ಹಿಂದೂ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಮತಾಂತರಕ್ಕೆ ಯತ್ನ, ಇಮ್ರಾನ್ ಬಂಧನ
ಹಿಂದೂ ಮಹಿಳೆಯನ್ನು ಅನ್ಯ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ಇಮ್ರಾನ್ ಇಂಬಾತನನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಇಮ್ರಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ . ಪತಿ ತನ್ನ ದೂರಿನಲ್ಲಿ ಇಮ್ರಾನ್ ತನ್ನ ಹೆಂಡತಿಯನ್ನು ಮನೆಯಿಂದ ಹೊರಹೋಗುವಂತೆ ಆಮಿಷವೊಡ್ಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಹಿಂದೂ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದ ಇಮ್ರಾನ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ವಿವಾಹಿತ ಮಹಿಳೆ ಮೇಲೆ ಪದೇ ಪದೇ ಅತ್ಯಾಚಾರವೆಸಗಿದ್ದ. ಅನ್ಯ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದ. ಆರೋಪಿಯು ಜನವರಿ 9 ರಂದು ತನ್ನೊಂದಿಗೆ ಬರಲು ಮಹಿಳೆಗೆ ಆಮಿಷವೊಡ್ಡಿದ್ದ, ಪತಿಯ ದೂರಿನ ಮೇರೆಗೆ ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡು ಇಮ್ರಾನ್‌ನನ್ನು ಬಂಧಿಸಿದ್ದಾರೆ. ಮಹಿಳೆಯನ್ನು ರಕ್ಷಿಸಲಾಗಿದೆ.
ಸಂತ್ರಸ್ತೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಇಮ್ರಾನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ . ಪತಿ ತನ್ನ ದೂರಿನಲ್ಲಿ ಇಮ್ರಾನ್ ತನ್ನ ಹೆಂಡತಿಯನ್ನು ಮನೆಯಿಂದ ಹೊರಹೋಗುವಂತೆ ಆಮಿಷವೊಡ್ಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇಮ್ರಾನ್ ತಮ್ಮ ಧರ್ಮ ಗುರುಗಳಿಗೆ ಆಕೆಯನ್ನು ಪರಿಚಯಿಸಿ ನಮಾಜ್ ಮಾಡುವಂತೆ ಒತ್ತಾಯಿಸಲಾಗುತ್ತಿತ್ತು, ಇದಲ್ಲದೆ ಸಂತ್ರಸ್ತೆ ಚಿನ್ನಾಭರಣ ಮತ್ತು ನಗದು ಸಹಿತ ಮನೆ ಬಿಟ್ಟ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ. ಜನವರಿ 24 ರಂದು ಸೆಕ್ಷನ್ 87 ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಖೋಡಾ ನಿವಾಸಿಯಾಗಿರುವ ಇಮ್ರಾನ್ ತನ್ನ ಹೆಂಡತಿಗೆ ತಮ್ಮ ಮದುವೆಗೂ ಮುಂಚೆಯಿಂದಲೂ ಪರಿಚಯವಿದ್ದಾನೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ಓದಿ: ಹಿಂದೂ ಮನೆಗಳಿಗೆ ತೆರಳಿ ಮತಾಂತರಕ್ಕೆ ಯತ್ನ; ಇಬ್ಬರು ಮಹಿಳೆಯರನ್ನ ಪೊಲೀಸರಿಗೆ ಒಪ್ಪಿಸಿದ ಜನ
ಹಲವು ತಿಂಗಳುಗಳಿಂದ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ. ಜನವರಿ 9ರ ರಾತ್ರಿ ಮಹಿಳೆ ನಾಪತ್ತೆಯಾಗಿದ್ದಳು. ಪತಿ ಆಕೆಯನ್ನು ಹುಡುಕಲು ಪ್ರಯತ್ನಿಸಿ ವಿಫಲವಾದ ನಂತರ ಅವರು ವಿಜಯನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದರು. ಆಕೆ ಇಸ್ಲಾಂ ಧರ್ಮದ ಕಡೆಗೆ ಒಲವು ತೋರಿಸಲು ಶುರು ಮಾಡಿದ್ದಳು, ಇದು ಅನುಮಾನಗಳನ್ನು ಹುಟ್ಟುಹಾಕಿತು.
ಪತಿ ಇಮ್ರಾನ್ ಫೋನ್ ನಂಬರ್ ಮುಂತಾದ ಮಾಹಿತಿ ನೀಡಿದ್ದು ಆತನ ಬಂಧನಕ್ಕೆ ಕಾರಣವಾಯಿತು. ಇಮ್ರಾನ್ ತನ್ನನ್ನು ದೆಹಲಿ ಮತ್ತು ಗಾಜಿಯಾಬಾದ್‌ನ ದರ್ಗಾಗಳಿಗೆ ಕರೆದೊಯ್ದಿದ್ದಾಗಿ ಮಹಿಳೆ ತಿಳಿಸಿದ್ದಾಳೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಆದರೆ ಆತ ಮತಾಂತರ ಆರೋಪ ತಳ್ಳಿ ಹಾಕಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:15 pm, Sun, 26 January 25