ಭಾರತ- ಅರ್ಜೆಂಟೀನಾ ನಡುವೆ ಆಹಾರ ಹಂಚಿಕೆ ಹೆಚ್ಚಳದ ಕುರಿತು ಸಚಿವ ಪ್ರಲ್ಹಾದ್ ಜೋಶಿ ಚರ್ಚೆ

ದೆಹಲಿಯಲ್ಲಿ ಇಂದು ಅರ್ಜೆಂಟೀನಾ ದೇಶದ ರಾಯಭಾರಿ ಮರಿಯಾನೋ ಅಗಸ್ಟಿನ್ ಕೌಸಿನೊ ಮತ್ತು ನಿಯೋಗದೊಂದಿಗೆ ಮಾತುಕತೆ ನಡೆಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಹಾರ ಧಾನ್ಯ, ಖಾದ್ಯ ತೈಲದ ಉತ್ಪಾದನೆ ಮತ್ತು ಪೂರೈಕೆಯಲ್ಲಿನ ಸಹಕಾರದ ಕುರಿತು ಚರ್ಚಿಸಿದ್ದಾರೆ.

ಭಾರತ- ಅರ್ಜೆಂಟೀನಾ ನಡುವೆ ಆಹಾರ ಹಂಚಿಕೆ ಹೆಚ್ಚಳದ ಕುರಿತು ಸಚಿವ ಪ್ರಲ್ಹಾದ್ ಜೋಶಿ ಚರ್ಚೆ
ಅರ್ಜೆಂಟೀನಾ ದೇಶದ ರಾಯಭಾರಿ ಮರಿಯಾನೋ ಅಗಸ್ಟಿನ್ ಕೌಸಿನೊ ಜೊತೆ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಮಾತುಕತೆ

Updated on: Aug 16, 2024 | 6:59 PM

ನವದೆಹಲಿ: ಭಾರತ-ಅರ್ಜೆಂಟೀನಾ ನಡುವೆ ಆಹಾರಗಳ ಹಂಚಿಕೆ ಪ್ರಮಾಣ ಹೆಚ್ಚಿಸುವ ಕುರಿತು ಇಂದು ಭಾರತ ಮತ್ತು ಅರ್ಜೆಂಟೀನಾ ಮಧ್ಯೆ ಪರಸ್ಪರ ಚರ್ಚೆ ನಡೆದಿದೆ. ಈ ಕುರಿತು ಅರ್ಜೆಂಟೀನಾ ದೇಶದ ರಾಯಭಾರಿ ಮರಿಯಾನೋ ಅಗಸ್ಟಿನ್ ಕೌಸಿನೊ ನಿಯೋಗದ ಜೊತೆ ಮಾತುಕತೆ ನಡೆಸಿದ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಜಾಗತಿಕ ಸವಾಲುಗಳನ್ನು ನಿಭಾಯಿಸಲು ಮತ್ತು ಆಹಾರ ಹಂಚಿಕೆಯ ಪ್ರಮಾಣವನ್ನು ಹೆಚ್ಚಿಸಲು ಭಾರತ – ಅರ್ಜೆಂಟೀನಾ ಎರಡೂ ದೇಶಗಳ ಪರಸ್ಪರ ಸಹಕಾರ ಯಾವ ರೀತಿ ಮುಂದುವರಿಯಬೇಕೆಂಬುದರ ಕುರಿತು ಚರ್ಚಿಸಿದರು.

ಅರ್ಜೆಂಟೀನಾ ರಾಯಭಾರಿ ಮರಿಯಾನೋ ಅಗಸ್ಟಿನ್ ಕೌಸಿನೊ ಅವರ ನಿಯೋಗ ಇಂದು ನವದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ ಆಹಾರೋತ್ಪಾದನೆ ಬಗ್ಗೆ ಸಮಾಲೋಚನೆ ನಡೆಸಿತು. ಈ ವೇಳೆ ಉಭಯ ರಾಷ್ಟ್ರಗಳಲ್ಲೂ ಆಹಾರ ಧಾನ್ಯ, ಖಾದ್ಯ ತೈಲದ ಉತ್ಪಾದನೆ ಮತ್ತು ಪೂರೈಕೆಗೆ ಬೇಕಿರುವ ಅಗತ್ಯ ಸಹಕಾರದ ಕುರಿತು ಚರ್ಚಿಸಲಾಯಿತು.


ಇದನ್ನೂ ಓದಿ: ಪಿಎಂ ಸೂರ್ಯ ಘರ್ ಯೋಜನೆಯಡಿ ಜಿಲ್ಲೆಗೊಂದು ‘ಮಾದರಿ ಸೌರ ಗ್ರಾಮ’ ಅನುಷ್ಠಾನ; ಪ್ರಲ್ಹಾದ್ ಜೋಶಿ

ಜಾಗತಿಕ ಸವಾಲುಗಳನ್ನು ನಿಭಾಯಿಸಲು ಮತ್ತು ಆಹಾರ ಹಂಚಿಕೆಯ ಪ್ರಮಾಣವನ್ನು ಹೆಚ್ಚಿಸಲು ಭಾರತ – ಅರ್ಜೆಂಟೀನಾ ಎರಡೂ ದೇಶಗಳ ನಡುವೆ ಪರಸ್ಪರ ಸಹಕಾರ, ಅಗತ್ಯ ನೆರವಿನ ಬಗ್ಗೆ ಚರ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ