Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದಾ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರುವ ಮಮತಾ ಬ್ಯಾನರ್ಜಿ ಈ ಸೀಸನ್​ನಲ್ಲಿ ಮಾತ್ರ ಅವರನ್ನು ಮರೆಯೋಲ್ಲ; ಸಿಹಿಯಾದ ಹಣ್ಣುಗಳನ್ನು ಕಳಿಸ್ತಾರೆ..

ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಘರ್ಷ ನಡೆಯುತ್ತಲೇ ಇರುತ್ತದೆ. ಸ್ವಲ್ಪ ದಿನ ಬೂದಿಮುಚ್ಚಿದ ಕೆಂಡದಂತೆ ಇದ್ದರೆ, ಮತ್ತೆ ಕೆಲವು ದಿನ ಹೊತ್ತಿ ಉರಿಯುತ್ತದೆ. ಸದ್ಯ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲಿನ ಹಿಂಸಾಚಾರದ ವಿರುದ್ಧ ಕೇಂದ್ರ ತೀವ್ರ ಅಸಮಾಧಾನಗೊಂಡಿದೆ.

ಸದಾ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರುವ ಮಮತಾ ಬ್ಯಾನರ್ಜಿ ಈ ಸೀಸನ್​ನಲ್ಲಿ ಮಾತ್ರ ಅವರನ್ನು ಮರೆಯೋಲ್ಲ; ಸಿಹಿಯಾದ ಹಣ್ಣುಗಳನ್ನು ಕಳಿಸ್ತಾರೆ..
ಮಮತಾ ಬ್ಯಾನರ್ಜಿ
Follow us
TV9 Web
| Updated By: Lakshmi Hegde

Updated on: Jul 01, 2021 | 11:17 AM

ನವದೆಹಲಿ: ಬಿಜೆಪಿ, ಪ್ರಧಾನಿ ಮೋದಿ ಎಂದರೆ ಮಮತಾ ಬ್ಯಾನರ್ಜಿ ನಿಗಿನಿಗಿ ಕೆಂಡದಂತೆ ಆಡುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಕಾಂಗ್ರೆಸ್​ಗಿಂತ ದೀದಿಯ ಟಿಎಂಸಿ ಪಕ್ಷವೇ ಬಹುದೊಡ್ಡ ಪ್ರತಿಪಕ್ಷದಂತೆ ಭಾಸವಾಗುತ್ತದೆ. ಈ ಬಾರಿಯಾದರೂ ಪಶ್ಚಿಮಬಂಗಾಳವನ್ನು ಮಮತಾ ಬ್ಯಾನರ್ಜಿಯವರಿಂದ ಕಸಿದುಕೊಳ್ಳಬೇಕೆಂದು ಬಿಜೆಪಿ, ಅದರ ನಾಯಕರು ಪ್ರಯತ್ನ ಮಾಡಿದ್ದೇ ಬಂತು. ಪ್ರಧಾನಿ ಮೋದಿ, ಅಮಿತ್​ ಶಾ, ಜೆ.ಪಿ.ನಡ್ಡಾ ಸೇರಿ ಹಲವು ಗಣ್ಯರು ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆ ವೇಳೆ ಪ್ರಚಾರಕ್ಕೆ ತೆರಳಿದ್ದರು. ಟಿಎಂಸಿಯ ಸುವೇಂದು ಅಧಿಕಾರಿ ಸೇರಿ ಹಲವರು ಬಿಜೆಪಿಗೆ ಸೇರ್ಪಡೆಯಾದರು. ಆದರೂ ಬಂಗಾಳದಲ್ಲಿ ದೀದಿ ಸೋತರೂ, ಅವರ ಪಕ್ಷ ಸೋಲಲಿಲ್ಲ. ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಬಾರಿ ಎಂದಲ್ಲ..ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಟಾಪಟಿ ಸದಾ ನಡೆಯುತ್ತಲೇ ಇರುತ್ತದೆ. ರಾಜಕೀಯ ಹೊರತಾಗಿ ಇನ್ನೇನೂ ಇರುವುದಿಲ್ಲ.

ಆದರೆ ಮಾವಿನ ಹಣ್ಣಿನ ಸೀಸನ್​ ಬಂತೆಂದರೆ ಸಾಕು ದೀದಿ ರಾಜಕೀಯವನ್ನು ಸ್ವಲ್ಪ ಪಕ್ಕಕ್ಕೆ ಇಡುತ್ತಾರೆ. ಪಶ್ಚಿಮ ಬಂಗಾಳದ ಜನಪ್ರಿಯ, ವಿಶಿಷ್ಟ ಮಾವಿನ ತಳಿಗಳಾದ ಹಿಮ್ಸಾಗರ್, ಲ್ಯಾಂಗ್ಡಾ ಮತ್ತು ಲಕ್ಷ್ಮಣ್​ಭಾಗ್ ಮಾವಿನ ಹಣ್ಣುಗಳನ್ನು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿ ದೆಹಲಿಯ ಹಲವು ಗಣ್ಯ ನಾಯಕರಿಗೆ ಕಳಿಸಿಕೊಡುತ್ತಾರೆ. 2011ರಿಂದಲೂ ಈ ಸಂಪ್ರದಾಯ ರೂಢಿಸಿಕೊಂಡಿರುವ ಮಮತಾ ಬ್ಯಾನರ್ಜಿ ಕಳೆದ ವಾರ ಕೂಡ ಮಾವಿನಹಣ್ಣುಗಳ ಬಾಕ್ಸ್​​ನ್ನು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್​, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಸಾರಿಗೆ ಸಚಿವ ನಿತಿನ್​ ಗಡ್ಕರಿ, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ರಿಗೆ ಕಳಿಸಿಕೊಟ್ಟಿದ್ದಾರೆ. ಒಟ್ಟಾರೆ ಮಾವಿನ ಹಣ್ಣಿನ ರೂಪದಲ್ಲಿ ಕೇಂದ್ರದ ನಾಯಕರಿಗೆ ಸಿಹಿ ಹಂಚಿದ್ದಾರೆ.

ಮಮತಾ ಬ್ಯಾನರ್ಜಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಘರ್ಷ ನಡೆಯುತ್ತಲೇ ಇರುತ್ತದೆ. ಸ್ವಲ್ಪ ದಿನ ಬೂದಿಮುಚ್ಚಿದ ಕೆಂಡದಂತೆ ಇದ್ದರೆ, ಮತ್ತೆ ಕೆಲವು ದಿನ ಹೊತ್ತಿ ಉರಿಯುತ್ತದೆ. ಸದ್ಯ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲಿನ ಹಿಂಸಾಚಾರದ ವಿರುದ್ಧ ಕೇಂದ್ರ ತೀವ್ರ ಅಸಮಾಧಾನಗೊಂಡಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಸೈಕ್ಲೋನ್​ನಿಂದಾದ ಹಾನಿಯ ಬಗ್ಗೆ ನಡೆಸಿದ ಸಭೆಗೆ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಲ್ಪಾನ್​ ಬಂಡೋಪಾಧ್ಯಾಯ ಆಗಮಿಸಿರಲಿಲ್ಲ. ಇದಾದ ಬೆನ್ನಲ್ಲೇ ಅಲ್ಪಾನ್​ ಬಂಡೋಪಾಧ್ಯಾಯರನ್ನು ಕೇಂದ್ರ ಸರ್ಕಾರ ದೆಹಲಿಗೆ ವರ್ಗಾವಣೆ ಮಾಡಿತ್ತು. ಆದರೆ ಅವರು ದೆಹಲಿಗೆ ಹೋಗದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಈ ವಿಚಾರದಲ್ಲೂ ಕೇಂದ್ರದ ವಿರುದ್ಧ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದರು. ಪ್ರಧಾನಿ ಮೋದಿಯವರದ್ದು ಸರ್ವಾಧಿಕಾರಿ ಧೋರಣೆ ಎಂದು ಹೇಳಿದ್ದರು.

ಆದರೆ ಈ ರಾಜಕೀಯ ಯುದ್ಧವನ್ನು ಪಕ್ಕಕ್ಕಿಟ್ಟು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಇತರ ನಾಯಕರಿಗೆ ಮಾವಿನ ಹಣ್ಣುಗಳನ್ನು ಕಳಿಸಿದ ಮಮತಾ ಬ್ಯಾನರ್ಜಿಯವರು ರಾಜಕೀಯ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರೊಮ್ಮೆ ಸಾರ್ವಜನಿಕವಾಗಿ ಭಾಷಣ ಮಾಡುವಾಗ, ದೀದೀಯವರನ್ನು ಒಂದು ವಿಚಾರಕ್ಕೆ ಹೊಗಳಿದ್ದರು. ಪ್ರತಿವರ್ಷವೂ ನನಗೆ ಪಶ್ಚಿಮ ಬಂಗಾಳದಿಂದ ದೀದಿ ಉಡುಪು ಕಳಿಸುತ್ತಾರೆ ಎಂದು ಹೇಳಿದ್ದರು. ಆದರೆ ನಂತರ ಮಮತಾ ಬ್ಯಾನರ್ಜಿ ಇದೇ ವಿಚಾರಕ್ಕೆ ಕೋಪಗೊಂಡು, ಇನ್ಮುಂದೆ ಕಲ್ಲು ಕಳಿಸುತ್ತೇನೆ ಎಂದು ವ್ಯಂಗ್ಯವಾಡಿದ್ದರು.

ಇದನ್ನೂ ಓದಿ: ಸೋಂಕಿತ ಮೃತರ ಮನೆಗಳಿಗೆ ಒಬ್ಬ ಸಚಿವರೂ ಭೇಟಿ ಕೊಟ್ಟಿಲ್ಲ; ಹೆಣದ ರಾಶಿಯ ಫೋಟೋಗಳು ನಮ್ಮ ಬಳಿ ಇವೆ: ಡಿಕೆ ಶಿವಕುಮಾರ್

Mamata Banerjee sent basketfull Of Mangoes to Prime Minister Narendra Modi From West Bengal