AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ಬ್ರಿಡ್ಜ್​ ನಿರ್ಮಾಣಕ್ಕೆಂದು ತೋಡಿದ್ದ ಗುಂಡಿಗೆ ಬಿದ್ದು ನಾಲ್ವರು ಮಕ್ಕಳು ಸಾವು

ರೈಲ್ವೆ ಬ್ರಿಡ್ಜ್​​ ನಿರ್ಮಾಣಕ್ಕೆಂದು ತೋಡಿದ್ದ ಗುಂಡಿಯಲ್ಲಿ ನಾಲ್ವರು ಮಕ್ಕಳು ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ದರ್ವಾ ಪಟ್ಟಣದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಯೋಜನೆಗಾಗಿ ಅಗೆದಿದ್ದ  ನೀರು ತುಂಬಿದ ಗುಂಡಿಯಲ್ಲಿ ನಾಲ್ವರು ಅಪ್ರಾಪ್ತ ಬಾಲಕರು ಮುಳುಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ. ವರದಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಿರ್ಮಾಣ ಸ್ಥಳದಲ್ಲಿನ ಗುಂಡಿ ನೀರಿನಿಂದ ತುಂಬಿತ್ತು.

ರೈಲ್ವೆ ಬ್ರಿಡ್ಜ್​ ನಿರ್ಮಾಣಕ್ಕೆಂದು ತೋಡಿದ್ದ ಗುಂಡಿಗೆ ಬಿದ್ದು ನಾಲ್ವರು ಮಕ್ಕಳು ಸಾವು
ನೀರು
ನಯನಾ ರಾಜೀವ್
|

Updated on: Aug 21, 2025 | 10:23 AM

Share

ಮಹಾರಾಷ್ಟ್ರ, ಆಗಸ್ಟ್​ 21: ರೈಲ್ವೆ ಬ್ರಿಡ್ಜ್​​ ನಿರ್ಮಾಣಕ್ಕೆಂದು ತೋಡಿದ್ದ ಗುಂಡಿಯಲ್ಲಿ ನಾಲ್ವರು ಮಕ್ಕಳು ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ದರ್ವಾ ಪಟ್ಟಣದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಯೋಜನೆಗಾಗಿ ಅಗೆದಿದ್ದ  ನೀರು ತುಂಬಿದ ಗುಂಡಿಯಲ್ಲಿ ನಾಲ್ವರು ಅಪ್ರಾಪ್ತ ಬಾಲಕರು ಮುಳುಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ. ವರದಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಿರ್ಮಾಣ ಸ್ಥಳದಲ್ಲಿನ ಗುಂಡಿ ನೀರಿನಿಂದ ತುಂಬಿತ್ತು.

ಆ ಪ್ರದೇಶದ ನಾಲ್ವರು ಮಕ್ಕಳು ರೆಹಾನ್ ಅಸ್ಲಾಂ ಖಾನ್ (13), ಗೋಲು ಪಾಂಡುರಂಗ್ ನರ್ನವಾರೆ (10), ಸೌಮ್ಯ ಸತೀಶ್ ಖಾಡ್ಸನ್ (10) ಮತ್ತು ವೈಭವ್ ಆಶಿಶ್ ಬೋಧ್ಲೆ (14) ಸ್ಥಳದ ಬಳಿ ಆಟವಾಡಲು ಹೋಗಿದ್ದರು. ಏನೂ ಆಗಲ್ಲ ಎನ್ನುವ ಉತ್ಸಾಹದಲ್ಲಿ ಅವರೇ ಗುಂಡಿಗೆ ಹಾರಿದ್ದರು. ಆಳದ ಅರಿವಿಲ್ಲದ ಹುಡುಗರು ಕಷ್ಟಪಟ್ಟಿದ್ದರು. ಬಳಿಕ ಉಸಿರುಗಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ. ಸಹಾಯ ಮಾಡಲು ಸುತ್ತಲೂ ಯಾರೂ ಇಲ್ಲದ ಕಾರಣ, ನಾಲ್ವರೂ ದುರಂತವಾಗಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳೀಯರು ಬಾಲಕರನ್ನು ಹೊಂಡದಿಂದ ಹೊರತೆಗೆದು ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸಿದರು. ಆರಂಭದಲ್ಲಿ, ಅವರನ್ನು ಪ್ರಥಮ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ ಯಾವತ್ಮಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದಾಗ್ಯೂ, ನಾಲ್ವರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಮತ್ತಷ್ಟು ಓದಿ:  Karnataka Rains: ಭಾರಿ ಮಳೆಗೆ ಕರ್ನಾಟಕದಲ್ಲಿ 4 ಸಾವು, ಬೆಂಗಳೂರಿನಲ್ಲಿ ಇನ್ನೂ 3 ದಿನ ವರ್ಷಧಾರೆ

ಮುಂಬೈನಲ್ಲಿ ಮರ ಬಿದ್ದು ಒಬ್ಬರು ಸಾವನ್ನಪ್ಪಿದ್ದರು ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ. ನಾಂದೇಡ್‌ನಲ್ಲಿ ಪ್ರವಾಹದ ನೀರಿನಲ್ಲಿ ನಾಲ್ವರು ಕೊಚ್ಚಿ ಹೋಗಿದ್ದರೆ, ಮುಂಬೈನಲ್ಲಿ ಗೋಡೆ ಕುಸಿದು ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಸಿಂಧುದುರ್ಗದಲ್ಲಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದರು ಮತ್ತು ರಾಯಗಢದಲ್ಲಿ ಭೂಕುಸಿತ ಸಂಭವಿಸಿ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ