ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​​​ಗೆ ಡೆಂಗ್ಯೂ; ಏಮ್ಸ್​ ವೈದ್ಯರಿಂದ ಮಾಹಿತಿ

ಮಾಜಿ ಪ್ರಧಾನಮಂತ್ರಿ ಮನಮೋಹನ್ ​ಸಿಂಗ್​ ಏಪ್ರಿಲ್​​ನಲ್ಲಿ ಕೊರೊನಾಕ್ಕೆ ಒಳಗಾಗಿದ್ದರು. ಆಗಲೂ ಸಹ ಏಮ್ಸ್​ಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು.

ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​​​ಗೆ ಡೆಂಗ್ಯೂ; ಏಮ್ಸ್​ ವೈದ್ಯರಿಂದ ಮಾಹಿತಿ
ಕಾಂಗ್ರೆಸ್​ ನಾಯಕ ಮನಮೋಹನ್​ ಸಿಂಗ್​
Follow us
TV9 Web
| Updated By: Lakshmi Hegde

Updated on: Oct 16, 2021 | 3:45 PM

ಅನಾರೋಗ್ಯದಿಂದ ದೆಹಲಿಯ ಏಮ್ಸ್​ (AIIMS)ಗೆ ದಾಖಲಾಗಿರುವ ಮಾಜಿ ಪ್ರಧಾನಮಂತ್ರಿ ಮನಮೋಹನ್​ ಸಿಂಗ್​​(Manmohan Singh )ಅವರಿಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ. ಅಪಾಯವಿಲ್ಲ, ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಇಂದು ಏಮ್ಸ್​ ವೈದ್ಯರು ತಿಳಿಸಿದ್ದಾರೆ. ಮನಮೋಹನ್​ ಸಿಂಗ್​ ಅವರಲ್ಲಿ ಪ್ಲೇಟ್​ಲೆಟ್​ ಪ್ರಮಾಣ ಕುಸಿದಿತ್ತು. ಇದೀಗ ಅದರಲ್ಲಿ ಏರಿಕೆಯಾಗುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ. 

ಮಾಜಿ ಪ್ರಧಾನಮಂತ್ರಿ, ಕಾಂಗ್ರೆಸ್​ ಹಿರಿಯ ನಾಯಕ ಮನಮೋಹನ್​ ಸಿಂಗ್​ ಅವರಲ್ಲಿ ಬುಧವಾರ ರಾತ್ರಿ ಜ್ವರ, ಸುಸ್ತು ಕಾಣಿಸಿಕೊಂಡಿತ್ತು. ಅದಾದ ನಂತರ ಅವರನ್ನು ಏಮ್ಸ್​​ನ​​  ಕಾರ್ಡಿಯೋ-ನ್ಯೂರೋ ಸೆಂಟರ್​​ನಲ್ಲಿರುವ ಖಾಸಗಿ ವಾರ್ಡ್​​​ಗೆ ದಾಖಲಿಸಲಾಗಿತ್ತು.ಹೃದ್ರೋಗ ತಜ್ಞರು ನಿಗಾವಹಿಸಿದ್ದರು.  ಇದೀಗ ಅವರಲ್ಲಿ ಡೆಂಗ್ಯೂ ಇರುವುದು ಗೊತ್ತಾಗಿದ್ದು, ವೈದ್ಯ ನಿತೀಶ್​ ನಾಯಕ್​ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮನಮೋಹನ್​ ಸಿಂಗ್​ ಶೀಘ್ರವೇ ಗುಣಮುಖರಾಗಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾರೈಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಏಮ್ಸ್​ಗೆ ಭೇಟಿ ನೀಡಿ, ಅವರ ಆರೋಗ್ಯದ ಬಗ್ಗೆ ವರದಿ ಪಡೆದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿಯವರೂ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮನಮೋಹನ್ ​ಸಿಂಗ್​ ಏಪ್ರಿಲ್​​ನಲ್ಲಿ ಕೊರೊನಾಕ್ಕೆ ಒಳಗಾಗಿದ್ದರು. ಆಗಲೂ ಸಹ ಏಮ್ಸ್​ಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು.

ಇದನ್ನೂ ಓದಿ: ಮೋದಿ ವಿರುದ್ಧ ಮಾತಾಡಿದ್ರೆ ದೇಶದ್ರೋಹಿಯಂತೆ, ಯಾವನ್ರಿ ಇವನು ಪ್ರಧಾನ ಮಂತ್ರಿ? -ಸಿದ್ದರಾಮಯ್ಯ ಗುಡುಗು

Viral Videos: ಆಹಾ, ಇಷ್ಟೊಂದು ಮುದ್ದುಮುದ್ದಾಗಿ ಕದಿಯಬಹುದಾ?; ಚಾಣಾಕ್ಷ ಶ್ವಾನಗಳ ವಿಡಿಯೋ ನೋಡಿ