Johnson & Johnson: ಮಹಾರಾಷ್ಟ್ರದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಲೈಸೆನ್ಸ್ ರದ್ದು
ಪ್ರಯೋಗಾಲಯದಲ್ಲಿ ಈ ಪೌಡರ್‌ನ ಪರೀಕ್ಷೆ ಮಾಡಿದ ನಂತರ ಎಫ್‌ಡಿಎ ಡ್ರಗ್ಸ್ ಕಾಸ್ಮೆಟಿಕ್ಸ್ ಆಕ್ಟ್ 1940 ಮತ್ತು ನಿಯಮಗಳ ಅಡಿಯಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್‌ಗೆ ಶೋಕಾಸ್ ನೋಟಿಸ್ ನೀಡಿದೆ.
ಮುಂಬೈ: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಜಾನ್ಸನ್ ಆ್ಯಂಡ್ ಜಾನ್ಸನ್ (Johnson & Johnson) ಪ್ರೈವೇಟ್ ಲಿಮಿಟೆಡ್‌ನ ಬೇಬಿ ಪೌಡರ್ ಉತ್ಪಾದನೆಯ ಲೈಸೆನ್ಸ್ ಅನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧಗಳ ಆಡಳಿತ (ಎಫ್‌ಡಿಎ) ರದ್ದುಗೊಳಿಸಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಉತ್ಪನ್ನವಾದ ಜಾನ್ಸನ್ ಬೇಬಿ ಪೌಡರ್ ನವಜಾತ ಶಿಶುಗಳ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯೋಗಾಲಯದ ಪರೀಕ್ಷೆಯ ಸಮಯದಲ್ಲಿ ಶಿಶುಗಳಿಗೆ ಈ ಪೌಡರ್‌ನ ಮಾದರಿಗಳು ಪ್ರಮಾಣಿತ ಪಿಹೆಚ್ ಮೌಲ್ಯಕ್ಕೆ ಅನುಗುಣವಾಗಿಲ್ಲ ಎಂದು ತಿಳಿದುಬಂದಿದೆ ಎನ್ನಲಾಗಿದೆ. ಕೊಲ್ಕತ್ತಾ ಮೂಲದ ಸೆಂಟ್ರಲ್ ಡ್ರಗ್ಸ್ ಲ್ಯಾಬೊರೇಟರಿಯ ನಿರ್ಣಾಯಕ ವರದಿಯ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಪೌಡರ್ ಗುಣಮಟ್ಟದ ತಪಾಸಣೆಯ ಉದ್ದೇಶಗಳಿಂದ ಎಫ್‌ಡಿಎ ಪುಣೆ ಮತ್ತು ನಾಸಿಕ್‌ನಿಂದ ಜಾನ್ಸನ್ ಬೇಬಿ ಪೌಡರ್‌ನ ಮಾದರಿಗಳನ್ನು ಪಡೆದುಕೊಂಡಿತ್ತು.
Maharashtra Food & Drugs Administration has cancelled the manufacturing license of Johnson’s Baby Powder of Johnson’s & Johnson’s Pvt. Ltd., Mulund, Mumbai after samples of the powder drawn at Pune & Nashik were declared “Not of Standard Quality” by the govt pic.twitter.com/4iFIdNd9RI
— ANI (@ANI) September 16, 2022
ಇದನ್ನೂ ಓದಿ: 2023ರಲ್ಲಿ ಜಾಗತಿಕ ಮಟ್ಟದಲ್ಲಿ ಬೇಬಿ ಪೌಡರ್ ಮಾರಾಟ ನಿಲ್ಲಿಸಲಿದೆ ಜಾನ್ಸನ್ ಆಂಡ್ ಜಾನ್ಸನ್
ಪ್ರಯೋಗಾಲಯದಲ್ಲಿ ಈ ಪೌಡರ್‌ನ ಪರೀಕ್ಷೆ ಮಾಡಿದ ನಂತರ ಎಫ್‌ಡಿಎ ಡ್ರಗ್ಸ್ ಕಾಸ್ಮೆಟಿಕ್ಸ್ ಆಕ್ಟ್ 1940 ಮತ್ತು ನಿಯಮಗಳ ಅಡಿಯಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್‌ಗೆ ಶೋಕಾಸ್ ನೋಟಿಸ್ ನೀಡಿದೆ. ಹಾಗೇ, ಮಾರುಕಟ್ಟೆಯಿಂದ ಈ ಉತ್ಪನ್ನದ ಸ್ಟಾಕ್ ಅನ್ನು ಹಿಂಪಡೆಯಲು ಕಂಪನಿಗೆ ಸೂಚನೆಗಳನ್ನು ನೀಡಿದೆ. ಈ ಆದೇಶವನ್ನು ಪ್ರಶ್ನಿಸಿ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ಈಗ ಕೋರ್ಟ್ ಮೆಟ್ಟಿಲೇರಿದೆ.