‘ಒಂದು ದೇಶ ಒಂದು ರೇಷನ್ ಕಾರ್ಡ್’ ಯೋಜನೆಗೆ ಅಭ್ಯಂತರವಿಲ್ಲ: ಮಮತಾ ಬ್ಯಾನರ್ಜಿ

Mamata Banerjee: 'ಒನ್ ನೇಷನ್, ಒನ್ ರೇಷನ್ ಕಾರ್ಡ್' ಯೋಜನೆಯ ಅನುಷ್ಠಾನದಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಇದು ಪ್ರಕ್ರಿಯೆಯ ಹಂತದಲ್ಲಿದೆ, "ಎಂದು ಮಮತಾ ಬ್ಯಾನರ್ಜಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

'ಒಂದು ದೇಶ ಒಂದು ರೇಷನ್ ಕಾರ್ಡ್' ಯೋಜನೆಗೆ ಅಭ್ಯಂತರವಿಲ್ಲ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
TV9kannada Web Team

| Edited By: Rashmi Kallakatta

Jun 14, 2021 | 6:24 PM

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕೇಂದ್ರದ ಒಂದುದೇಶ ಒಂದು ರೇಷನ್ ಕಾರ್ಡ್ (‘One Nation, One Ration Card ) ಯೋಜನೆ ಬಗ್ಗೆ ತಮ್ಮ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ ಮತ್ತು ಅದರ ಅನುಷ್ಠಾನ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದರು. ಫಲಾನುಭವಿಗಳಿಗೆ ಸಹಾಯ ಮಾಡಲು ಈ ಯೋಜನೆಯನ್ನು ತಕ್ಷಣ ಜಾರಿಗೆ ತರಲು ಪಶ್ಚಿಮ ಬಂಗಾಳ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕೇಳಿದ ಕೆಲವೇ ದಿನಗಳಲ್ಲಿ ಮಮತಾ ಈ ರೀತಿ ಹೇಳಿದ್ದಾರೆ. ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಯೋಜನೆಯ ಅನುಷ್ಠಾನದಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಇದು ಪ್ರಕ್ರಿಯೆಯ ಹಂತದಲ್ಲಿದೆ, “ಎಂದು ಮಮತಾ ಬ್ಯಾನರ್ಜಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಹೊಸ ಪಡಿತರ ಚೀಟಿ ಪಡೆಯದೆ ಅರ್ಹ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಭಾರತದಾದ್ಯಂತ ನ್ಯಾಯ ಬೆಲೆ ಅಂಗಡಿಗಳಿಂದ ಆಹಾರ ಧಾನ್ಯವನ್ನು ಪಡೆಯಲು ಈ ಯೋಜನೆ ಅವಕಾಶ ನೀಡುತ್ತದೆ.

ಶುಕ್ರವಾರ  ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಫಲಾನುಭವಿಗಳು, ವಿಶೇಷವಾಗಿ ವಲಸೆ ಕಾರ್ಮಿಕರು, ಸಬ್ಸಿಡಿ ಆಹಾರವನ್ನು ಪಡೆಯಲು ಅನುಕೂಲವಾಗುವಂತೆ ಇದನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರವನ್ನು ಕೇಳಿದೆ. ಬಂಗಾಳ ಸರ್ಕಾರದ ವಕೀಲರು ಪಡಿತರ ಚೀಟಿಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ನ್ಯಾಯಾಲಯವು “ಯಾವುದೇ ಸಬೂಬನ್ನು ಪರಿಗಣಿಸಲಾಗುವುದಿಲ್ಲ” ಪಶ್ಚಿಮ ಬಂಗಾಳವು ಯೋಜನೆಯನ್ನು ಕ್ರಿಯಾತ್ಮಕಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು.

ಈ ಯೋಜನೆ ಪ್ರಸ್ತುತ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಲ್ಲಿದೆ.

ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಬಂಗಾಳ, ದೆಹಲಿ, ಛತ್ತೀಸಗಡ ಮತ್ತು ಅಸ್ಸಾಂ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ (ONORC) ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಹೇಳಿದರು. ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ದೆಹಲಿಯ ಪರ ವಕೀಲರು ತಿಳಿಸಿದ್ದಾರೆ.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್.ಶಾ ಅವರ ರಜಾ ಪೀಠವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಯೋಜನೆಯ ಅನುಷ್ಠಾನ ಮತ್ತು ಸಾಕಷ್ಟು ಶುಷ್ಕ ಪಡಿತರ ಪೂರೈಕೆ ಮತ್ತು ವಲಸೆ ಕಾರ್ಮಿಕರಿಗೆ ಸಾರಿಗೆ ಸೌಲಭ್ಯಗಳನ್ನು ಒದಗಿಸಲು ತೆಗೆದುಕೊಂಡ ಇತರ ನೀತಿ ಕ್ರಮಗಳ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ ಸಲ್ಲಿಸುವಂತೆ ಹೇಳಿದೆ.

ಕೊವಿಡ್ -19 ಪ್ರಕರಣಗಳ ಏರಿಕೆ ಮಧ್ಯೆ ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು 2020 ರ ಬಾಕಿ ಇರುವ ಸುಮೊಟೊ ಪ್ರಕರಣದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಇದನ್ನೂ ಓದಿ: Mukul Roy ನನಗೆ ಬಿಜೆಪಿಯಲ್ಲಿ ಇರಲಾಗಲಿಲ್ಲ, ಬಂಗಾಳ ಮತ್ತು ಭಾರತಕ್ಕೆ ಒಬ್ಬರೇ ನಾಯಕಿ ಮಮತಾ ಬ್ಯಾನರ್ಜಿ : ಮುಕುಲ್ ರಾಯ್

(No problem with One Nation One Ration Card scheme says West Bengal chief minister Mamata Banerjee)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada