ನಾಡಬಾಂಬ್ ಸಾಗಿಸುವಾಗ ಬೈಕ್ ಸ್ಕಿಡ್ ಆಗಿ ಯುವಕ ಬಲಿ

ಹೈದರಾಬಾದ್: ಬೈಕ್​ನಲ್ಲಿ ನಾಡಬಾಂಬ್ ಸಾಗಿಸುತ್ತಿದ್ದ ವೇಳೆ ಬೈಕ್ ಸ್ಕಿಡ್​ ಆಗಿ ಬಿದ್ದು ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ಅದಿಲಾಬಾದ್​ನ ಉಟ್ನೂರ್​ನಲ್ಲಿ ನಡೆದಿದೆ. ಘಟನೆಯಲ್ಲಿ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರ ಮೂಲದ ಮುನಿರಾಜ್ ಸೇರಿದಂತೆ ಇಬ್ಬರು ಯುವಕರು ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಕಾಡಿನ ಹಂದಿ ಸಾಯಿಸಲು ನಾಡಬಾಂಬನ್ನು ಸಾಗಿಸುತ್ತಿದ್ದರು. ಈ ವೇಳೆ ದಾರಿಯಲ್ಲಿ ಹೋಗುವಾಗ ಬೈಕ್ ಸ್ಕಿಡ್ ಆಗಿ ನೆಲಕ್ಕೆ ಬಿದ್ದಿದೆ. ಹಿಂದೆ ಕೂತ ಯುವಕ ಬೈಕ್​ನಿಂದ ಎಗರಿದ್ದಾನೆ ಹಾಗೂ ಬೈಕ್ ಸವಾರ […]

ನಾಡಬಾಂಬ್ ಸಾಗಿಸುವಾಗ ಬೈಕ್ ಸ್ಕಿಡ್ ಆಗಿ ಯುವಕ ಬಲಿ
ಸಾಧು ಶ್ರೀನಾಥ್​

Updated on: Dec 30, 2019 | 5:28 PM

ಹೈದರಾಬಾದ್: ಬೈಕ್​ನಲ್ಲಿ ನಾಡಬಾಂಬ್ ಸಾಗಿಸುತ್ತಿದ್ದ ವೇಳೆ ಬೈಕ್ ಸ್ಕಿಡ್​ ಆಗಿ ಬಿದ್ದು ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತೆಲಂಗಾಣದ ಅದಿಲಾಬಾದ್​ನ ಉಟ್ನೂರ್​ನಲ್ಲಿ ನಡೆದಿದೆ. ಘಟನೆಯಲ್ಲಿ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾರಾಷ್ಟ್ರ ಮೂಲದ ಮುನಿರಾಜ್ ಸೇರಿದಂತೆ ಇಬ್ಬರು ಯುವಕರು ಬೈಕ್​ನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಕಾಡಿನ ಹಂದಿ ಸಾಯಿಸಲು ನಾಡಬಾಂಬನ್ನು ಸಾಗಿಸುತ್ತಿದ್ದರು. ಈ ವೇಳೆ ದಾರಿಯಲ್ಲಿ ಹೋಗುವಾಗ ಬೈಕ್ ಸ್ಕಿಡ್ ಆಗಿ ನೆಲಕ್ಕೆ ಬಿದ್ದಿದೆ. ಹಿಂದೆ ಕೂತ ಯುವಕ ಬೈಕ್​ನಿಂದ ಎಗರಿದ್ದಾನೆ ಹಾಗೂ ಬೈಕ್ ಸವಾರ ಮುನಿರಾಜು ಮತ್ತು ಬೈಕ್ ನೆಲಕ್ಕೆ ಅಪ್ಪಳಿಸಿದಂತೆ ನಾಡಬಾಂಬ್ ಸ್ಪೋಟಗೊಂಡಿದೆ.

ಘಟನೆಯಲ್ಲಿ ಮುನಿರಾಜು ದೇಹ ಛಿದ್ರಛಿದ್ರವಾಗಿದೆ. ಸ್ಪೋಟದ ಶಬ್ದಕ್ಕೆ ಜನ ಭಯಭೀತರಾಗಿದ್ದಾರೆ. ಹಿಂಬದಿ ಕೂತವನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Published On - 5:27 pm, Mon, 30 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us