ಮಹಾರಾಷ್ಟ್ರದ ಕೇಂದ್ರ ಕಾರಾಗೃಹದಲ್ಲಿ ಭಾರಿ ಸ್ಫೋಟ

ಅಮರಾವತಿ ಜೈಲಿನ ಬ್ಯಾರಕ್ ಸಂಖ್ಯೆ ಆರು ಮತ್ತು ಏಳರ ಹೊರಗೆ ಸ್ಫೋಟಗಳು ಸಂಭವಿಸಿವೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಜೈಲು ಅಧಿಕಾರಿ ಹಾಗೂ ಅಮರಾವತಿ ಪೊಲೀಸ್ ಕಮಿಷನರ್, ಡಿಸಿಪಿ ಸೇರಿದಂತೆ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿದೆ.

ಮಹಾರಾಷ್ಟ್ರದ ಕೇಂದ್ರ ಕಾರಾಗೃಹದಲ್ಲಿ ಭಾರಿ ಸ್ಫೋಟ
ಸ್ಫೋಟ

Updated on: Jul 07, 2024 | 9:19 AM

ಮಹಾರಾಷ್ಟ್ರದ ಅಮರಾವತಿ ಕೇಂದ್ರ ಕಾರಾಗೃಹದಲ್ಲಿ ಭಾರಿ ಸ್ಫೋಟ(Blast)ಗಳು ಸಂಭವಿಸಿವೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಪಘಾತದ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಅಮರಾವತಿ ಸಿಪಿ-ಡಿಸಿಪಿ ಹಾಗೂ ಬಾಂಬ್ ನಿಷ್ಕ್ರಿಯ ದಳದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

ಆರು ಮತ್ತು ಏಳನೇ ಸಂಖ್ಯೆಯ ಬ್ಯಾರಕ್‌ನ ಹೊರಗೆ ಕಂಟ್ರಿ ಮೇಡ್ ಬಾಂಬ್​ ಸ್ಫೋಟ ಸಂಭವಿಸಿದೆ. ಘಟನೆಯ ನಂತರ ಜೈಲು ಆವರಣದಲ್ಲಿ ಸಂಚಲನ ಉಂಟಾಯಿತು. ಘಟನೆಯ ಬಗ್ಗೆ ಮಾಹಿತಿ ಬಂದ ಕೂಡಲೇ ಜೈಲು ಅಧಿಕಾರಿಗಳು, ಅಮರಾವತಿ ಪೊಲೀಸ್ ಕಮಿಷನರ್ ಮತ್ತು ಡಿಸಿಪಿ ಸೇರಿದಂತೆ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿತು.

ಘಟನೆಯ ತನಿಖೆಗೆ ತಕ್ಷಣವೇ ವಿಧಿವಿಜ್ಞಾನ ತಂಡವನ್ನು ಕರೆಯಲಾಯಿತು. ಪಕ್ಕದ ಹೆದ್ದಾರಿಯ ಮೋರಿಯಿಂದ ಚೆಂಡಿನ ಮೂಲಕ ಬಾಂಬ್ ಎಸೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಎಸೆದ ವ್ಯಕ್ತಿ ಯಾರು ಮತ್ತು ಅದರ ಹಿಂದಿನ ಕಾರಣವೇನು? ಸದ್ಯ ಅದರ ತನಿಖೆ ನಡೆಯುತ್ತಿದೆ.

ಮತ್ತಷ್ಟು ಓದಿ: Bihar Madrasa Blast: ಬಿಹಾರದ ಮದರಸಾದಲ್ಲಿ ಬಾಂಬ್ ಸ್ಫೋಟ, ಮೌಲ್ವಿ ಸೇರಿ ಇಬ್ಬರಿಗೆ ಗಾಯ

ಈ ಹಿಂದೆ ಬಾಲ್‌ಗಳಲ್ಲಿ ಗಾಂಜಾ ಪತ್ತೆಯಾಗಿತ್ತು ಎಂದು ಪೊಲೀಸ್ ಆಯುಕ್ತ ನವೀನಚಂದ್ರ ರೆಡ್ಡಿ ತಿಳಿಸಿದ್ದಾರೆ. ಅದೇ ರೀತಿ ಜಿಲ್ಲಾ ಕಾರಾಗೃಹದಲ್ಲಿ ಪ್ಲಾಸ್ಟಿಕ್ ಬಾಲ್ ಆಕಾರದ ಬಾಂಬ್‌ನಂಥ ವಸ್ತು ಪತ್ತೆಯಾದ ಸುದ್ದಿ ಇದೆ. ಪ್ಲಾಸ್ಟಿಕ್ ಚೆಂಡಿನಲ್ಲಿದ್ದ ಎರಡು ಪಟಾಕಿಯಂತಹ ವಸ್ತುಗಳನ್ನು ಜೈಲಿನೊಳಗೆ ಎಸೆಯಲಾಗಿದೆ ಎಂದೂ ಅವರು ಹೇಳಿದ್ದಾರೆ.

ಸ್ಫೋಟಕಕ್ಕೆ ಏನನ್ನು ಬಳಸಲಾಗಿದೆ ಎಂಬುದನ್ನು ಕಂಡುಹಿಡಿಯಲಾಗುತ್ತಿದೆ, ವಿಧಿವಿಜ್ಞಾನ ತಂಡವೂ ತನಿಖೆ ನಡೆಸುತ್ತಿದೆ. ಜೂನ್ 2 ರಂದು ಮಹಾರಾಷ್ಟ್ರದ ಕೊಲ್ಹಾಪುರ ಕೇಂದ್ರ ಕಾರಾಗೃಹದ ಕೈದಿಗಳು ದೊಡ್ಡ ಅಪರಾಧ ಎಸಗಿದ್ದರು. 1992-93ರ ಮುಂಬೈ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಅಲಿ ಖಾನ್​ನನ್ನು ಜೈಲಿನಲ್ಲಿದ್ದ ಐದು ಕೊಲೆ ಆರೋಪಿಗಳು ಹೊಡೆದು ಕೊಂದಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us