ಮಹಾರಾಷ್ಟ್ರ: ಸ್ಲೀಪರ್ ಬಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿ ಕಿಟಕಿಯಿಂದ ಶಿಶುವನ್ನು ಎಸೆದ ಮಹಿಳೆ

ಬಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿ ಕಿಟಕಿಯಿಂದ ಶಿಶುವನ್ನು ಹೊರಗೆಸೆದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ 6.30 ರ ಸುಮಾರಿಗೆ ಪತ್ರಿ-ಸೇಲು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಪೊಲೀಸರ ಪ್ರಕಾರ, ಯುವತಿ ಮತ್ತು ಆಕೆಯ ಸಹಚರರು ಸಂತ ಪ್ರಯಾಗ್ ಟ್ರಾವೆಲ್ಸ್ ಸ್ಲೀಪರ್ ಕೋಚ್ ಬಸ್‌ನಲ್ಲಿ ಪುಣೆಯಿಂದ ಪರ್ಭಾನಿಗೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ಸಮಯದಲ್ಲಿ, ರಿತಿಕಾ ಧೇರೆ ಎಂದು ಗುರುತಿಸಲಾದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಬಸ್ಸಿನೊಳಗೆ ಮಗುವಿಗೆ ಜನ್ಮ ನೀಡಿದರು. ಅವರ ಜೊತೆ ಆಕೆಯ ಪತಿ ಎಂದು ಹೇಳಿಕೊಂಡ ಅಲ್ತಾಫ್ ಶೇಖ್ ಕೂಡ ಇದ್ದ.

ಮಹಾರಾಷ್ಟ್ರ: ಸ್ಲೀಪರ್ ಬಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿ ಕಿಟಕಿಯಿಂದ ಶಿಶುವನ್ನು ಎಸೆದ ಮಹಿಳೆ
ಮಗು-ಸಾಂದರ್ಭಿಕ ಚಿತ್ರ
Image Credit source: Adobe Stock

Updated on: Jul 16, 2025 | 11:21 AM

ಮಹಾರಾಷ್ಟ್ರ, ಜುಲೈ 16: ಚಲಿಸುತ್ತಿರುವ ಬಸ್ಸಿನಲ್ಲೇ ಮಗು(Baby)ವಿಗೆ ಜನ್ಮ ನೀಡಿದ್ದ  ಮಹಿಳೆ ಪತಿಯ ಸಹಾಯದಿಂದ ಕಿಟಕಿಯಿಂದ ಮಗುವನ್ನು ಎಸೆದಿರುವ ಘಟನೆ ಮಹಾರಾಷ್ಟ್ರದ ಪರ್ಭಾನಿಯಲ್ಲಿ ನಡೆದಿದೆ. ಚಲಿಸುತ್ತಿರುವ ಸ್ಲೀಪರ್​ ಬಸ್ಸಿನಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ, ಪತಿ ಎಂದು ಹೇಳಿಕೊಂಡ ವ್ಯಕ್ತಿಯ ಸಹಾಯದಿಂದ ನವಜಾತ ಶಿಶುವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾರೆ. ಶಿಶು ಗಂಭೀರ ಗಾಯಗಳಿಂದಾಗಿ  ಸಾವನ್ನಪ್ಪಿದೆ.

ಮಂಗಳವಾರ ಬೆಳಗ್ಗೆ 6.30 ರ ಸುಮಾರಿಗೆ ಪತ್ರಿ-ಸೇಲು ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ಪೊಲೀಸರ ಪ್ರಕಾರ, ಯುವತಿ ಮತ್ತು ಆಕೆಯ ಸಹಚರರು ಸಂತ ಪ್ರಯಾಗ್ ಟ್ರಾವೆಲ್ಸ್ ಸ್ಲೀಪರ್ ಕೋಚ್ ಬಸ್‌ನಲ್ಲಿ ಪುಣೆಯಿಂದ ಪರ್ಭಾನಿಗೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ಸಮಯದಲ್ಲಿ, ರಿತಿಕಾ ಧೇರೆ ಎಂದು ಗುರುತಿಸಲಾದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಬಸ್ಸಿನೊಳಗೆ ಮಗುವಿಗೆ ಜನ್ಮ ನೀಡಿದರು. ಅವರ ಜೊತೆ ಆಕೆಯ ಪತಿ ಎಂದು ಹೇಳಿಕೊಂಡ ಅಲ್ತಾಫ್ ಶೇಖ್ ಕೂಡ ಇದ್ದ.

ಹೆರಿಗೆಯಾದ ಸ್ವಲ್ಪ ಸಮಯದ ನಂತರ, ದಂಪತಿ ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಬಸ್ಸಿನ ಕಿಟಕಿಯಿಂದ ಹೊರಗೆ ಎಸೆದಿದ್ದರು ಎಂದು ಆರೋಪಿಸಲಾಗಿದೆ. ಆರಂಭದಲ್ಲಿ, ಬಸ್ ಪ್ರಯಾಣದಿಂದ ಮಹಿಳೆ ವಾಂತಿ ಮಾಡಿಕೊಂಡಿದ್ದಾಳೆ ಎಂದು ಅವರು ಇತರ ಪ್ರಯಾಣಿಕರು ಮತ್ತು ಬಸ್ ಚಾಲಕರಿಗೆ ತಿಳಿಸಿದರು. ಬಸ್ಸಿನ ಹಿಂದೆ ಪ್ರಯಾಣಿಸುತ್ತಿದ್ದ ಮೋಟಾರ್ ಸೈಕಲ್ ಸವಾರನೊಬ್ಬ ಕಿಟಕಿಯಿಂದ ಅನುಮಾನಾಸ್ಪದವಾಗಿ ಏನೋ ಎಸೆದಿರುವುದನ್ನು ಗಮನಿಸಿದ್ದಾರೆ.

ಮತ್ತಷ್ಟು ಓದಿ:  ನವಜಾತ ಶಿಶು ಕೊಲೆ ಪ್ರಕರಣ: ಬಂಧಿತ ಮಹಿಳೆಯಿಂದ ಕ್ಷಣಕ್ಕೊಂದು ಹೇಳಿಕೆ; ಶಿಶು, ಮಹಿಳೆಯ ಡಿಎನ್​ಎ ಪರೀಕ್ಷೆಗೆ ನಿರ್ಧಾರ

 

ಬಟ್ಟೆಯಲ್ಲಿ ಸುತ್ತಿಕೊಂಡಿದ್ದ ನವಜಾತ ಶಿಶುವನ್ನು ಕಂಡು ಆಘಾತಕ್ಕೊಳಗಾಗಿ ತಕ್ಷಣ ತುರ್ತು ಸಹಾಯವಾಣಿ (112) ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು.

ಸ್ಥಳೀಯ ಪೊಲೀಸ್ ಗಸ್ತು ತಂಡವು ಬಸ್ ಅನ್ನು ತಡೆದು ಪ್ರಾಥಮಿಕ ವಿಚಾರಣೆಯ ನಂತರ ದಂಪತಿಯನ್ನು ಬಂಧಿಸಿತು. ವಿಚಾರಣೆಯ ಸಮಯದಲ್ಲಿ, ಮಗುವನ್ನು ಬೆಳೆಸಲು ತಮಗೆ ಸಾಧ್ಯವಿಲ್ಲ ಎಂದು ಹೇಳಿ ಮಗುವನ್ನು ಎಸೆದಿದ್ದಾಗಿ ಇಬ್ಬರೂ ಒಪ್ಪಿಕೊಂಡರು. ಚಲಿಸುವ ಬಸ್ಸಿನಿಂದ ಬಿದ್ದ ಪರಿಣಾಮ ಶಿಶು ಸಾವನ್ನಪ್ಪಿದೆ.

ದಂಪತಿ ಪತಿ-ಪತ್ನಿ ಎಂದು ಹೇಳಿಕೊಂಡು ಕಳೆದ ಒಂದೂವರೆ ವರ್ಷಗಳಿಂದ ಪುಣೆಯಲ್ಲಿ ವಾಸಿಸುತ್ತಿದ್ದರು ಆದರೆ ವೈವಾಹಿಕ ಸ್ಥಿತಿಯನ್ನು ದೃಢೀಕರಿಸುವ ಯಾವುದೇ ದಾಖಲೆಯನ್ನು ಅವರಿಗೆ ಪ್ರಸ್ತುತಪಡಿಸಲು ಸಾಧ್ಯವಾಗಿಲ್ಲ. ಘಟನೆಯ ನಂತರ ಮಹಿಳೆಯನ್ನು ಪೊಲೀಸರು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:18 am, Wed, 16 July 25

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us