ತಮಾಷೆಗೆಂದು ಸ್ನೇಹಿತನ ಗುಪ್ತಾಂಗಕ್ಕೆ ಕಂಪ್ರೆಸರ್ ಪೈಪ್ ಇಟ್ಟ ವ್ಯಕ್ತಿ, ಸಾವು
ತಮಾಷೆಯಿಂದ ಒಂದು ಪ್ರಾಣವೇ ಹೋಗಿದೆ, ಸ್ನೇಹಿತನ ಬಳಿ ತಮಾಷೆ ಮಾಡುತ್ತಾ ವ್ಯಕ್ತಿಯೊಬ್ಬ ಅವರ ಖಾಸಗಿ ಅಂಗಕ್ಕೆ ಕಂಪ್ರೆಸರ್ ಪೈಪ್ ಅಳವಡಿಸಿದ ಕಾರಣ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಸಂಜೆ ಎಲ್ಲರೂ ವಿಶ್ರಾಂತಿ ಪಡೆಯುತ್ತಿದ್ದಾಗ ಪ್ರಕಾಶ್ ಅವರ ಸ್ನೇಹಿತ ಅಲ್ಪೇಶ್ ತಮಾಷೆಗಾಗಿ ಪ್ರಕಾಶ್ ಅವರ ಖಾಸಗಿ ಅಂಗಕ್ಕೆ ಕಂಪ್ರೆಸರ್ ಪೈಪ್ ಇಟ್ಟಿದ್ದಾರೆ.

ತಮಾಷೆಗೆಂದು ಮಾಡುವ ಕೆಲವು ಕೆಲಸಗಳು ನಮ್ಮವರ ಜೀವಕ್ಕೆ ಅಪಾಯ ತಂದುಬಿಡುತ್ತವೆ, ತಮಾಷೆಗೆಂದು ಸ್ನೇಹಿತನೊಬ್ಬನ ಗುಪ್ತಾಂಗಕ್ಕೆ ಕಂಪ್ರೆಸರ್ ಪೈಪ್ ಇಟ್ಟ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಮೃತ ಪ್ರಕಾಶ್ ಎಂಬುವವರು ಲೋಹದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಆತನ ಸಹೋದರ ಘೇವಾಬಾಯಿ ಮತ್ತು ಆತನ ಸ್ನೇಹಿತರನ್ನು ಭೇಟಿಯಾಗಿದ್ದರು. ಸಂಜೆ ಎಲ್ಲರೂ ವಿಶ್ರಾಂತಿ ಪಡೆಯುತ್ತಿದ್ದಾಗ ಪ್ರಕಾಶ್ ಅವರ ಸ್ನೇಹಿತ ಅಲ್ಪೇಶ್ ತಮಾಷೆಗಾಗಿ ಪ್ರಕಾಶ್ ಅವರ ಖಾಸಗಿ ಅಂಗಕ್ಕೆ ಕಂಪ್ರೆಸರ್ ಪೈಪ್ ಇಟ್ಟಿದ್ದಾರೆ, ಇದರಿಂದಾಗಿ ಪ್ರಕಾಶ್ ಅವರ ದೇಹದಲ್ಲಿ ಗಾಳಿ ತುಂಬಿತ್ತು.
ತಕ್ಷಣವೇ ವಾಂತಿ ಮಾಡಿಕೊಂಡು ಪ್ರಕಾಶ್ ತಲೆತಿರುಗಿ ಬಿದ್ದಿದ್ದರು. ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ನಂತರ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ಮತ್ತಷ್ಟು ಓದಿ: ಹಿಂದೂ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಮತಾಂತರಕ್ಕೆ ಯತ್ನ, ಇಮ್ರಾನ್ ಬಂಧನ
ಭಾನುವಾರ ಗಣರಾಜ್ಯೋತ್ಸವದಂದು ತನ್ನ ಕಂಪನಿಯನ್ನು ಮುಚ್ಚಿದ್ದರಿಂದ ಪ್ರಕಾಶ್ ತನ್ನ ಸಹೋದರ ಮತ್ತು ಸ್ನೇಹಿತನ್ನು ಭೇಟಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕಾಶ್ ಅವರ ಸಹೋದರ ಘೇವಾಭಾಯ್ ಅವರ ಪ್ರಕಾರ, ಅಲ್ಪೇಶ್ ಅವರು ಕಂಪ್ರೆಸರ್ ಪೈಪ್‌ನಲ್ಲಿನ ಹೆಚ್ಚಿನ ಗಾಳಿಯ ಒತ್ತಡದ ಬಗ್ಗೆ ತಿಳಿದಿದ್ದರು ಆದರೂ ಅದನ್ನು ಲೆಕ್ಕಿಸದೆ ಅವರು ವ್ಯಕ್ತಿಯ ಖಾಸಗಿ ಭಾಗಕ್ಕೆ ಹಾಕಿದ್ದರು, ಇದು ಅವರ ಸಾವಿಗೆ ಕಾರಣವಾಯಿತು ಎಂದರು.
ಘೇವಾಭಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದರು. ಪ್ರಕಾಶ್ ಅವರಿಗೆ ತೊಂದರೆ ಕೊಡುವ ಯಾವ ಉದ್ದೇಶವೂ ಇರಲಿಲ್ಲ, ತಮಾಷೆಗಾಗಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




