ಸರ್ಕಾರಿ ಶಾಲೆಗೆ ಮೆಲಾನಿಯಾ ಟ್ರಂಪ್ ಭೇಟಿ, ವಿದ್ಯಾರ್ಥಿಗಳಿಂದ ಕಲಿತಿದ್ದೇನು?

ಸರ್ಕಾರಿ ಶಾಲೆಗೆ ಮೆಲಾನಿಯಾ ಟ್ರಂಪ್ ಭೇಟಿ, ವಿದ್ಯಾರ್ಥಿಗಳಿಂದ ಕಲಿತಿದ್ದೇನು?

ದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆಯಾಗಿರುವ ಮೆಲಾನಿಯಾ ಟ್ರಂಪ್ ಇಂದು ರಾಜಧಾನಿಯಲ್ಲಿರುವ ನಾನಕ್​ಪುರದ ಸರ್ವೋದಯ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಶಾಲೆಯ ಕೆಲ ವಿದ್ಯಾರ್ಥಿಗಳು ಮೆಲಾನಿಯಾ ಟ್ರಂಪ್​ಗೆ ಹಣೆಗೆ ತಿಲಕವಿಟ್ಟು, ಆರತಿ ಮಾಡಿ ಹೂ ಗುಚ್ಛ ನೀಡುವ ಮೂಲಕ ಸ್ವಾಗತಿಸಿದ್ದಾರೆ. ವಾದ್ಯಗಳ ಜೊತೆ ಶಾಲೆಯೆಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಏರ್ಪಟ್ಟಿತ್ತು. ಮೆಲಾನಿಯಾ ಟ್ರಂಪ್ ತಮ್ಮ ಭಾರತದ ಪ್ರವಾಸದಲ್ಲಿ ಇಂದು ಎರಡನೇ ದಿನವಾಗಿದ್ದು, ಸರ್ಕಾರಿ ಶಾಲೆಗೆ ಭೇಟಿ ನೀಡುವ […]

sadhu srinath

|

Feb 25, 2020 | 1:54 PM

ದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆಯಾಗಿರುವ ಮೆಲಾನಿಯಾ ಟ್ರಂಪ್ ಇಂದು ರಾಜಧಾನಿಯಲ್ಲಿರುವ ನಾನಕ್​ಪುರದ ಸರ್ವೋದಯ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ.

ಈ ವೇಳೆ ಶಾಲೆಯ ಕೆಲ ವಿದ್ಯಾರ್ಥಿಗಳು ಮೆಲಾನಿಯಾ ಟ್ರಂಪ್​ಗೆ ಹಣೆಗೆ ತಿಲಕವಿಟ್ಟು, ಆರತಿ ಮಾಡಿ ಹೂ ಗುಚ್ಛ ನೀಡುವ ಮೂಲಕ ಸ್ವಾಗತಿಸಿದ್ದಾರೆ. ವಾದ್ಯಗಳ ಜೊತೆ ಶಾಲೆಯೆಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಏರ್ಪಟ್ಟಿತ್ತು.

ಮೆಲಾನಿಯಾ ಟ್ರಂಪ್ ತಮ್ಮ ಭಾರತದ ಪ್ರವಾಸದಲ್ಲಿ ಇಂದು ಎರಡನೇ ದಿನವಾಗಿದ್ದು, ಸರ್ಕಾರಿ ಶಾಲೆಗೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಭಾರತೀಯ ಶಿಕ್ಷಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಶಾಲಾ ಭೇಟಿಗೆಂದು ಹೋಗಿದ್ದ ಮೆಲಾನಿಯಾ ಸ್ವತಃ ತಾವೇ ಒಂದು ಪಾಠ ಕಲಿತಿದ್ದಾರೆ. ಜೊತೆಗೆ ಅದನ್ನು ಅಮೆರಿಕಕ್ಕೂ ತೆಗೆದುಕೊಂಡು ಹೋಗುವ ಮಾತನ್ನಾಡಿದ್ದಾರೆ. ಅಷ್ಟರಮಟ್ಟಿಗೆ ಮೆಲಾನಿಯಾ ಹ್ಯಾಪಿನೆಸ್​ ಕ್ಲಾಸ್​ ಮಾದರಿಯಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada