ಜಮ್ಮು-ಕಾಶ್ಮೀರ ವಿವಾದಿತ ಎನ್ಕೌಂಟರ್: ಮಗನ ಶವ ಹೂಳಲು ಗುಂಡಿ ತೋಡಿದ ತಂದೆ
ಅಥರ್ ಮುಷ್ತಾಕ್ ಎಂಬಾತನನ್ನು ಭದ್ರತಾ ಸಿಬ್ಬಂದಿ ಎನ್ಕೌಂಟರ್ ಮಾಡಿದ್ದರು. ಅಥರ್ ಹಾಗೂ ಆತನ ಸಹಚರರ ಮೇಲೆ ಉಗ್ರರ ಜೊತೆ ನಂಟು ಹೊಂದಿದ್ದರು ಎನ್ನುವ ಆರೋಪ ಹೊರಿಸಲಾಗಿತ್ತು.

ಶ್ರೀನಗರ: ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ನಡೆದ ವಿವಾದಿತ ಎನ್ಕೌಂಟರ್ನಲ್ಲಿ 11ನೇ ತರಗತಿಯ ವಿದ್ಯಾರ್ಥಿ ಮೃತಪಟ್ಟಿದ್ದ. ಈತ ಶಂಕಿತ ಉಗ್ರ ಎಂದು ಕೂಡ ಆರೋಪಿಸಲಾಗಿದೆ. ಈ ಘಟನೆ ನಡೆದು ನಾಲ್ಕು ದಿನಗಳ ನಂತರವೂ ಮಗನ ಶವ ಸಿಗುವ ಭರವಸೆಯಲ್ಲಿರುವ ತಂದೆ, ಶವ ಹೂಳಲು ಗುಂಡಿ ತೋಡಿದ್ದಾರೆ.
ಅಥರ್ ಮುಷ್ತಾಕ್ ಎಂಬಾತನನ್ನು ಭದ್ರತಾ ಸಿಬ್ಬಂದಿ ಎನ್ಕೌಂಟರ್ ಮಾಡಿದ್ದರು. ಅಥರ್ ಹಾಗೂ ಆತನ ಸಹಚರರು ಉಗ್ರರ ಜೊತೆ ನಂಟು ಹೊಂದಿದ್ದರು. ಶ್ರೀನಗರ-ಬಾರಾಮುಲ್ಲ ಹೆದ್ದಾರಿಯಲ್ಲಿ ದೊಡ್ಡಮಟ್ಟದ ಉಗ್ರರ ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನುವ ಆರೋಪ ಇವರ ಮೇಲಿತ್ತು.
ಇನ್ನು, ಭದ್ರತಾ ಸಿಬ್ಬಂದಿ ಈಗಾಗಲೇ ಅಥರ್ ಮುಷ್ತಾಕ್ ಹೆಣವನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು ಸುಟ್ಟಿದ್ದಾರೆ. ಈ ಮಧ್ಯೆಯೂ ಅಥರ್ ಮುಷ್ತಾಕ್ ಕುಟುಂಬ ಮಗನ ಶವ ಸಿಗುವ ಭರವಸೆಯಲ್ಲಿದೆ. ಇದಕ್ಕಾಗಿ ಮನೆಯ ಸಮೀಪವೇ ಗುಂಡಿಯೊಂದನ್ನು ತೋಡಿದೆ. ನನ್ನ ಮಗನ ಶವವನ್ನು ಭದ್ರತಾ ಸಿಬ್ಬಂದಿ ನೀಡುವ ಭರವಸೆ ಇದೆ. ನಮ್ಮ ಪೂರ್ವಜರು ಹೂಳಿದ ಜಾಗದಲ್ಲೇ ನನ್ನ ಮಗನನ್ನು ಹೂಳಬೇಕು ಎನ್ನುವ ಆಸೆ ನನ್ನದು ಎಂದಿದ್ದಾರೆ ಅಥರ್ ತಂದೆ.
ಇತ್ತೀಚೆಗೆ ಸೋನ್ಮಾರ್ಗ್ನಲ್ಲಿ ನಡೆದ ಈ ಎನ್ಕೌಂಟರ್ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು. ಭದ್ರತಾ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಮುಗ್ಧರನ್ನು ಗುಂಡಿಟ್ಟುಕೊಂದಿದೆ ಎಂದು ಆರೋಪಿಸಿದೆ.