ಪುಟ್ಟ ಬಾಲಕನನ್ನು ತಲೆ-ಕೆಳಗೆ ಮಾಡಿದ ಮುಖ್ಯಶಿಕ್ಷಕನ ವಿರುದ್ಧ ಜಿಲ್ಲಾಧಿಕಾರಿ ಗರಂ; 2ನೇ ತರಗತಿ ವಿದ್ಯಾರ್ಥಿಯ ತಂದೆ ಹೇಳಿದ್ದೇನು?
ಮುಖ್ಯಶಿಕ್ಷಕನ ಕೋಪಕ್ಕೆ ಹೆದರಿದ ಬಾಲಕ ಅಳಲು ಶುರು ಮಾಡಿದ್ದೇನೆ. ಇನ್ನು ಚೇಷ್ಟೆ ಮಾಡುವುದಿಲ್ಲ ನನ್ನನ್ನು ಕೆಳಗೆ ಇಳಿಸಿ ಎಂದು ಬೇಡಿಕೊಂಡಿದ್ದಾನೆ. ಅದಾದ ಸ್ವಲ್ಪ ಹೊತ್ತಿನ ನಂತರ ಪ್ರಿನ್ಸಿಪಾಲ್ ಹುಡುಗನನ್ನು ಬಿಟ್ಟಿದ್ದಾರೆ.
ಮುಖ್ಯಶಿಕ್ಷಕರೊಬ್ಬರು (School Principal) ಶಾಲೆಯ ಮೊದಲ ಫ್ಲೋರ್ನಲ್ಲಿ ನಿಂತು, ಎರಡನೇ ತರಗತಿ ಹುಡುಗನೊಬ್ಬನ ಕಾಲು ಹಿಡಿದು, ಆತನನ್ನು ಉಲ್ಟಾ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಈ ಫೋಟೋ ನಿಜಕ್ಕೂ ಹೆದರಿಕೆ ಹುಟ್ಟಿಸುವಂತೆ ಇದೆ. ಮೊದಲ ಅಂತಸ್ತಿನ ಮೇಲೆ ನಿಂತ ಶಿಕ್ಷಕನ ಅಕ್ಕಪಕ್ಕ ಇನ್ನೂ ಕೆಲವು ವಿದ್ಯಾರ್ಥಿಗಳು ನಿಂತಿದ್ದಾರೆ. ಆ ಶಿಕ್ಷಕ 2ನೇ ತರಗತಿ ಬಾಲಕನ ಒಂದು ಕಾಲನ್ನು ಹಿಡಿದು ಅವನನ್ನು ತಲೆ ಕೆಳಗೆ ಮಾಡಿದ್ದಾನೆ. ಹಾಗೇ, ನೆಲದ ಕಡೆಗೆ ತಲೆ ಇದೆ. ಈ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದ ಖಾಸಗಿ ಶಾಲೆಯೊಂದರದ್ದು ಎಂದು ಹೇಳಲಾಗಿದ್ದು, ಇದೀಗ ಜಿಲ್ಲಾಧಿಕಾರಿ (District Magistrate) ಶಿಕ್ಷಕನ ವಿರುದ್ಧ ದೂರು ದಾಖಲಿಸಿಕೊಳ್ಳಲು ಸೂಚಿಸಿದ್ದಾರೆ.
ಅಹ್ರೌರಾದಲ್ಲಿರುವ ಸದ್ಭಾವನಾ ಶಿಕ್ಷಣ ಸಂಸ್ಥಾನದ ಜ್ಯೂನಿಯರ್ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 2ನೇ ತರಗತಿ ವಿದ್ಯಾರ್ಥಿ ಸೋನು ಯಾದವ್ ಏನೋ ಚೇಷ್ಟೆ ಮಾಡಿದ ಎಂಬ ಕಾರಣಕ್ಕೆ ಶಾಲೆಯ ಪ್ರಿನ್ಸಿಪಾಲ್ ಮನೋಜ್ ವಿಶ್ವಕರ್ಮ ಸಿಟ್ಟಾಗಿ, ಆತನಿಗೆ ಹೀಗೆ ಶಿಕ್ಷೆ ಕೊಡಲು ಮುಂದಾಗಿದ್ದಾರೆ. ಸೋನು ಸ್ವಬಾವತಃ ತುಂಟನಾಗಿದ್ದು,ಹೆದ ಗುರುವಾರ ಕೂಡ ತಿಂಡಿ ತಿನ್ನುವ ಹೊತ್ತಲ್ಲಿ ಏನೋ ಕುಚೇಷ್ಟೆ ಮಾಡಿದ್ದಾನೆ. ಅಷ್ಟಕ್ಕೇ ಕೋಪಗೊಂಡು ಅಲ್ಲಿಗೆ ಬಂದ ಮನೋಜ್ ವಿಶ್ವಕರ್ಮ, ಒಂದೇ ಕೈಯಲ್ಲಿ ಪುಟ್ಟ ಹುಡುಗನ ಒಂದು ಕಾಲು ಎತ್ತಿಹಿಡಿದು ತಲೆ-ಕೆಳಗೆ ಮಾಡಿದ್ದಾರೆ. ಮೊದಲ ಫ್ಲೋರ್ನಲ್ಲಿ ನಿಂತು ಕೆಳಗೆ ಎಸೆಯುತ್ತೇನೆ ಎಂದು ಹೆದರಿಸಿದ್ದಾರೆ.
ಇನ್ನು ಮುಖ್ಯಶಿಕ್ಷಕನ ಕೋಪಕ್ಕೆ ಹೆದರಿದ ಬಾಲಕ ಅಳಲು ಶುರು ಮಾಡಿದ್ದೇನೆ. ಇನ್ನು ಚೇಷ್ಟೆ ಮಾಡುವುದಿಲ್ಲ ನನ್ನನ್ನು ಕೆಳಗೆ ಇಳಿಸಿ ಎಂದು ಬೇಡಿಕೊಂಡಿದ್ದಾನೆ. ಅದಾದ ಸ್ವಲ್ಪ ಹೊತ್ತಿನ ನಂತರ ಪ್ರಿನ್ಸಿಪಾಲ್ ಹುಡುಗನನ್ನು ಬಿಟ್ಟಿದ್ದಾರೆ. ಆದರೆ ಅಷ್ಟರಲ್ಲಾಗಲೇ ಈ ದೃಶ್ಯವನ್ನು ವಿಡಿಯೋ ಮಾಡಿದವರು ಯಾರೋ ಸೋಷಿಯಲ್ ಮೀಡಿಯಾಕ್ಕೆ ಹರಿಬಿಟ್ಟಿದ್ದಾರೆ. ವಿಡಿಯೋ ನೋಡುತ್ತಿದ್ದಂತೆ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಲಕ್ಷ್ಕರ್ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕೂಡಲೇ ಖಾಸಗಿ ಶಾಲೆಗೆ ಹೋಗಿ, ಘಟನೆಯ ತನಿಖೆ ನಡೆಸಿ ಎಂದು ಅಲ್ಲಿನ ಶಿಕ್ಷಣ ಅಧಿಕಾರಿಗೆ ಸೂಚನೆ ನೀಡಿದ್ದಾರೆ. ಹಾಗೇ, ಮುಖ್ಯ ಶಿಕ್ಷಕನ ವಿರುದ್ಧ ದೂರು ದಾಖಲಿಸಲೂ ನಿರ್ದೇಶನ ನಡೆಸಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ನೋಡಿದ ನೆಟ್ಟಿಗರೂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪುಟ್ಟ ಬಾಲಕನ ತಂದೆ ರಂಜಿತ್ ಯಾದವ್, ನನ್ನ ಮಗ ತುಂಟ ಹೌದು. ಅವನು ಉಳಿದ ಮಕ್ಕಳನ್ನು ಕರೆದುಕೊಂಡು ಗೋಲ್ಗಪ್ಪಾ ತಿನ್ನಲು ಹೋಗಿದ್ದಕ್ಕೆ ಪ್ರಿನ್ಸಿಪಾಲ್ ಹೀಗೆ ಶಿಕ್ಷೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ವಧುವಿನಂತೆ ರೆಡಿಯಾಗಿ ಕುಳಿತಿದ್ದ ತನ್ನ ತಾಯಿಯನ್ನು ನೋಡಿದ ಪುಟ್ಟ ಮಗುವಿನ ರಿಯಾಕ್ಷನ್ ಹೇಗಿತ್ತು ನೋಡಿ
ಕೊನೆಗೂ ಪ್ರಪೋಸ್ ಮಾಡಿದ ಹರ್ಷ; ಇದು ವರುಧಿನಿಗೆ ಮೋಸ ಮಾಡಿದಂತೆ ಎಂದ ಭುವಿ, ಮುಂದೇನು?
Published On - 12:05 pm, Fri, 29 October 21