, ನೀರಿನಿಂದ ಮೈತೊಳೆದುಕೊಂಡ ಬಿಜೆಪಿ ಸಚಿವ

ಮಧ್ಯಪ್ರದೇಶದ ಮುಂಗೋಲಿಯಲ್ಲಿ ಬಿಜೆಪಿಯ ವಿಕಾಸ ಯಾತ್ರೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಬಿಜೆಪಿ ಸಚಿವರೊಬ್ಬರು ಏಕಾಏಕಿ ಕುರ್ತಾವನ್ನು ಬಿಚ್ಚಿ, ನೀರಿನಿಂದ ಮೈತೊಳೆದುಕೊಂಡಿರುವ ಘಟನೆ ನಡೆದಿದೆ.

ವಿಕಾಸ ಯಾತ್ರೆ ಕಾರ್ಯಕ್ರಮದ ಮಧ್ಯೆ, ಕುರ್ತಾ ಬಿಚ್ಚಿ, ನೀರಿನಿಂದ ಮೈತೊಳೆದುಕೊಂಡ ಬಿಜೆಪಿ ಸಚಿವ
ಮಧ್ಯಪ್ರದೇಶ ಬಿಜೆಪಿ ಸಚಿವ ಬ್ರಜೇಂದ್ರ ಸಿಂಗ್ ಯಾದವ್
Follow us
ನಯನಾ ರಾಜೀವ್
|

Updated on: Feb 10, 2023 | 10:15 AM

ಮಧ್ಯಪ್ರದೇಶದ ಮುಂಗೋಲಿಯಲ್ಲಿ ಬಿಜೆಪಿವಿಕಾಸ ಯಾತ್ರೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಬಿಜೆಪಿ ಸಚಿವರೊಬ್ಬರು ಏಕಾಏಕಿ ಕುರ್ತಾವನ್ನು ಬಿಚ್ಚಿ, ನೀರಿನಿಂದ ಮೈತೊಳೆದುಕೊಂಡಿರುವ ಘಟನೆ ನಡೆದಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೇದಿಕೆಯಲ್ಲಿರುವಾಗ ಸಚಿವ ಬ್ರಿಜೇಂದ್ರ ಸಿಂಗ್ ಯಾದವ್​ಗೆ ಮೈಯಲ್ಲಿ ತುರಿಕೆ ಶುರುವಾಯಿತು, ಅದು ಹೆಚ್ಚಾದ ಕಾರಣ ಅನಿವಾರ್ಯವಾಗಿ ಕುರ್ತಾವನ್ನು ತೆಗೆದು ಮೈ ತೊಳೆದುಕೊಳ್ಳಬೇಕಾಯಿತು, ಬಳಿಕವೂ ತುರಿಕೆ ಕಡಿಮೆಯಾಗದ ಕಾರಣ, ಕಾರ್ಯಕ್ರಮವನ್ನು ಅರ್ಧದಲ್ಲೇ ಬಿಟ್ಟು ಊರಿಗೆ ತೆರಳಿದರು.

ಬಿಜೆಪಿ ವಿಕಾಸ ಯಾತ್ರೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಫೆ.12 ರಂದು ವಿಕಾಸ ಯಾತ್ರೆಗೆ ಚಾಲನೆ ನೀಡಿದ್ದರು. ಅದು ಫೆ.25ರವರೆಗೆ ನಡೆಯಲಿದೆ. ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವ ಸಲುವಾಗಿ, ಯೋಜನೆಗಳ ಬಗ್ಗೆ ಫಲಾನುಭವಿಗಳಿಗೆ ಜಾಗೃತಿ ಮೂಡಿಸಲಾಗುತ್ತದೆ.

ಮತ್ತಷ್ಟು ಓದಿ: Tripura Elections 2023: 2018ರಲ್ಲಿ ಸೋತ 5 ಕ್ಷೇತ್ರಗಳೂ ಸೇರಿ ತ್ರಿಪುರದ 13 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಸ್ಪರ್ಧೆ

ಸಚಿವ ಬ್ರಿಜೇಂದ್ರ ಸಿಂಗ್ ಯಾದವ್ ಸಂಜೆ ತಮ್ಮ ಕ್ಷೇತ್ರ ಮುಂಗಾವಲಿಗೆ ಭೇಟಿ ನೀಡಿದ್ದರು. ಅವರು ದೇವರ್ಚಿ ಗ್ರಾಮವನ್ನು ತಲುಪಿದಾಗ, ಯಾರೂ ತುರಿಕೆ ಪುಡಿಯನ್ನು ಅವರ ಮೈಗೆ ಎರಚಿದ್ದರು, ಇದರಿಂದ ಸಚಿವರ ಕೈ ಸೇರಿದಂತೆ ದೇಹದ ನಾನಾ ಭಾಗಗಳಲ್ಲಿ ತುರಿಕೆ ಶುರುವಾಗಿತ್ತು. ತುರಿಕೆ ತೀವ್ರವಾಗಿ ಆರಂಭವಾದ ತಕ್ಷಣ ಸುತ್ತಮುತ್ತಲಿನವರು ಸಚಿವರ ಬಟ್ಟೆ ಬಿಚ್ಚಿಸಿ ನೀರಿನಿಂದ ಮೈ ತೊಳೆದಿದ್ದಾರೆ. ಆದರೆ ಈ ಕೆಲಸ ಯಾರು ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪೌಡರ್ ಅನ್ನು ಸ್ಪರ್ಶಿಸಿದಾಗ ಅಥವಾ ದೇಹದ ಯಾವುದೇ ಭಾಗ ಮತ್ತು ಬಟ್ಟೆಯ ಸಂಪರ್ಕಕ್ಕೆ ಬಂದಾಗ ತೀವ್ರವಾದ ತುರಿಕೆ ಇರುತ್ತದೆ. ವಿಶೇಷವೆಂದರೆ ತುರಿಕೆ ಹೆಚ್ಚುತ್ತಲೇ ಇರುತ್ತದೆ. ಈ ತುರಿಕೆ ಗಿಡದ ಕಾಯಿಗಳ ಪುಡಿಯನ್ನು ಸಚಿವರ ಬಟ್ಟೆಯ ಮೇಲೆ ಲೇಪಿಸಲಾಗಿದೆ, ಇದರಿಂದ ಇಡೀ ದೇಹದಲ್ಲಿ ತುರಿಕೆ ಉಂಟಾಗಿ ಕಾರ್ಯಕ್ರಮ ಬಿಟ್ಟು ಹೋಗಬೇಕಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಬಾಡಿಗೆ ಮನೆಯಲ್ಲಿದ್ದೇನೆ, ಸಂಭಾವನೆಯಿಂದ ಸಾಲ ತೀರಿಸ್ತೀನಿ: ತ್ರಿವಿಕ್ರಮ್
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ರೇಗುವುದು ಯಾಕೆ?
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಬಿಜೆಪಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಪಕ್ಷವಾಗಿ ಬೆಳೆದಿದೆ: ಸಂಸದ
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಹನುಮಂತುಗೆ ಹೊಡೆದರೂ ಭವ್ಯಾನ ಹೊರಗೆ ಹಾಕಲಿಲ್ಲ ಯಾಕೆ? ಮಂಜು ಹೇಳಿದ್ದೇನು?
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ಜಲಮಂಡಳಿ ನಿರ್ವಹಣೆಗೆ ಹಣ ಹೊಂದಿಸಲಾಗುತ್ತಿಲ್ಲ, ದರಯೇರಿಕೆ ಅನಿವಾರ್ಯ: ಸಚಿವ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ವಲಸಿಗರ ವಿಚಾರದಲ್ಲಿ ಭಾರತ ಸೂಕ್ತ ಕ್ರಮ ಕೈಗೊಳ್ಳಲಿದೆ; ಟ್ರಂಪ್ ಹೇಳಿಕೆ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಇಕ್ಬಾಲ್ ಹುಸ್ಸೇನ್ ಹೇಳಿಕೆಗೆ ಕೌಂಟರ್ ನೀಡಿದ ಸಚಿವ ರಾಜಣ್ಣ
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
ಕಾಂಗ್ರೆಸ್ ಪಕ್ಷ ಒಂದು ಸಿಟಿ ಬಸ್​ನಂತೆ, ಯಾರು ಬೇಕಾದರೂ ಹತ್ತಬಹುದು: ಲಾಡ್
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ
150 ರೂ.ಗೆ ಕೆಲಸ ಮಾಡಿದ್ದ ಉಗ್ರಂ ಮಂಜು; ಬಿಗ್ ಬಾಸ್​ನಿಂದ ದೊಡ್ಡ ಸಂಭಾವನೆ
ಹುಡುಗಿ ಯಾರೇ ಆದರೂ ಬಂಜಾರಾ ಸಂಪ್ರದಾಯದಂತೆ ಮದುವೆ: ಮಾರುತಿ
ಹುಡುಗಿ ಯಾರೇ ಆದರೂ ಬಂಜಾರಾ ಸಂಪ್ರದಾಯದಂತೆ ಮದುವೆ: ಮಾರುತಿ