ಪ್ರಯಾಗ್ರಾಜ್: ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸಲಾಗುವ ಮಹಾಕುಂಭ ಮೇಳವು ಅತ್ಯಂತ ಪ್ರಮುಖ ಮತ್ತು ಆಧ್ಯಾತ್ಮಿಕವಾಗಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಫೆಬ್ರವರಿ 13ರಿಂದ ಫೆಬ್ರವರಿ 26ರವರೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭವು ನಡೆಯಲಿದೆ. ತ್ರಿವೇಣಿ ಸಂಗಮವಾದ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಈ ನಂಬಿಕೆಯ ಧಾರ್ಮಿಕ ಕ್ರಿಯೆಯು ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತು ವಿಮೋಚನೆಯನ್ನು ನೀಡುತ್ತದೆ ಎಂದು ನಂಬಲಾಗಿದೆ.
ಮಹಾ ಕುಂಭಮೇಳ:
ಮಹಾ ಕುಂಭದ ಮೂಲವು ಹಿಂದೂ ಪುರಾಣಗಳ ಜೊತೆ ಸಂಪರ್ಕ ಹೊಂದಿದೆ. ವಿಶೇಷವಾಗಿ ಸಮುದ್ರ ಮಂಥನದ ಕಥೆಯೊಂದಿಗೆ ಇದರ ಲಿಂಕ್ ಇದೆ. ದಂತಕಥೆಯ ಪ್ರಕಾರ, ಪ್ರಯಾಗರಾಜ್ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಸಮುದ್ರ ಮಂಥನದ ವೇಳೆ ನೀರು ಬಿದ್ದಿತು. ಹೀಗಾಗಿ, ಮಹಾ ಕುಂಭದ ಸಮಯದಲ್ಲಿ ಈ ನೀರಿನಲ್ಲಿ ಸ್ನಾನ ಮಾಡುವುದು ಪಾಪಗಳನ್ನು ತೆಗೆದುಹಾಕುತ್ತದೆ, ಆತ್ಮವನ್ನು ಶುದ್ಧೀಕರಿಸುತ್ತದೆ ಮತ್ತು ಮೋಕ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಭಾವಿಸಲಾಗಿದೆ.
ಇದನ್ನೂ ಓದಿ: ನನ್ನ ಹೆಂಡತಿ ಗರ್ಭಿಣಿ; ಒಂದೇ ಕಾರಣ ನೀಡಿ ಮಹಾಕುಂಭ ಮೇಳದ ಕರ್ತವ್ಯದಿಂದ ರಜೆ ಕೇಳಿದ 700 ಪೊಲೀಸರು
ಕುಂಭ ಮೇಳ:
ಮಹಾ ಕುಂಭವನ್ನು 12 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಇದು 12 ವರ್ಷಗಳ ಕುಂಭಮೇಳದ 12 ಚಕ್ರಗಳನ್ನು ಪೂರ್ಣಗೊಳಿಸುತ್ತದೆ. ಈ ಮಂಗಳಕರ ಸಂದರ್ಭದಲ್ಲಿ ನೀರಿನಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ಹಿಂದೂಗಳಲ್ಲಿ ನಂಬಿಕೆಯಿದೆ.
ಇದಕ್ಕೆ ವಿರುದ್ಧವಾಗಿ, ಕುಂಭಮೇಳವು ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. 4 ಪವಿತ್ರ ನಗರಗಳಾದ ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಗಳ ನಡುವೆ ಈ ಕುಂಭ ಮೇಳ ನಡೆಯುತ್ತದೆ. ಕುಂಭಮೇಳವು ಮಹತ್ವದ್ದಾಗಿದೆ. ಆದರೆ ಮಹಾ ಕುಂಭ ಮತ್ತು ಅರ್ಧ ಕುಂಭಕ್ಕೆ ಹೋಲಿಸಿದರೆ ಇದು ಚಿಕ್ಕದಾಗಿದೆ. ಅರ್ಧ ಕುಂಭ ಮೇಳ ಪ್ರತಿ 6 ವರ್ಷಗಳಿಗೊಮ್ಮೆ ನಡೆಯುತ್ತದೆ. ಮತ್ತೊಂದೆಡೆ, ಮಹಾ ಕುಂಭವು ಅದರ ಅಗಾಧ ಗಾತ್ರ ಮತ್ತು ಆಧ್ಯಾತ್ಮಿಕ ಮಹತ್ವದ ಕಾರಣದಿಂದ ಹೆಚ್ಚಿನ ಸಂಖ್ಯೆಯ ಯಾತ್ರಿಕರನ್ನು ಆಕರ್ಷಿಸುತ್ತದೆ.
ಇದನ್ನೂ ಓದಿ: Kumbh Mela: 1.6 ಲಕ್ಷ ಟೆಂಟ್, 1.5 ಲಕ್ಷ ಶೌಚಾಲಯ, 67,000 ಎಲ್ಇಡಿ ಲೈಟ್; ಕುಂಭಮೇಳಕ್ಕೆ ಯೋಗಿ ಸರ್ಕಾರದಿಂದ ಭಾರೀ ಸಿದ್ಧತೆ
ಡಿಜಿಟಲ್ ಯುಗದಲ್ಲಿ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಉತ್ತರ ಪ್ರದೇಶ ಪೊಲೀಸರು ಮಹಾಕುಂಭದ ಸಮಯದಲ್ಲಿ ಸೈಬರ್ ಅಪರಾಧವನ್ನು ಎದುರಿಸಲು ಸಮಗ್ರ ಕಾರ್ಯತಂತ್ರವನ್ನು ಜಾರಿಗೆ ತರುತ್ತಿದ್ದಾರೆ. ಇತ್ತೀಚೆಗೆ ಪ್ರಯಾಗ್‌ರಾಜ್‌ನಲ್ಲಿರುವ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ (ಐಸಿಸಿಸಿ) ಉನ್ನತ ಮಟ್ಟದ ಸಭೆಯನ್ನು ನಡೆಸಲಾಯಿತು. ಇದರಲ್ಲಿ ಸೈಬರ್ ತಜ್ಞರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಮಹಾಕುಂಭದ ಸಮಯದಲ್ಲಿ ಸೈಬರ್ ಅಪರಾಧವನ್ನು ಎದುರಿಸಲು ನಾವು ಪೊಲೀಸ್ ಅಧಿಕಾರಿಗಳು ಮಾತ್ರವಲ್ಲದೆ ಐಐಟಿ-ಕಾನ್ಪುರದಂತಹ ಸಂಸ್ಥೆಗಳ ಸೈಬರ್ ತಜ್ಞರನ್ನೂ ಒಳಗೊಂಡ ಬಹುಮುಖ ಕಾರ್ಯತಂತ್ರವನ್ನು ರೂಪಿಸಿದ್ದೇವೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:29 pm, Fri, 3 January 25