
ನವದೆಹಲಿ, ಡಿಸೆಂಬರ್ 28: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಈ ವರ್ಷದ ಕೊನೆಯ ಮನ್ ಕಿ ಬಾತ್‌ನಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಉಗ್ರರ ದಾಳಿಯಿಂದ ಹಿಡಿದು ಆರೋಗ್ಯ ಸಮಸ್ಯೆಯವರೆಗೆ ಹಲವು ವಿಷಯಗಳವರೆಗೆ ಅವರು ಬೆಳಕು ಚೆಲ್ಲಿದ್ದಾರೆ. ಆದರೆ, ದೆಹಲಿ ಸೇರಿದಂತೆ ದೆಹಲಿಯ ಹಲವು ನಗರಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಬಗ್ಗೆ ಅವರು ಯಾವುದೇ ಪ್ರಸ್ತಾಪವನ್ನೂ ಮಾಡಿಲ್ಲ. ತಮ್ಮ ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಪ್ರತಿಯೊಬ್ಬ ಭಾರತೀಯರು ಗಂಭೀರವಾಗಿ ಪರಿಗಣಿಸಬೇಕಾದ ಆರೋಗ್ಯ ಎಚ್ಚರಿಕೆಯನ್ನು ಹಂಚಿಕೊಂಡಿದ್ದಾರೆ.
ಭಾರತದ ಯುವ ಜನರು ದೇಶದ ಅತಿದೊಡ್ಡ ಭರವಸೆಯ ಮೂಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜನವರಿ 12ರಂದು ರಾಷ್ಟ್ರೀಯ ಯುವ ದಿನ ಹಾಗೂ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯಂದು ವಿಕಸಿತ ಭಾರತ ಯುವ ನಾಯಕರ ಸಂವಾದದ ಎರಡನೇ ಆವೃತ್ತಿ ನಡೆಯಲಿದೆ ಎಂದು ಅವರು ಘೋಷಿಸಿದ್ದಾರೆ.
ICMR यानि इंडियन काउंसिल ऑफ मेडिकल रिसर्च की हाल ही की एक रिपोर्ट बताती है कि निमोनिया और UTI जैसी बीमारियों में Antibiotic दवाएं कमजोर साबित हो रही हैं। इसका एक बड़ा कारण बिना सोचे-समझे इनका सेवन है। इसलिए मेरा आग्रह है कि Doctors की सलाह के बिना Antibiotics दवाएं ना लें।… pic.twitter.com/X7OzxSIy10
— Narendra Modi (@narendramodi) December 28, 2025
ಇದನ್ನೂ ಓದಿ: ಮನ್ ಕಿ ಬಾತ್‌ನಲ್ಲಿ ಕನ್ನಡ ಡಿಂಡಿಮ: ದುಬೈನಲ್ಲಿ ಕನ್ನಡಾಭಿಮಾನಕ್ಕೆ ಮೋದಿ ಶ್ಲಾಘನೆ
ಈ ವೇಳೆ ಆರೋಗ್ಯದ ಬಗ್ಗೆ ಗಮನಹರಿಸಿದ ಪ್ರಧಾನಿ ಮೋದಿ, “ನ್ಯುಮೋನಿಯಾ ಮತ್ತು ಮೂತ್ರನಾಳದ ಸೋಂಕುಗಳು (ಯುಟಿಐ) ನಂತಹ ರೋಗಗಳ ವಿರುದ್ಧ ಪ್ರತಿಜೀವಕಗಳು (ಆ್ಯಂಟಿಬಯೋಟಿಕ್) ಕಡಿಮೆ ಪರಿಣಾಮಕಾರಿಯಾಗುತ್ತಿವೆ ಎಂದು ಎಚ್ಚರಿಸುವ ಇತ್ತೀಚಿನ ಐಸಿಎಂಆರ್ ವರದಿಯನ್ನು ಪ್ರಧಾನಿ ಬಹಿರಂಗಪಡಿಸಿದ್ದಾರೆ. ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯೋಟಿಕ್ಗಳನ್ನು ಬಳಸದಂತೆ ಅವರು ಜನರ ಬಳಿ ಮನವಿ ಮಾಡಿದ್ದಾರೆ. ಇವುಗಳ ಅತಿಯಾದ ಬಳಕೆ ಅಥವಾ ಯಾವುದೇ ವೈದ್ಯಕೀಯ ಸಲಹೆಯಿಲ್ಲದ ಬಳಕೆಯು ಅವುಗಳ ಪರಿಣಾಮಕಾರಿತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಹೇಳಿದ್ದಾರೆ. ಆ್ಯಂಟಿಬಯೋಟಿಕ್ ಔಷಧಿಯನ್ನು ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯಲೇಬೇಕು” ಎಂದು ಅವರು ಎಚ್ಚರಿಸಿದ್ದಾರೆ.
Citing the ICMR report in Mann Ki Baat, Prime Minister Shri Narendra Modi highlighted indiscriminate use of antibiotics as a key driver of Antimicrobial Resistance (AMR), warning against the growing belief that a single pill can cure every illness. Antibiotics are not a quick fix… pic.twitter.com/uS8OFCq9gb
— Ministry of Health (@MoHFW_INDIA) December 28, 2025
ನ್ಯುಮೋನಿಯಾ ಮತ್ತು ಮೂತ್ರನಾಳದ ಸೋಂಕುಗಳು (ಯುಟಿಐ) ನಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸುವ ಆ್ಯಂಟಿಬಯೋಟಿಕ್ಗಳು ಹೆಚ್ಚು ನಿಷ್ಪರಿಣಾಮಕಾರಿಯಾಗುತ್ತಿವೆ ಎಂದು ಐಸಿಎಂಆರ್ ವರದಿಯು ಕಂಡುಹಿಡಿದಿದೆ. ಇದು ತುಂಬಾ ಆತಂಕಕಾರಿ ಸಂಗತಿ. ವೈದ್ಯಕೀಯ ಸಲಹೆಯಿಲ್ಲದೆ ಜನರು ಆ್ಯಂಟಿಬಯೋಟಿಕ್ಗಳನ್ನು ಸೇವಿಸುವ ಅಭ್ಯಾಸವು ಬೆಳೆಯುತ್ತಿರುವುದು ಆತಂಕಕಾರಿ ಸಂಗತಿ. ಪ್ರತಿಜೀವಕಗಳು ಹಾಗೆ ಯಾರು ಬೇಕಾದರೂ ಹೇಗೆ ಬೇಕಾದರೂ ತೆಗೆದುಕೊಳ್ಳಬಹುದಾದ ಔಷಧಿಗಳಲ್ಲ. ಅವುಗಳನ್ನು ವೈದ್ಯರ ಸಲಹೆಯ ನಂತರ ಮಾತ್ರ ಬಳಸಬೇಕು” ಎಂದು ಮೋದಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Mann Ki Baat: ಬೆಂಗಳೂರಿನ ಐಐಎಸ್ಸಿಯನ್ನು ಹಾಡಿಹೊಗಳಿದ ಪ್ರಧಾನಿ ಮೋದಿ
“ಇದು 2025ರ ಮನ್ ಕಿ ಬಾತ್ನ ಕೊನೆಯ ಕಂತು. 2026ರಲ್ಲಿ ನಾವು ಮತ್ತೆ ಭೇಟಿಯಾಗುತ್ತೇವೆ. ಹೊಸ ಕಂತುಗಳು, ಹೊಸ ಸಮಸ್ಯೆಗಳೊಂದಿಗೆ ನಾವು ಅದೇ ಉತ್ಸಾಹ, ಶಕ್ತಿ ಮತ್ತು ಒಗ್ಗಟ್ಟಿನ ಭಾವನೆಯೊಂದಿಗೆ ಹಿಂತಿರುಗುತ್ತೇವೆ” ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್ನ ಕೊನೆಯಲ್ಲಿ ಹೇಳಿದ್ದಾರೆ. ಚಳಿಗಾಲದಲ್ಲಿ ಜನರು ಹೆಚ್ಚು ಆರೋಗ್ಯದ ಬಗ್ಗೆ ಗಮನ ಹರಿಸಲು ಒತ್ತಾಯಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:59 pm, Sun, 28 December 25