Sign In

By signing in or creating an account, you agree with Associated Broadcasting Company's Terms & Conditions and Privacy Policy.

Republic Day 2025: ಗಣರಾಜ್ಯೋತ್ಸವ: ಮೊದಲ ಬಾರಿ 3 ಸೇನಾಪಡೆಗಳ ಜಂಟಿ ಸ್ತಬ್ಧಚಿತ್ರ ಪ್ರದರ್ಶನ

76ನೇ ಗಣರಾಜ್ಯೋತ್ಸವದ ಸಂಭ್ರಮ ದೇಶದೆಲ್ಲೆಡೆ ಇದೆ. ದೆಹಲಿಯ ಕರ್ತವ್ಯಪಥದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ 3 ಸೇನಾಪಡೆಗಳ ಜಂಟಿ ಸ್ತಬ್ಧಚಿತ್ರವನ್ನು ಪ್ರದರ್ಶನ ಮಾಡಲಾಗಿದೆ.. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಥೀಮ್‌ನ್ನು ಈ ಜಂಟಿ ಸ್ತಬ್ಧಚಿತ್ರ ಒಳಗೊಂಡಿತ್ತು. ಜಂಟಿ ಆಪರೇಷನ್‌ ಕೊಠಡಿ, ಅರ್ಜುನ್‌ ಟ್ಯಾಂಕರ್‌, ತೇಜಸ್‌, ಐಎನ್‌ಎಸ್‌ ವಿಶಾಖಪಟ್ಟಣ ನೌಕೆ ಮಾದರಿಯನ್ನು ಹೊಂದಿದೆ.

Republic Day 2025: ಗಣರಾಜ್ಯೋತ್ಸವ: ಮೊದಲ ಬಾರಿ 3 ಸೇನಾಪಡೆಗಳ ಜಂಟಿ ಸ್ತಬ್ಧಚಿತ್ರ ಪ್ರದರ್ಶನ
ಮೂರು ಸೇನಾಪಡೆಗಳುImage Credit source: India Today
Follow us
ನಯನಾ ರಾಜೀವ್
|

Updated on: Jan 26, 2025 | 12:06 PM

76ನೇ ಗಣರಾಜ್ಯೋತ್ಸವದ ಸಂಭ್ರಮ ದೇಶದೆಲ್ಲೆಡೆ ಇದೆ. ದೆಹಲಿಯ ಕರ್ತವ್ಯಪಥದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ 3 ಸೇನಾಪಡೆಗಳ ಜಂಟಿ ಸ್ತಬ್ಧಚಿತ್ರವನ್ನು ಪ್ರದರ್ಶನ ಮಾಡಲಾಗಿದೆ.. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಥೀಮ್‌ನ್ನು ಈ ಜಂಟಿ ಸ್ತಬ್ಧಚಿತ್ರ ಒಳಗೊಂಡಿತ್ತು. ಜಂಟಿ ಆಪರೇಷನ್‌ ಕೊಠಡಿ, ಅರ್ಜುನ್‌ ಟ್ಯಾಂಕರ್‌, ತೇಜಸ್‌, ಐಎನ್‌ಎಸ್‌ ವಿಶಾಖಪಟ್ಟಣ ನೌಕೆ ಮಾದರಿಯನ್ನು ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಾರ್ವಜನಿಕರನ್ನು ಹೆಚ್ಚಿನ ಪ್ರಮಾಣದಲ್ಲಿ ಆಹ್ವಾನಿಸುತ್ತಿದೆ. ಈ ಬಾರಿಯಂತೂ 10,000 ಮಂದಿಯನ್ನು ಆಹ್ವಾನಿಸಿದ್ದು, ಈ ಬಾರಿಯ ಕಾರ್ಯಕ್ರಮವನ್ನು ಜನಭಾಗೀದಾರಿ ಎಂದು ಕರೆದಿದೆ.

ಸುವರ್ಣ ಭಾರತ: ಪರಂ ಪರೆ ಮತ್ತು ಪಗ್ರತಿ ಎಂಬ ಥೀಮ್‌ನಲ್ಲಿ ಕಾರ್ಯಕ್ರಮ   ವನ್ನು ಆಯೋಜಿಸಿದ್ದು, ಸುವರ್ಣ ಭಾರತದ ನಿರ್ಮಾಣಕ್ಕೆ ಕಾರಣವಾದವರಿಗೆ ಆಹ್ವಾನ ನೀಡಲಾಗಿದೆ. ಗ್ರಾಮ ಪಂಚಾಯತ್‌ಗಳ ಮುಖ್ಯಸ್ಥರು, ಸ್ವಸಹಾಯ ಗುಂಪುಗಳ ಸದಸ್ಯರು, ಪಿಎಂ-ಜನಮನ್‌ ಯೋಜನೆಯ ಭಾಗೀ  ದಾರರು, ಬುಡಕಟ್ಟು ಕಲಾವಿದರು, ಆಶಾ ಕಾರ್ಯಕರ್ತರು, ವಿಪತ್ತು ನಿರ್ವಹಣ ದಳಗಳ ಸಿಬಂದಿ, ಪ್ಯಾರಾ ಒಲಿಂಪಿಕ್ಸ್‌ ಸ್ಪರ್ಧಿಗಳು ಸೇರಿದಂತೆ ಹಲವರನ್ನು ಆಹ್ವಾನಿಸಲಾಗಿತ್ತು.

ಮತ್ತಷ್ಟು ಓದಿ: Video:ಗಣರಾಜ್ಯೋತ್ಸವ: ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಒಟ್ಟು 31 ಸ್ತಬ್ಧಚಿತ್ರಗಳನ್ನು ಪ್ರದರ್ಶನ ಮಾಡಲಾಗಿದೆ. ಪಥ ಸಂಚಲನದಲ್ಲಿ ಗದಗ ಜಿಲ್ಲೆ ಲಕ್ಕುಂಡಿಯ ಶಿಲ್ಪ ಕಲೆಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ ಕರ್ನಾಟಕವನ್ನು ಪ್ರತಿನಿಧಿಸಲಿದೆ.

ಇದೇ ಮೊದಲ ಬಾರಿಗೆ ಕರ್ತವ್ಯಪಥದಲ್ಲಿ ಡಿಆರ್‌ಡಿಒ ನಿರ್ಮಾಣ ಮಾಡಿರುವ ಯುದ್ಧತಂತ್ರ ಕ್ಷಿಪಣಿ ಪ್ರಳಯ್‌ ಹಾಗೂ ಸೇನೆಯ ಕಣ್ಗಾವಲು ವ್ಯವಸ್ಥೆ ಸಂಜಯ್‌ ಕ್ಷಿಪಣಿ  ಗಳನ್ನು ಪ್ರದರ್ಶನ ಮಾಡಲಾಗಿದೆ. ಇದರೊಂದಿಗೆ ಬ್ರಹ್ಮೋ ಸ್‌, ಪಿನಾಕ, ಆಕಾಶ್‌ನಂತಹ ಅತ್ಯಾಧುನಿಕ ರಕ್ಷಣ ಸಾಧನ ಗಳು, 40 ಐಎಎಫ್ ವಿಮಾನ, ಕರಾ ವಳಿ ಪಡೆಯ 3 ಡಾರ್ನಿಯರ್‌ ವಿಮಾನಗಳೂ ಪ್ರದರ್ಶನಗೊಂಡವು.

ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಿರ್ಮಿಸಿದ ರಾಜ್ಯದ ಹಿರಿಮೆ, ಸರ್ವಧರ್ಮ ಸಮನ್ವಯ, ಶಾಂತಿ, ಸಹಬಾಳ್ವೆಯನ್ನು ಪ್ರತಿನಿಧಿಸುವ ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲು ಸ್ತಬ್ಧಚಿತ್ರದ ಮಾದರಿ ಪ್ರದರ್ಶನಗೊಳ್ಳಲಿದೆ. ಭಾರತದ ಪರಂಪರೆ ಮತ್ತು ಪ್ರಗತಿಯನ್ನು ಜಗತ್ತಿಗೆ ತೋರಿಸುವ ನಿಟ್ಟಿನಲ್ಲಿ ಇವುಗಳನ್ನು ತಯಾರು ಮಾಡಲಾಗಿದೆ. ಇದರಲ್ಲಿ 16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ, ಕೇಂದ್ರ ಸರಕಾರದ ಸಚಿವಾಲಯಗಳ 10 ಸ್ತಬ್ಧಚಿತ್ರ ಪ್ರದರ್ಶನಗೊಳ್ಳುತ್ತಿವೆ.

ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಈ ಬಾರಿಯ ಗಣರಾಜ್ಯೋತ್ಸವ ಪರೇಡನ್ನು ಆಯೋಜನೆ ಮಾಡಲಾಗಿತ್ತು. ಇದಲ್ಲದೆ ಪ್ರತೀ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಿಂದ ಒಂದು ಜೋಡಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಉಡುಪುಗಳನ್ನು ಧರಿಸಿ ಭಾಗಿಯಾಗಿದ್ದಾರೆ. ಕರ್ತವ್ಯಪಥ ದಲ್ಲಿ ಭಾಗಿಯಾಗುವ ಕಲಾ ತಂಡಗಳು ಸಹ ಸಂಸ್ಕೃತಿಯನ್ನು ಬಿಂಬಿಸುವಂತೆ ಉಡುಪುಗಳನ್ನು ಧರಿಸಿ ಭಾಗಿಯಾಗಿದ್ದರು. ಕರ್ತವ್ಯ  ಪಥದ ಸುತ್ತಮುತ್ತಲಿನ ಪ್ರದೇಶವನ್ನು ಸಹ ಭಾರತದ ಪರಂಪರೆಯನ್ನು ಬಿಂಬಿಸುವಂತೆ ಸಿಂಗರಿಸಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ