ಮಮತಾ ಬ್ಯಾನರ್ಜೀ ತಮ್ಮ ಪಕ್ಷದ ಸ್ಥೂಲದೇಹಿ ಕಾರ್ಯಕರ್ತನೊಬ್ಬನನ್ನು ಸಭೆಯಲ್ಲೇ ಲೇವಡಿ ಮಾಡಿದರು!

ಮಮತಾ ದೀದಿಗೆ ಕಾರ್ಯಕರ್ತನನ್ನು ಅಷ್ಟಕ್ಕೆ ಬಿಡುವ ಮನಸ್ಸಿಲ್ಲ. ‘ಇಲ್ಲ, ಇಲ್ಲ, ನಾನು ನಂಬಲಾರೆ. ಖಂಡಿತವಾಗಿಯೂ ನಿಮಗೆ ಆರೋಗ್ಯದ ಸಮಸ್ಯೆ ಇದೆ. ನೀವು ಅಷ್ಟು ದೊಡ್ಡ ‘ಮಧ್ಯ ಪ್ರದೇಶ’ ಹೊಂದಿರಲು ಹೇಗೆ ಸಾಧ್ಯ?’ ಎನ್ನುವ ಅವರು ಕಾರ್ಯಕರ್ತನ ಹೊಟ್ಟೆ ಭಾಗವನ್ನು ಮಧ್ಯ ಪ್ರದೇಶ ಎಂದು ಉಲ್ಲೇಖಿಸುತ್ತಾರೆ!

ಮಮತಾ ಬ್ಯಾನರ್ಜೀ ತಮ್ಮ ಪಕ್ಷದ ಸ್ಥೂಲದೇಹಿ ಕಾರ್ಯಕರ್ತನೊಬ್ಬನನ್ನು ಸಭೆಯಲ್ಲೇ ಲೇವಡಿ ಮಾಡಿದರು!
ಮಮತಾ ಬ್ಯಾನರ್ಜೀ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 31, 2022 | 8:12 AM

Kolkata:  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ (Mamata Banerjee) ಅವರ ಹಾವಭಾವ, ಧೋರಣೆ, ಮಾತಿನ ವರಸೆ ಕೇಳುತ್ತಿದ್ದರೆ ಅವರಲ್ಲಿ ಹಾಸ್ಯ ಪ್ರಜ್ಞೆ ಇರಲಿಕ್ಕಿಲ್ಲ ಅನಿಸಿಬಿಡುತ್ತದೆ. ಆದರೆ ಪಕ್ಷದ ಸಭೆಯೊಂದರಲ್ಲಿ ತಮ್ಮ ಕಾರ್ಯಕರ್ತನೊಂದಿಗೆ ಅವರ ನಡೆಸಿದ ಸಂಭಾಷಣೆ (conversation) ಕೇಳಿದರೆ ನಿಮ್ಮ ಅನಿಸಿಕೆ ಸುಳ್ಳಾಗದಿರದು. ಅಂದಹಾಗೆ ಸಂಭಾಷಣೆಯ ವಿಡಿಯೋ ವೈರಲ್ ಅಗಿದೆ. ಸ್ಥೂಲದೇಹಿ (obese) ಕಾರ್ಯಕರ್ತನ ದೇಹ ತೂಕದ ಮೇಲೆ ಪ್ರಶ್ನೆಗಳ ಸುರಿಮಳೆಗೈದಿರುವ ಮಮತಾ ದೀದಿ, ಅವರು ಪೇಚಾಡುವಂತೆ ಮಾಡಿದ್ದಾರೆ.

ಸದರಿ ಕಾರ್ಯಕರ್ತ ಸಭೆಯಲ್ಲಿ ವಿಷಯವೊಂದರ ಮೇಲೆ ಮಾತಾಡುತ್ತಿರುವಾಗ ಅವರ ಮಾತನ್ನು ಅರ್ಧಕ್ಕೆ ತುಂಡರಿಸಿ, ‘ನಿಮ್ಮ ಹೊಟ್ಟೆ ಬೆಳೆಯುತ್ತಿರುವ ರೀತಿ ನೋಡುತ್ತಿದ್ದರೆ, ಯಾವುದೇ ದಿನ ನೀವು ಕುಸಿದು ಬೀಳಬಹುದು ಅನಿಸುತ್ತೆ. ನಿಮಗೆ ಯಾವುದಾದರೂ ಅನಾರೋಗ್ಯ ಕಾಡುತ್ತಿದೆಯೇ?’ ಅಂತ ಕೇಳುತ್ತಾರೆ.

ಮೊದಲಿಗೆ ಮಮತಾ ಅವರ ಮಾತಿನಿಂದ ವಿಚಲಿತನಾಗದ ಕಾರ್ಯಕರ್ತ ಬಹಳ ಹೆಮ್ಮೆ ಮತ್ತು ಆತ್ಮವಿಶ್ವಾಸದಿಂದ, ‘ನನಗೆ ಸಕ್ಕರೆ ಕಾಯಿಲೆ (ಡಯಾಬಿಟೀಸ್) ಇಲ್ಲ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯೂ ಇಲ್ಲ, ನಾನು ಫಿಟ್ ಆಗಿದ್ದೇನೆ’ ಅಂತ ಹೇಳುತ್ತಾರೆ. ಅಮೇಲೆ, ತಮ್ಮ ಅರೋಗ್ಯ ಹಾಗೂ ಫಿಟ್ನೆಸ್ ಕುರಿತು ದೀದಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಾರೆ. ದಿನಾಲೂ ವರ್ಕ್ ಔಟ್ ಮಾಡುವುದಾಗಿಯೂ ಅವರು ಹೇಳುತ್ತಾರೆ.

ಅದರೆ ಮಮತಾ ದೀದಿಗೆ ಕಾರ್ಯಕರ್ತನನ್ನು ಅಷ್ಟಕ್ಕೆ ಬಿಡುವ ಮನಸ್ಸಿಲ್ಲ. ‘ಇಲ್ಲ, ಇಲ್ಲ, ನಾನು ನಂಬಲಾರೆ. ಖಂಡಿತವಾಗಿಯೂ ನಿಮಗೆ ಆರೋಗ್ಯದ ಸಮಸ್ಯೆ ಇದೆ. ನೀವು ಅಷ್ಟು ದೊಡ್ಡ ‘ಮಧ್ಯ ಪ್ರದೇಶ’ ಹೊಂದಿರಲು ಹೇಗೆ ಸಾಧ್ಯ?’ ಎನ್ನುವ ಅವರು ಕಾರ್ಯಕರ್ತನ ಹೊಟ್ಟೆ ಭಾಗವನ್ನು ಮಧ್ಯ ಪ್ರದೇಶ ಎಂದು ಉಲ್ಲೇಖಿಸುತ್ತಾರೆ!

ದೀದಿಯವರರ ಪಾಟೀ ಸವಾಲು ನಡುವೆ ಮುಂದುವರಿಯುತ್ತಿದ್ದಂತೆಯೇ ಸಭೆಯಲ್ಲಿದ್ದ ಬೇರೆ ಕಾರ್ಯಕರ್ತರು ನಗಲು ಆರಂಭಿಸುತ್ತಾರೆ. ಪಕ್ಷದ ಚೀಫ್ ಎದುರು ಕಾರ್ಯಕರ್ತ ಪೇಚಾಡುವುದು ಅವರಿಗೆ ಸಖತ್ ಮನರಂಜನೆ ಒದಗಿಸುತ್ತದೆ.

ಈ ಕಾರ್ಯಕರ್ತ ಒಬ್ಬ ಮುನಿಸಿಪಲ್ ವರ್ಕರ್ ಅನ್ನೋದು ಗೊತ್ತಾಗಿದೆ ಮಾರಾಯ್ರೇ. ಮಮತಾ ಬೆಂಗಾಲೀ ಭಾಷೆಯಲ್ಲಿ ಕೇಳಿದ ಕೆಲ ಪ್ರಶ್ನೆಗಳು ಅವರು ನೀಡಿದ ಉತ್ತರಗಳು ಕೆಳಗಿನಂತಿವೆ.

‘ನೀವು ವಾಕ್ ಮಾಡ್ತೀರಾ?’

‘ಪ್ರತಿದಿನ ಮಾಡುತ್ತೇನೆ’

‘ನೀವು ಜಾಸ್ತಿ ತಿನ್ನುತ್ತೀರಾ?’

‘ಪ್ರತಿದಿನ ಬೆಳಗ್ಗೆ ಪಕೋಡಾ ತಿನ್ನೋದು ನನ್ನ ಅಭ್ಯಾಸ, ಅದು ದಿನಾಲೂ ಬೇಕೇಬೇಕು,’ ಅಂತ ಕಾರ್ಯಕರ್ತ ಹೇಳುತ್ತಾರೆ.

‘ದಿನಾಲೂ ಯಾಕೆ ತಿಂತೀರಾ ಪಕೋಡಾನ್ನ? ಹಾಗಿದ್ದಲ್ಲಿ ನಿಮ್ಮ ತೂಕ ಯಾವತ್ತೂ ಕಡಿಮೆ ಆಗುವುದಿಲ್ಲ,’ ಅಂತ ಅಪನಂಬಿಕೆಯಿಂದ ತಲೆ ಅಲ್ಲಾಡಿಸುತ್ತಾ ಮಮತಾ ಹೇಳುತ್ತಾರೆ.

‘ಆದರೆ, ಮೇಡಂ ನಾನು ಪ್ರತಿದಿನ ಮೂರು ಗಂಟೆ ವ್ಯಾಯಾಮವನ್ನೂ ಮಾಡುತ್ತೇನೆ,’ ಅಂತ ಸೋಲೊಪ್ಪಿಕೊಳ್ಳಲು ಇಚ್ಛಿಸದ ಕಾರ್ಯಕರ್ತ ಹೇಳುತ್ತಾರೆ.

ಅವರ ಮಾತನ್ನು ನಂಬದ ಮಮತಾ ಅವರು, ‘ಸರಿ ಒಂದಷ್ಟು ವ್ಯಾಯಾಮ ಮಾಡಿ ತೋರಿಸಿ ನೋಡೋಣ,’ ಅನ್ನುತ್ತಾರೆ. ಅದಕ್ಕೆ ಕಾರ್ಯಕರ್ತ ತಾನು ದಿನಕ್ಕೆ ಒಂದು ಸಾವಿರ ಕಪಾಲ ಭಾಟಿ (ಶ್ವಾಸೋಚ್ವಾಸದ ವ್ಯಾಯಾಮ, ಪ್ರಾಣಯಾಮ) ಎಂದು ಹೇಳುತ್ತಾರೆ.

ಅವರ ಪ್ರತಿ ಮಾತಿಗೆ ಶಂಕೆ ವ್ಯಕ್ತಪಡಿಸುವ ಮಮತಾ, ‘ನಿಮಗೆ ಸಾಧ್ಯವಿಲ್ಲ,’ ಎಂದು ಹೇಳುತ್ತಾರೆ.

ಕಾರ್ಯಕರ್ತ ಆಗ ಧಸ್ ಭುಸ್ ಅನ್ನುತ್ತಾ 5-6 ಸಲ ಪ್ರಾಣಯಾಮ ಮಾಡಿ ತೋರಿಸುತ್ತಾರೆ. ಅಸಲಿಗೆ ಅವರು ಮಾಡಿದ್ದು ಪ್ರಾಣಯಾಮ ಅಲ್ಲ ಅಂತ ದೀದಿಗೂ ಗೊತ್ತು.

‘ನೀವೇನಾದರೂ 1,000 ಪ್ರಾಣಯಾಮ ಮಾಡಿ ತೋರಿಸಿದರೆ ಈಗಿಂದಿಗ್ಗೆ ನಿಮಗೆ 10,000 ರೂ. ಕೊಡುತ್ತೇನೆ. ನಿಮಗದು ಅಸಾಧ್ಯ ಬಿಡಿ. ಯಾಕೆಂದರೆ ಉಸಿರನ್ನು ಹೇಗೆ ಒಳಗೆಳೆದುಕೊಳ್ಳಬೇಕು ಹೇಗೆ ಹೊರಗೆ ಹಾಕಬೇಕು ಅನ್ನೋದೇ ನಿಮಗೆ ಗೊತ್ತಿಲ್ಲ,’ ಎಂದು ಮಮತಾ ಹೇಳುತ್ತಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್