ಕೊರೊನಾ ಲಸಿಕೆ ಹಂಚಿಕೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ CoWIN ಆ್ಯಪ್ ಪರಿಚಯಿಸಿದೆ. CoWIN ಮತ್ತು ಆರೋಗ್ಯ ಸೇತು ಆ್ಯಪ್ನಲ್ಲಿ ಹೆಸರು ನೋಂದಾಯಿಸಿಕೊಂಡು ಲಸಿಕೆ ಪಡೆಯಬೇಕು ಎಂದು ಹೇಳಿದೆ. ಹಾಗೇ, ದೇಶದ ಜನರು ಇದೆರಡು ಆ್ಯಪ್ಗಳ ಮೂಲಕ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಹೆಚ್ಚಿನವರು CoWIN ಆ್ಯಪ್ ಮೂಲಕ ನೋಂದಣಿ ಮಾಡಲು ಮುಂದಾಗುತ್ತಿದ್ದಾರೆ. ಹೀಗಿರುವಾಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಮಗೆ ಲಸಿಕೆ ವಿತರಣೆಗೆ ಸಂಬಂಧಪಟ್ಟಂತೆ ಪ್ರತ್ಯೇಕ ಆ್ಯಪ್ ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಕೇಂದ್ರಸರ್ಕಾರವನ್ನು ಕೇಳಿದ್ದಾರೆ.
CoWIN ಆ್ಯಪ್ನಲ್ಲಿ ದೋಷಗಳಿವೆ. ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹಾಗಾಗಿ ನಾವು ನಮ್ಮ ರಾಜ್ಯದಲ್ಲಿ ಬೇರೆ ಆ್ಯಪ್ನ್ನು ಜನರಿಗೆ ಪರಿಚಯಿಸಲು ನಿರ್ಧರಿಸಿದ್ದೇವೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಇದು ಕೇವಲ ಮಹಾರಾಷ್ಟ್ರ ಮುಖ್ಯಮಂತ್ರಿಯ ದೂರಲ್ಲ. ಇದನ್ನು ಡೌನ್ಲೋಡ್ ಮಾಡಿಕೊಂಡು ಲಸಿಕೆಗಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಲು ಮುಂದಾದ ಅನೇಕ ಬಳಕೆದಾರರು ಆ್ಯಪ್ನಲ್ಲಿ ಸಮಸ್ಯೆ ಇದೆ ಎಂದು ಕಂಪ್ಲೇಂಟ್ ಮಾಡಿದ್ದಾರೆ. ನಾವು ಹೆಸರು ರಿಜಿಸ್ಟರ್ ಮಾಡಿರುತ್ತೇವೆ. ಆದರೆ ನಮ್ಮ ಅಪಾಯಿಂಟ್ಮೆಂಟ್ ಮಿಸ್ ಆಗಿರುತ್ತದೆ. ಆದಾಗ್ಯೂ ನೀವು ಲಸಿಕೆ ಪಡೆದಿದ್ದೀರಿ ಎಂದು ನೋಟಿಫಿಕೇಶನ್ ಬರುತ್ತದೆ ಎಂದು ಹಲವರು ಹೇಳಿದ್ದಾರೆ. ಹಲವು ದೂರುಗಳು ಬಂದ ಬಳಿಕ ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯ 4 ಡಿಜಿಟ್ಗಳ ಒಂದು ಸೆಕ್ಯೂರಿಟಿ ಕೋಡ್ನ ಫೀಚರ್ನ್ನು ಕೊವಿನ್ ಪೋರ್ಟಲ್ನಲ್ಲಿ ಅಳವಡಿಸಿದೆ. ಹಾಗೇ ಈ ಸೆಕ್ಯೂರಿಟಿ ಕೋಡ್ನಿಂದಾಗಿ ಆನ್ಲೈನ್ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುವ, ಅಪಾಯಿಂಟ್ಮೆಂಟ್ ಪಡೆಯುವ ವಿಧಾನಗಳಲ್ಲಿ ದೋಷ ಕಂಡುಬರುವ ಪ್ರಮಾಣ ತುಂಬ ಕಡಿಮೆ ಆಗಲಿದೆ ಎಂದೂ ಹೇಳಿಕೊಂಡಿದೆ.
ಸದ್ಯ ದೇಶದ ಎಲ್ಲ ಕಡೆಗಳಲ್ಲೂ ಅನ್ವಯ ಆಗುವಂತೆ ಕೇಂದ್ರ ಸರ್ಕಾರ ಒಂದೇ ಆ್ಯಪ್ನ್ನು ಬಳಕೆಗೆ ನೀಡಿದ್ದು, ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ತಾವು ಪ್ರತ್ಯೇಕ ಆ್ಯಪ್ ಬಳಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅತಿಹೆಚ್ಚಾಗಿದ್ದು, ದೇಶದಲ್ಲಿ ಒಂದು ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಶೇ.71.81ರಷ್ಟು ಮಹಾರಾಷ್ಟ್ರದಿಂದಲೇ ವರದಿಯಾಗುತ್ತಿದೆ.
ಇದನ್ನೂ ಓದಿ: ಅಮೇರಿಕಾದ ಹ್ಯಾರಿಸ್ಬರ್ಗ್ ವಿಶ್ವವಿದ್ಯಾಲಯ ಜತೆ ಕರ್ನಾಟಕ ವಿಶ್ವವಿದ್ಯಾಲಯದ ಒಪ್ಪಂದ; ವರ್ಚುವಲ್ ಮೂಲಕ ಸಹಿ