ಸ್ಥಳೀಯ ಆಡಳಿತಗಳು ಆದ್ಯವಾಗಿ ಇಂತಹವರ ನೆರವಿಗೆ ಬರಬೇಕು…

ಮಹಾರಾಷ್ಟ್ರ: ವಲಸೆ ಕಾರ್ಮಿಕರು ಸೈಕಲ್​ ಉರುಳಿಸುತ್ತಾ ಬದುಕಿನ ಜಂಜಾಟವನ್ನು ಹೊತ್ತು ಸಾಗಿದ್ದಾರೆ. ನಾಗ್ಪುರದಿಂದ ಸತ್ನಾ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಗಳತ್ತ ನಡೆದು ಹೋಗುತ್ತಿದ್ದಾರೆ. ಒಬ್ಬ ಮಹಾತಾಯಿಯಂತೂ ತನ್ನ 1 ವರ್ಷದ ಮಗುವನ್ನು ಜೋಪಾನವಾಗಿ ಎದೆಗವಚಿಕೊಳ್ಳುತ್ತಾ, ಐದು ದಿನಗಳಿಂದ ನಡೆದು ನಡೆದೇ ಸಾಗುತ್ತಿದ್ದಾಳೆ. ಇನ್ನೂ 6 ದಿನ ಹೀಗೇ ನಡೆದರೆ ಮಧ್ಯಪ್ರದೇಶದಲ್ಲಿರುವ ನನ್ನ ಊರು ಸಿಕ್ಕುತ್ತದೆ ಎಂದು ದಯನೀಯವಾಗಿ ಹೇಳುವಾಗ ಎಂಥವನಿಗೇ ಆದರೂ ಕರುಳು ಚುರಕ್ ಅನ್ನದೇ ಇರದು. ಪತ್ನಿ-ಪುತ್ರನ ಬವಣೆಯನ್ನು ಕಣ್ಣಂಚಿನಲ್ಲೇ ನೋಡುತ್ತಾ, ಮನೆ ಸಾಮಾನುಗಳನ್ನು ಸೈಕಲ್​ಗೆ​ ನೇತುಹಾಕಿ […]

ಸ್ಥಳೀಯ ಆಡಳಿತಗಳು ಆದ್ಯವಾಗಿ ಇಂತಹವರ ನೆರವಿಗೆ ಬರಬೇಕು...
ಸಾಧು ಶ್ರೀನಾಥ್​

Updated on: Apr 17, 2020 | 4:29 PM

ಮಹಾರಾಷ್ಟ್ರ: ವಲಸೆ ಕಾರ್ಮಿಕರು ಸೈಕಲ್​ ಉರುಳಿಸುತ್ತಾ ಬದುಕಿನ ಜಂಜಾಟವನ್ನು ಹೊತ್ತು ಸಾಗಿದ್ದಾರೆ. ನಾಗ್ಪುರದಿಂದ ಸತ್ನಾ ಜಿಲ್ಲೆಯಲ್ಲಿರುವ ತಮ್ಮ ಹಳ್ಳಿಗಳತ್ತ ನಡೆದು ಹೋಗುತ್ತಿದ್ದಾರೆ.

ಒಬ್ಬ ಮಹಾತಾಯಿಯಂತೂ ತನ್ನ 1 ವರ್ಷದ ಮಗುವನ್ನು ಜೋಪಾನವಾಗಿ ಎದೆಗವಚಿಕೊಳ್ಳುತ್ತಾ, ಐದು ದಿನಗಳಿಂದ ನಡೆದು ನಡೆದೇ ಸಾಗುತ್ತಿದ್ದಾಳೆ. ಇನ್ನೂ 6 ದಿನ ಹೀಗೇ ನಡೆದರೆ ಮಧ್ಯಪ್ರದೇಶದಲ್ಲಿರುವ ನನ್ನ ಊರು ಸಿಕ್ಕುತ್ತದೆ ಎಂದು ದಯನೀಯವಾಗಿ ಹೇಳುವಾಗ ಎಂಥವನಿಗೇ ಆದರೂ ಕರುಳು ಚುರಕ್ ಅನ್ನದೇ ಇರದು.

ಪತ್ನಿ-ಪುತ್ರನ ಬವಣೆಯನ್ನು ಕಣ್ಣಂಚಿನಲ್ಲೇ ನೋಡುತ್ತಾ, ಮನೆ ಸಾಮಾನುಗಳನ್ನು ಸೈಕಲ್​ಗೆ​ ನೇತುಹಾಕಿ ಸಾಥ್​ ನೀಡುತ್ತಿದ್ದಾನೆ ಪತಿ. ಜನಜೀವನವನ್ನು ಎಲ್ಲಿಗೆ ತಂದಿದೆ ನೋಡಿ ಮನೆಮಾರಿ ಹಾಳು ಕೊರೊನಾ ವೈರಸ್!

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us