ಇಂಗ್ಲಿಷ್​ನಲ್ಲಿ ಮಾತನಾಡಲು ವಿಫಲವಾದ ವಿದ್ಯಾರ್ಥಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಶಿಕ್ಷಕ

ಮಕ್ಕಳದ್ದು ಕಲಿಯುವ ವಯಸ್ಸು, ಎಲ್ಲಾ ಕಲಿತಿರುವ ವಿದ್ಯಾವಂತ ಶಿಕ್ಷಕರೇ ಈ ರೀತಿಯ ವರ್ತನೆ ತೋರಿದರೆ ಹೇಗೆ, ಮಕ್ಕಳನ್ನು ತಿದ್ದಿ, ಬುದ್ಧಿ ಹೇಳಬೇಕಾದ ಶಿಕ್ಷಕರೇ ಮಾನವೀಯತೆ ಮರೆತು ವರ್ತಿಸಿರುವ ಘಟನೆ ಮೇಘಾಲಯದಲ್ಲಿ ನಡೆದಿದೆ.

ಇಂಗ್ಲಿಷ್​ನಲ್ಲಿ ಮಾತನಾಡಲು ವಿಫಲವಾದ ವಿದ್ಯಾರ್ಥಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಶಿಕ್ಷಕ
ಶಿಕ್ಷಕImage Credit source: India Today
Follow us
|

Updated on: Aug 03, 2023 | 12:43 PM

ಮಕ್ಕಳದ್ದು ಕಲಿಯುವ ವಯಸ್ಸು, ಎಲ್ಲಾ ಕಲಿತಿರುವ ವಿದ್ಯಾವಂತ ಶಿಕ್ಷಕರೇ ಈ ರೀತಿಯ ವರ್ತನೆ ತೋರಿದರೆ ಹೇಗೆ, ಮಕ್ಕಳನ್ನು ತಿದ್ದಿ, ಬುದ್ಧಿ ಹೇಳಬೇಕಾದ ಶಿಕ್ಷಕರೇ ಮಾನವೀಯತೆ ಮರೆತು ವರ್ತಿಸಿರುವ ಘಟನೆ ಮೇಘಾಲಯದಲ್ಲಿ ನಡೆದಿದೆ. ಆರನೇ ತರಗತಿ ವಿದ್ಯಾರ್ಥಿಗೆ ಇಂಗ್ಲಿಷ್ ಮಾತನಾಡಲು ಬಾರಲಿಲ್ಲ ಎನ್ನುವ ಕಾರಣಕ್ಕೆ ಕೊಳಕು ಚಪ್ಪಲಿಗಳ ಹಾರ ಹಾಕಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.

ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಶಿಕ್ಷಕರು ನಡೆದುಕೊಂಡ ರೀತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಮಕ್ಕಳು ತಪ್ಪು ಮಾಡಿದರೆ ತಿದ್ದಿ ಹೇಳಬೇಕು ಆದರೆ ಅದರ ಬದಲು ಕುತ್ತಿಗೆಗೆ ಚಪ್ಪಲಿ ಹಾರ ಹಾಕಿದ್ದು ತಪ್ಪು ಎಂದು ದೂರಿನಲ್ಲಿ ಹೇಳಲಾಗಿದೆ.

ಮತ್ತಷ್ಟು ಓದಿ: ಸೀಮೆಸುಣ್ಣ ಮುರಿದಿದ್ದಕ್ಕೆ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ, ವಿದ್ಯಾರ್ಥಿ ಅಮೃತ್​ ಕೈ ಕಟ್

ಘಟನೆಯ ಬಗ್ಗೆ ನಾನು ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಜಿಲ್ಲೆಯ ಶಿಕ್ಷಣ ಇಲಾಖೆಯಿಂದ ವರದಿ ಕೇಳಿದ್ದೇನೆ ಎಂದು ಮೇಘಾಲಯದ ಶಿಕ್ಷಣ ಸಚಿವ ರಕ್ಕಮ್ ಎ ಸಂಗ್ಮಾ ತಿಳಿಸಿದ್ದಾರೆ.

ಘಟನೆ ದುರದೃಷ್ಟಕರ ಎಂದು ಬಣ್ಣಿಸಿದ ಸಚಿವರು, ಜಿಲ್ಲಾಧಿಕಾರಿಗಳಿಂದ ವರದಿ ಬಂದ ನಂತರ ಪರಿಸ್ಥಿತಿಯನ್ನು ಅವಲೋಕಿಸುವುದಾಗಿ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ