ಗೋವಾದಲ್ಲಿ ನನಗೆ ಅಧಿಕಾರ ಬೇಡ..ಆದರೆ ಕೇಂದ್ರ ಸರ್ಕಾರ ಇಲ್ಲಿ ದಾದಾಗಿರಿ ನಡೆಸಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ
ನಾನು ಗೋವಾಕ್ಕೆ ಹೊರಗಿನವಳು ಅಲ್ಲ. ಹಾಗಂತ ನನಗೆ ಇಲ್ಲಿನ ಸಿಎಂ ಹುದ್ದೆ ಬೇಡ. ದೆಹಲಿ ಸರ್ಕಾರ ಇಲ್ಲಿ ಗೂಂಡಾಗಿರಿ ನಡೆಸಲು ಬಿಡಬಾರದು ಎಂಬುದು ನನ್ನ ಉದ್ದೇಶ ಎಂದು ಕೊಂಕಣಿಯಲ್ಲೇ ಮಮತಾ ಬ್ಯಾನರ್ಜಿ ಮಾತನಾಡಿದರು.
ಗೋವಾದಲ್ಲಿ ಬರುವ ವರ್ಷ ಫೆಬ್ರವರಿ-ಮಾರ್ಚ್ನಲ್ಲಿ ವಿಧಾನಸಭೆ ಚುನಾವಣೆ (Goa Assembly Elections) ನಡೆಯಲಿದೆ. ಈ ಚುನಾವಣೆ ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಪಣತೊಟ್ಟಿರುವ ಪಶ್ಚಿಮ ಬಂಗಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ(Mamata Banerjee), ನಿನ್ನೆ ಸಂಜೆ ಅಲ್ಲಿಗೆ ತೆರಳಿದ್ದಾರೆ. ಹಾಗೇ ಇಂದು ಪಣಜಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಮತ್ತು ಗೋವಾಗಳು ಮೀನು ಹಾಗೂ ಫೂಟ್ಬಾಲ್ ವಿಚಾರಗಳಲ್ಲಿ ಒಂದಕ್ಕೊಂದು ಸಂಪರ್ಕ ಹೊಂದಿವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ನಾನು ಗೋವಾಕ್ಕೆ ಬಂದಿರುವುದು ಇಲ್ಲಿ ಟಿಎಂಸಿ ಅಧಿಕಾರ ಹಿಡಿಯಬೇಕು..ನಾನು ಮುಖ್ಯಮಂತ್ರಿಯಾಗಬೇಕು ಎಂದಲ್ಲ. ಇಲ್ಲಿ ಕೇಂದ್ರ ಸರ್ಕಾರ ದಾದಾಗಿರಿ ನಡೆಸಲು ಬಿಡಬಾರದು ಎಂಬ ಕಾರಣಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ನಾನು ಗೋವಾಕ್ಕೆ ಹೊರಗಿನವಳು ಅಲ್ಲ. ಹಾಗಂತ ನನಗೆ ಇಲ್ಲಿನ ಸಿಎಂ ಹುದ್ದೆ ಬೇಡ. ದೆಹಲಿ ಸರ್ಕಾರ ಇಲ್ಲಿ ಗೂಂಡಾಗಿರಿ ನಡೆಸಲು ಬಿಡಬಾರದು ಎಂಬುದು ನನ್ನ ಉದ್ದೇಶ ಎಂದು ಕೊಂಕಣಿಯಲ್ಲೇ ಮಾತನಾಡಿದರು. ನಾನು ಭಾರತೀಯಳು. ನಾನು ಎಲ್ಲಿಗೆ ಬೇಕಾದರೂ ಹೋಗಬಹುದು. ಗೋವಾ ಕೂಡ ನನ್ನ ಮಾತೃಭೂಮಿ. ಹಾಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ನಾನು ಬರುತ್ತಿದ್ದಂತೆ ನನ್ನ ಪೋಸ್ಟರ್ಗಳನ್ನು ಹರಿಯಲಾಗಿದೆ. ಬಿಜೆಪಿಯವರ ಮಾನಸಿಕ ಸ್ಥಿತಿ ತುಂಬ ಕೊಳಕಾಗಿದೆ. ಅವರು ನನಗೆ ಕಪ್ಪು ಬಾವುಟ ತೋರಿಸಿದರು..ಅದಕ್ಕೆ ಪ್ರತಿಯಾಗಿ ನಾನು ನಮಸ್ತೆ ಎಂದು ಹೇಳಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಹಾಗೇ, ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ..ಈ ಗೋವಾ ತುಂಬ ಸುಂದರವಾಗಿದೆ. ಹಾಗಂತ ನನಗೆ ಇಲ್ಲಿ ಅಧಿಕಾರ ಬೇಡವೇ ಬೇಡ. ನಾನು ಇಲ್ಲಿನ ಜನರಿಗೆ ಸಹಾಯ ಮಾಡಲು ಬಂದಿದ್ದೇನೆ. ಇಲ್ಲಿನವರು ಮೀನು ತುಂಬ ಇಷ್ಟಪಡುತ್ತಾರೆ. ನಾವು ಪಶ್ಚಿಮ ಬಂಗಾಳದವರಿಗೂ ಮೀನೆಂದರೆ ತುಂಬ ಇಷ್ಟ. ನಿಮಗೆ ಫೂಟ್ಬಾಲ್ ಕ್ರಿಡೆ ಇಷ್ಟ..ನಾವೂ ಅದನ್ನು ಪ್ರೀತಿಸುತ್ತೇವೆ ಎಂದು ದೀದಿ ಹೇಳಿದರು.
We are elated to share that Nafisa Ali and Mrinalini Deshprabhu have joined the Goa Trinamool Congress family today in the presence of our Hon’ble Chairperson @MamataOfficial.
We wholeheartedly welcome both leaders! pic.twitter.com/W5eAlKpmR2
— All India Trinamool Congress (@AITCofficial) October 29, 2021
ಪಣಜಿಯಲ್ಲಿ ಇಂದು ಮಮತಾ ಬ್ಯಾನರ್ಜಿ ಮಾತನಾಡುವವ ವೇಳೆ ಗೋವಾದ ಮಾಜಿ ಮುಖ್ಯಮಂತ್ರಿ ಲೂಯಿಜಿನ್ಹೋ ಫಲೈರೋ, ಟಿಎಂಸಿ ಸಂಸದ ಡೆರೆಕ್ ಒ ಬ್ರೇನ್ ಸೇರಿ ಹಲವು ಸ್ಥಳೀಯ ನಾಯಕರು ಇದ್ದರು. ನಾಳೆ ಶನಿವಾರ ಮಮತಾ ಬ್ಯಾನರ್ಜಿ ಗೋವಾದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಅದಾದ ಮೇಲೆ ಹಳೇ ಗೋವಾದ ಬಾಮ್ ಜೀಸಸ್ ಚರ್ಚ್ಗೆ ಭೇಟಿ ನೀಡುವರು ಮತ್ತು ಮಾಪುಸಾದ ಬೋಡ್ಗೇಶ್ವರ ದೇವಾಲಯಕ್ಕೆ ಭೇಟಿ ಕೊಡಲಿದ್ದಾರೆ.
ಜೈಶ್ರೀರಾಮ್ ಘೋಷಣೆ ಮಮತಾ ಬ್ಯಾನರ್ಜಿ ನಿನ್ನೆಯಿಂದ ಮೂರು ದಿನಗಳ ಗೋವಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಅವರು ನಿನ್ನೆ ಇಲ್ಲಿಗೆ ಆಗಮಿಸುವ ಹೊತ್ತಿಗೆ ಟಿಎಂಸಿ ಪೋಸ್ಟರ್ಗಳನ್ನು ಹರಿದುಹಾಕಲಾಗಿದೆ. ಮಮತಾ ಬ್ಯಾನರ್ಜಿ ಪ್ರಯಾಣಿಸುವ ಸ್ಥಳಗಳಲ್ಲೆಲ್ಲ ಅನೇಕ ಕಡೆ ಜೈಶ್ರೀರಾಮ್ ಘೋಷಣೆಗಳ ಪೋಸ್ಟರ್ ಹಚ್ಚಲಾಗಿದೆ. ಈ ಬಾರಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಇದೀಗ ದೇಶದ ಬೇರೆಬೇರೆ ರಾಜ್ಯಗಳಿಗೆ ಕಾಲಿಡುತ್ತಿದೆ. ಅದರಲ್ಲೂ ದೀದಿ ತಾವು ಗೆಲ್ಲಬೇಕು ಎಂಬ ಉದ್ದೇಶಕ್ಕಿಂತಲೂ ಬಿಜೆಪಿ ಗೆಲ್ಲಲು ಬಿಡಬಾರದು ಎಂಬ ಧ್ಯೇಯದೊಂದಿಗೆ ರಾಜ್ಯಪ್ರವಾಸ ಹಮ್ಮಿಕೊಂಡಿದ್ದಾರೆ.
ಗಾಜಿಪುರ, ಟಿಕ್ರಿಯಲ್ಲಿ ಬ್ಯಾರಿಕೇಡ್ ತೆರವು; ರೈತರು ಸಂಸತ್ಗೆ ಹೋಗಲಿದ್ದಾರೆ ಎಂದ ರಾಕೇಶ್ ಟಿಕಾಯತ್
Published On - 12:55 pm, Fri, 29 October 21