ನಂದಿಗ್ರಾಮ ಫಲಿತಾಂಶ ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್​ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ವಿಧಾನಸಭೆ ಚುನಾವಣೆಯಲ್ಲಿ ಒಂದು ಕಾಲದ ತಮ್ಮ ಅನುಯಾಯಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ನಂದಿಗ್ರಾಮ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

ನಂದಿಗ್ರಾಮ ಫಲಿತಾಂಶ ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್​ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Ghanashyam D M | ಡಿ.ಎಂ.ಘನಶ್ಯಾಮ

|

Jun 17, 2021 | 11:00 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮದ ಕ್ಷೇತ್ರ ಚುನಾವಣಾ ಫಲಿತಾಂಶವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊಲ್ಕತ್ತಾ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ಪಶ್ಚಿಮ ವಿಧಾನಸಭೆ ಚುನಾವಣೆಯಲ್ಲಿ ಒಂದು ಕಾಲದ ತಮ್ಮ ಅನುಯಾಯಿ ಸುವೇಂದು ಅಧಿಕಾರಿ ವಿರುದ್ಧ ಮಮತಾ ನಂದಿಗ್ರಾಮ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

ನಾಮಪತ್ರ ಸಲ್ಲಿಕೆಯಿಂದ ಫಲಿತಾಂಶ ಘೋಷಣೆಯವರೆಗೂ ಚುನಾವಣೆ ದೇಶದ ಗಮನ ಸೆಳೆದಿತ್ತು. ತೀವ್ರ ಹಣಾಹಣಿಯಿದ್ದ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುವೇಂದು ಅಧಿಕಾರಿ ಟಿಎಂಸಿ ನಾಯಕಿ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದರು.

ನಂದಿಗ್ರಾಮದ ಕ್ಷೇತ್ರದ ಫಲಿತಾಂಶ ಪ್ರಶ್ನಿಸಿ ಮಮತಾ ಬ್ಯಾನರ್ಜಿ ಇದೀಗ ಕಲ್ಕತ್ತಾ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ನಾಳೆ (ಜೂನ್ 18) ಬೆಳಿಗ್ಗೆ 11 ಗಂಟೆಗೆ ಈ ಅರ್ಜಿಯನ್ನು ನ್ಯಾಯಮೂರ್ತಿ ಕೌಶಿಕ್ ಚಂದ್ರ ನೇತೃತ್ವದ ನ್ಯಾಯಪೀಠವು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಟೀಂ ಗೆದ್ದು ಕ್ಯಾಪ್ಟನ್ ಸೋತ ಸ್ಥಿತಿ ಬಿಜೆಪಿ ಮತ್ತು ಟಿಎಂಸಿ ನಡವೆ ತುರುಸಿನ ಸ್ಪರ್ಧೆ ನಡೆದ ಪಶ್ಚಿಮ ಬಂಗಾಳದಲ್ಲಿ ಬಂಗಾಳದ ಹೆಣ್ಣು ಹುಲಿ ಮತ್ತೆ ಜೋರಾಗಿಯೇ ಗರ್ಜಿಸಿತ್ತು. ಬಿಜೆಪಿ, ಎಡಪಕ್ಷ, ಕಾಂಗ್ರೆಸ್ ಪಕ್ಷಗಳನ್ನು ಸೋಲಿಸಿ ಮತ್ತೆ ಅಧಿಕಾರಕ್ಕೇರಲು ಬಂಗಾಳದ ಮನೆ ಮಗಳು ಮಮತಾ ದೀದಿ ಯಶಸ್ವಿಯಾದರು. ಟಿಎಂಸಿ ಪಕ್ಷಕ್ಕೆ ಮೂರನೇ ಎರಡರಷ್ಟು ಬಹುಮತ ಕೂಡ ಸಿಕ್ಕಿತು.  ಆದರೇ, ಟಿಎಂಸಿ ಸೇನೆಯ ದಂಡನಾಯಕಿ ಮಮತಾ ಬ್ಯಾನರ್ಜಿಯೇ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲು ಅನುಭವಿಸಿದರು.

ಟಿಎಂಸಿ ಕಾರ್ಯಕರ್ತರ ನೈತಿಕ ಬಲ ಕುಸಿಯಬಾರದು ಎಂಬ ಕಾರಣದಿಂದ ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟೆ ಭವಾನಿಪುರ ಕ್ಷೇತ್ರವನ್ನು ಆಪ್ತ ಶೋಭನ್ ದೇಬ್ ಚಟ್ಟೋಪಾಧ್ಯಾಯಗೆ ಬಿಟ್ಟುಕೊಟ್ಟು ನಂದಿಗ್ರಾಮದಿಂದ ಸ್ಪರ್ಧೆ ಮಾಡಿದ್ದರು. ಇದರಿಂದ ಟಿಎಂಸಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಹೆಚ್ಚಾಗಿದ್ದು ನಿಜ. ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲೂ ತಾವು 50 ಸಾವಿರ ಮತಗಳಿಂದ ಗೆಲ್ಲುವುದಾಗಿ ಮಮತಾ ಆತ್ಮವಿಶ್ವಾಸದಿಂದ ಹೇಳಿದ್ದು ಉಂಟು. ಆದರೆ, ಈಗ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಮಮತಾ ಬ್ಯಾನರ್ಜಿ 1,736 ಮತಗಳಿಂದ ಸೋತಿದ್ದಾರೆ. ಹಳೆಯ ಶಿಷ್ಯ, ಈಗಿನ ಎದುರಾಳಿ ಬಿಜೆಪಿಯ ಸುವೇಂದು ಅಧಿಕಾರಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

(Mamata Banerjee Challenges Nandigram Election Results in Calcutta High Court)

ಇದನ್ನೂ ಓದಿ: ಬಂಗಾಳ ಹಿಂಸಾಚಾರ ಬಿಜೆಪಿ ಗಿಮಿಕ್, ಟ್ವಿಟರ್ ಮೇಲಿನ ಕೇಂದ್ರದ ನಿಯಂತ್ರಣ ಖಂಡಿಸಿದ ಮಮತಾ ಬ್ಯಾನರ್ಜಿ

ಇದನ್ನೂ ಓದಿ: ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆಗೆ ಅಭ್ಯಂತರವಿಲ್ಲ: ಮಮತಾ ಬ್ಯಾನರ್ಜಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada