No more corona, ಜೂನ್ 1ರಿಂದ Free for all ಅಂದ್ರು ಮಮತಾ ದೀದಿ!

ಕೋಲ್ಕತ್ತಾ: ಕೊರೊನಾ ಕ್ರಿಮಿಯಾಟದ ಆರಂಭದಿಂದಲೂ ಲಾಕ್​ಡೌನ್​ ಬಗ್ಗೆ ಅಪಶ್ರುತಿ ಹಾಡುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕೊರೊನಾ ಸಂಕಷ್ಟ ಸಾಕು ಸಾಕು ಅನ್ನಿಸಿದೆ. ಅದರ ಜೊತೆಗೆ ಅಂಫಾನ್ ಚಕ್ರಸುಳಿಯಲ್ಲಿ ಸಿಲುಕಿ ರಅಜ್ಯದ ಜನತೆ ಬಸವಳಿದಿದ್ದಾರೆ. ಹಾಗಾಗಿ, ಸಿಎಂ ಬ್ಯಾನರ್ಜಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಲಾಕ್​ಡೌನ್​ 4 ಮುಗಿಯುತ್ತಿದ್ದಂತೆ ಜೂನ್ 1ರಿಂದ ರಾಜ್ಯದಲ್ಲಿ ಎಲ್ಲ ಚಟುವಟಿಕೆಗಳನ್ನೂ ಮುಕ್ತಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ. ಪೂಜಾ ಮಂದಿರ, ಮಸೀದಿ, ಗುರುದ್ವಾರಗಳನ್ನು ಜೂನ್ 1ರಿಂದಲೇ ತೆರೆಯಲಾಗುವುದು. ಆದ್ರೆ 10 ಜನಕ್ಕಿಂತ ಹೆಚ್ಚು ಮಂದಿ […]

No more corona, ಜೂನ್ 1ರಿಂದ Free for all ಅಂದ್ರು ಮಮತಾ ದೀದಿ!
ಸಾಧು ಶ್ರೀನಾಥ್​

Updated on: May 29, 2020 | 5:21 PM

ಕೋಲ್ಕತ್ತಾ: ಕೊರೊನಾ ಕ್ರಿಮಿಯಾಟದ ಆರಂಭದಿಂದಲೂ ಲಾಕ್​ಡೌನ್​ ಬಗ್ಗೆ ಅಪಶ್ರುತಿ ಹಾಡುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕೊರೊನಾ ಸಂಕಷ್ಟ ಸಾಕು ಸಾಕು ಅನ್ನಿಸಿದೆ. ಅದರ ಜೊತೆಗೆ ಅಂಫಾನ್ ಚಕ್ರಸುಳಿಯಲ್ಲಿ ಸಿಲುಕಿ ರಅಜ್ಯದ ಜನತೆ ಬಸವಳಿದಿದ್ದಾರೆ. ಹಾಗಾಗಿ, ಸಿಎಂ ಬ್ಯಾನರ್ಜಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಲಾಕ್​ಡೌನ್​ 4 ಮುಗಿಯುತ್ತಿದ್ದಂತೆ ಜೂನ್ 1ರಿಂದ ರಾಜ್ಯದಲ್ಲಿ ಎಲ್ಲ ಚಟುವಟಿಕೆಗಳನ್ನೂ ಮುಕ್ತಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.

ಪೂಜಾ ಮಂದಿರ, ಮಸೀದಿ, ಗುರುದ್ವಾರಗಳನ್ನು ಜೂನ್ 1ರಿಂದಲೇ ತೆರೆಯಲಾಗುವುದು. ಆದ್ರೆ 10 ಜನಕ್ಕಿಂತ ಹೆಚ್ಚು ಮಂದಿ ಸೇರಬಾರದು. ಧಾರ್ಮಿಕ ಸ್ಥಳಗಳಲ್ಲಿ ಜನ ಜಮಾಯಿಸುವುದನ್ನು ನಿಷೇಧಿಸಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಮಾಹಿತಿ ನೀಡಿದ್ದಾರೆ.

Published On - 5:07 pm, Fri, 29 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us