Bihar: ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರಿ ಸ್ಪೋಟ; 7 ಜನರ ದುರ್ಮರಣ
ಸ್ಫೋಟಕ್ಕೆ ಪ್ರಾಥಮಿಕ ಕಾರಣವೆಂದರೆ ಗನ್‌ಪೌಡರ್, ಅಕ್ರಮ ಪಟಾಕಿಗಳು ಮತ್ತು ಕಟ್ಟಡದಲ್ಲಿ ಸಂಗ್ರಹಿಸಲಾದ ದೇಶ ನಿರ್ಮಿತ ಬಾಂಬ್‌ಗಳು ಎಂದು ಭಾಗಲ್ಪುರ ರೇಂಜ್ ಡಿಐಜಿ ಸುಜಿತ್ ಕುಮಾರ್ ಹೇಳಿದ್ದಾರೆ.

ಬಿಹಾರ: ಇಲ್ಲಿನ ಭಾಗಲ್ಪುರ್ದಲ್ಲಿ ಗುರುವಾರ ರಾತ್ರಿ ಮೂರು ಅಂತಸ್ತಿನ ಕಟ್ಟಡದಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 7 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿರುವ ಜಿಲ್ಲೆಯ ಕಜ್ವಾಲಿಚಕ್ ಪ್ರದೇಶದ ಅನಾಥಾಶ್ರಮದ ಪಕ್ಕದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಮತ್ತು ತುರ್ತು ಸೇವೆಗಳು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ಕುಸಿದ ಕಟ್ಟಡದ ಅವಶೇಷಗಳಡಿ ಸುಮಾರು 10 ರಿಂದ 15 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಗಾಯಾಳುಗಳನ್ನು ಮಾಯಗಂಜ್‌ನ ಜೆಎಲ್‌ಎನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಬಲ ಸ್ಫೋಟದಲ್ಲಿ ಅಕ್ಕಪಕ್ಕದ ಎರಡರಿಂದ ಮೂರು ಮನೆಗಳಿಗೂ ಹಾನಿಯಾಗಿದೆ.
Bihar | 7 dead and several injured in an explosion in Tatarpur police jurisdiction in Bhagalpur dist
Prima facie it is coming to light that the family was involved in making firecrackers. 2-3 houses damaged. We are further investigating the matter: Bhagalpur DM, Subrat Kumar Sen pic.twitter.com/poKM63Loi4
— ANI (@ANI) March 4, 2022
ಮೊಹಮ್ಮದ್ ಯೂಸುಫ್ ಎನ್ನುವ ನೆರೆಹೊರೆಯವರ ಪ್ರಕಾರ, ನಾಶವಾದ ಕಟ್ಟಡದ ನಿವಾಸಿಗಳು ಪಟಾಕಿ ತಯಾರಿಕೆಯಲ್ಲಿ ತೊಡಗಿದ್ದರು ಎಂದು ಹೇಳಿದ್ದಾರೆ. ಸ್ಫೋಟಕ್ಕೆ ಪ್ರಾಥಮಿಕ ಕಾರಣವೆಂದರೆ ಗನ್‌ಪೌಡರ್, ಅಕ್ರಮ ಪಟಾಕಿಗಳು ಮತ್ತು ಕಟ್ಟಡದಲ್ಲಿ ಸಂಗ್ರಹಿಸಲಾದ ದೇಶ ನಿರ್ಮಿತ ಬಾಂಬ್‌ಗಳು ಎಂದು ಭಾಗಲ್ಪುರ ರೇಂಜ್ ಡಿಐಜಿ ಸುಜಿತ್ ಕುಮಾರ್ ಹೇಳಿದ್ದಾರೆ. ಸದ್ಯ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಫೋರೆನ್ಸಿಕ್ಸ್ ತಂಡವು ಘಟನಾ ಸ್ಥಳವನ್ನು ಪರೀಕ್ಷಿಸಿದ ನಂತರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
#WATCH | Bihar: 7 dead and several injured in an explosion in Tatarpur police jurisdiction in Bhagalpur district, as per District Administration pic.twitter.com/pdSI6iSJI3
— ANI (@ANI) March 4, 2022
ಇದನ್ನೂ ಓದಿ:
Published On - 10:00 am, Fri, 4 March 22