ಜಯಲಲಿತಾ ಸ್ಮಾರಕಕ್ಕೆ ವಿ.ಕೆ.ಶಶಿಕಲಾ ಭೇಟಿ; ಕಣ್ಣೀರಿಡುತ್ತಲೇ ಪುಷ್ಪ ನಮನ ಸಲ್ಲಿಸಿದ ಅಮ್ಮನ ಆಪ್ತೆ
ಶಶಿಕಲಾ ಬೇನಾಮಿ ಆಸ್ತಿ ಪ್ರಕರಣದಲ್ಲಿ 2017ರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದ್ದರು. ಜೈಲಿಗೆ ಹೋಗುವ ಮೊದಲು ಅಂದರೆ 2017ರ ಫೆಬ್ರವರಿ 14ರಂದು ಜಯಲಲಿತಾ ಸ್ಮಾರಕಕ್ಕೆ ಭೇಟಿಕೊಟ್ಟು ನಮನ ಸಲ್ಲಿಸಿದ್ದರು.
ಚೆನ್ನೈ: ವಿ.ಕೆ.ಶಶಿಕಲಾ ಜೈಲಿನಿಂದ ಬಿಡುಗಡೆಯಾದ ಮೇಲೆ ರಾಜಕೀಯ (Tamil Nadu Politics)ದಿಂದಲೂ ದೂರವೇ ಉಳಿದಿದ್ದರು. ಮಾಜಿ ಸಿಎಂ ಜಯಲಲಿತಾ ಆಪ್ತೆಯಾಗಿದ್ದ ಶಶಿಕಲಾ (VK Sasikala) ಇಂದು ಚೆನ್ನೈನ ಮರೀನಾ ಬೀಚ್ನಲ್ಲಿರುವ ಜಯಲಲಿತಾ ಸ್ಮಾರಕಕ್ಕೆ ಭೇಟಿ ನೀಡಿ, ಅಲ್ಲಿ ಪುಷ್ಪ ನಮನ ಸಲ್ಲಿಸಿದರು. ಜಯಲಲಿತಾ ಸ್ಮಾರಕ್ಕೆ ಶಶಿಕಲಾ ತೆರಳಿದ ವಾಹನದ ಮೇಲೆ ಎಐಎಡಿಎಂಕೆ ಧ್ವಜ ಇತ್ತು. ಹಾಗೇ, ಜಯಲಲಿತಾ ಸ್ಮಾರಕಕ್ಕೆ ಶಶಿಕಲಾ ಪುಷ್ಪನಮನ ಸಲ್ಲಿಸುವ ವೇಳೆ ಅವರು ತುಂಬ ಭಾವುಕರಾಗಿದ್ದಾರೆ. ಕಣ್ಣಲ್ಲಿ ಜಿನುಗುತ್ತಿದ್ದ ನೀರನ್ನು ಒರೆಸಿಕೊಳ್ಳುವ ದೃಶ್ಯ ಕಾಣುತ್ತಿತ್ತು.
ಶಶಿಕಲಾ ಬೇನಾಮಿ ಆಸ್ತಿ ಪ್ರಕರಣದಲ್ಲಿ 2017ರಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೇರಿದ್ದರು. ಜೈಲಿಗೆ ಹೋಗುವ ಮೊದಲು ಅಂದರೆ 2017ರ ಫೆಬ್ರವರಿ 14ರಂದು ಜಯಲಲಿತಾ ಸ್ಮಾರಕಕ್ಕೆ ಭೇಟಿಕೊಟ್ಟು ನಮನ ಸಲ್ಲಿಸಿದ್ದರು. ಹಾಗೇ, ಕಳೆದ ವರ್ಷ ಫೆಬ್ರವರಿಯಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆಗಿನಿಂದಲೂ ಜಯಲಲಿತಾ ಸ್ಮಾರಕಕ್ಕೆ ಬರಲು ಅವರು ತುಂಬ ಉತ್ಸುಕರಾಗಿದ್ದರು ಎಂದು ಹೇಳಲಾಗಿದೆ. ಜೈಲಿನಿಂದ ಬಿಡುಗಡೆಯಾದ ಶಶಿಕಲಾ ಮೇಲೆ ಎಲ್ಲರ ಕಣ್ಣಿತ್ತು. ಮತ್ತೆ ರಾಜಕೀಯಕ್ಕೆ ಇಳಿಯುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಮಾರ್ಚ್ನಲ್ಲಿ ರಾಜಕೀಯದಿಂದ ದೂರವೇ ಇರುವುದಾಗಿ ಅವರು ಘೋಷಿಸಿದ್ದರು. ಹಾಗೇ ನಾನೀಗ ಒಮ್ಮೆಲೇ ರಾಜಕಾರಣಕ್ಕೆ ಬರುವುದರಿಂದ ಎಐಎಡಿಎಂಕೆ ಪಕ್ಷಕ್ಕೆ ಹಾನಿಯಾಗಬಹುದು ಎಂದು ಹೇಳಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಸೋತು, ಇದೀಗ ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಅಧಿಕಾರಕ್ಕೆ ಏರಿದೆ. ಜತೆಜತೆಗೆ, ಶಶಿಕಲಾ ಮತ್ತೊಮ್ಮೆ ರಾಜಕೀಯಕ್ಕೆ ಇಳಿಯುತ್ತಾರೆ ಎಂಬ ಸುದ್ದಿಯೂ ಬಲವಾಗಿದೆ.
ಎಐಎಡಿಎಂಕೆ ಕೇವಲ ವಿಧಾನಸಭೆ ಚುನಾವಣೆಯಲ್ಲಷ್ಟೇ ಅಲ್ಲದೆ, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಸೋತಿದೆ. 153 ಜಿಲ್ಲಾ ಪಂಚಾಯಿತಿ ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ 139ರಲ್ಲಿ ಡಿಎಂಕೆ ಗೆದ್ದರೆ, ಎಐಎಡಿಎಂಕೆ 2 ರಲ್ಲಿ ಮಾತ್ರ ಗೆದ್ದಿದೆ. ಹಾಗೇ, 1421 ಪಂಚಾಯತ್ ಯೂನಿಯನ್ ವಾರ್ಡ್ಸ್ಗಳಲ್ಲಿ ಡಿಎಂಕೆ ಮತ್ತು ಎಐಡಿಎಂಕೆಗಳು ಕ್ರಮವಾಗಿ 977 ಮತ್ತು 212 ಸೀಟ್ ಗೆದ್ದಿವೆ. ಈ ಹೊತ್ತಲ್ಲಿ ಶಶಿಕಲಾ ಮತ್ತೆ ಪಕ್ಷಕ್ಕೆ ಮರಳುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ: ಕುಮಾರಸ್ವಾಮಿಗೆ RSS ಗಂಧಗಾಳಿ ಗೊತ್ತಿಲ್ಲ; ಯಾವುದೋ ಒಂದು ಪುಸ್ತಕ ಓದಿ ಅದೇ ಸತ್ಯ ಅಂತಾರೆ: ಆರ್ ಅಶೋಕ್
ಪ್ರತಿಸ್ಪರ್ಧಿ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಕಾರ್ಯಕರ್ತರಿಗೆ ರಾಷ್ಟ್ರೀಯತೆಯ ಬಗ್ಗೆ ತರಬೇತಿ