ಇಂಫಾಲ್ನಲ್ಲಿ ಮೈತಿ ಮುಖ್ಯಸ್ಥರಿದ್ದ ವಾಹನದ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ
ಇಂಫಾಲ್ನ ಲಾಂಗೋಲ್ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದೆ. ಮಣಿಪುರದ ಮೈತಿ ಮುಖ್ಯಸ್ಥರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಆರು ಗುಂಡುಗಳನ್ನು ವಾಹನದ ಮೇಲೆ ಹಾರಿಸಲಾಗಿದೆ, ಮೂಲಗಳ ಪ್ರಕಾರ ಶುಕ್ರವಾರ ಬೆಳಗ್ಗೆ 7.10ರ ಸುಮಾರಿಗೆ ಆಸ್ಪತ್ರೆಯೊಂದರ ಬಳಿ ಪ್ರಮೋತ್ ಸಿಂಗ್ ಅವರಿದ್ದ ವಾಹನವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.
ಇಂಫಾಲ್ನ ಲಾಂಗೋಲ್ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದೆ. ಮಣಿಪುರದ ಮೈತಿ(Meitei )ಮುಖ್ಯಸ್ಥರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಆರು ಗುಂಡುಗಳನ್ನು ವಾಹನದ ಮೇಲೆ ಹಾರಿಸಲಾಗಿದೆ, ಮೂಲಗಳ ಪ್ರಕಾರ ಶುಕ್ರವಾರ ಬೆಳಗ್ಗೆ 7.10ರ ಸುಮಾರಿಗೆ ಆಸ್ಪತ್ರೆಯೊಂದರ ಬಳಿ ಪ್ರಮೋತ್ ಸಿಂಗ್ ಅವರಿದ್ದ ವಾಹನವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.
ಸಿಂಗ್ ಈ ಕುರಿತು ಮಾಹಿತಿ ನೀಡಿದ್ದು, ನನಗೆ ಯಾವುದೇ ಹಾನಿಯಾಗಿಲ್ಲ ನಾನು ಆರೋಗ್ಯವಾಗಿದ್ದೇನೆ, ಸಿಂಗ್ ಇದ್ದ ಕಾರಿನ ಚಾಲಕ ಇನ್ನೇನು ಕಾರನ್ನು ನಿಲ್ಲಿಸಬೇಕೆನ್ನುವಷ್ಟರಲ್ಲಿ ಗುಂಡಿನ ದಾಳಿ ನಡೆದಿದೆ. ಪ್ರಮೋತ್ ಸಿಂಗ್ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಹೆಚ್ಚಿಸುವ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಮೇ3 ರಿಂದ ಮೈತಿ ಹಾಗೂ ಬುಡಕಟ್ಟು ಸಮುದಾಯ ಕುಕಿ ನಡುವೆ ಹಿಂಸಾಚಾರ ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ ಕನಿಷ್ಠ 175 ಮಂದಿ ಮೃತಪಟ್ಟಿದ್ದಾರೆ. 50 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಕುಕಿ ಗುಂಪುಗಳು ಮಣಿಪುರದಲ್ಲಿ ಹಿಂಸಾಚಾರವನ್ನು ಪ್ರಚೋದಿಸುತ್ತಿವೆ ಎಂದು ಮೈತಿ ಸಮುದಾಯ ಆರೋಪಿಸಿದೆ.
ಮತ್ತಷ್ಟು ಓದಿ: ಮಣಿಪುರ: ಇಬ್ಬರು ಮೈತಿ ವಿದ್ಯಾರ್ಥಿಗಳನ್ನು ಅಪಹರಿಸಿ, ಹತ್ಯೆ ಪ್ರಕರಣದಲ್ಲಿ 5ನೇ ಆರೋಪಿ ಬಂಧನ
ಜೂನ್ 7 ರಂದು ದಿ ವೈರ್‌ನ ಪತ್ರಕರ್ತರೊಂದಿಗಿನ ಸಂದರ್ಶನದ ನಂತರ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂದರ್ಶನದಲ್ಲಿ ಅವರು ಕುಕಿಗಳನ್ನು ಹೊರಗಿನವರು ಮತ್ತು ಮಣಿಪುರದ ಸ್ಥಳೀಯರಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ