ಲೋಕಸಭಾ ಚುನಾವಣೆ(Lok Sabha Election)ಯಲ್ಲಿ ಬಿಜೆಪಿ ಸೋಲು ಅನುಭವಿಸಲಿದ್ದು, ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಇಬ್ಭಾಗ ಆಗಲಿದ್ದು, ಮೋದಿ ಪ್ರಧಾನಿಯಾಗಿ ಮುಂದುವರೆಯುವುದು ಅಸಾಧ್ಯ ಎಂದು ಶಿವಸೇನೆ(ಯುಟಿಬಿ) ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray) ಹೇಳಿದ್ದಾರೆ. ನಾಸಿಕ್ನಲ್ಲಿ ರಾಜಾಭಾವು ವಾಜೆ ಪರ ಪ್ರಚಾರ ಮಾಡಿದ ಠಾಕ್ರೆ ಮೋದಿ ಬಗ್ಗೆ ವಾಗ್ದಾಳಿ ನಡೆಸಿ, ನಮ್ಮ ಪಕ್ಷವು ಕಾಂಗ್ರೆಸ್‌ನೊಂದಿಗೆ ವಿಲೀನವಾಗಲಿದೆ ನೀವು ಹೇಳುತ್ತಿದ್ದೀರಿ, ಆದರೆ 30 ವರ್ಷಗಳಿಂದ ನಾವು ಬಿಜೆಪಿಯೊಂದಿಗೆ ಇದ್ದರೂ ವಿಲೀನವಾಗಲಿಲ್ಲ, ಜೂನ್ 5ರಬಳಿಕ ನೀವು ಮಾಜಿ ಪ್ರಧಾನಿಯಾಗುತ್ತೀರಿ ಇದು ಜನರ ನಿರ್ಧಾರ ಎಂದಿದ್ದಾರೆ.
2014 ಹಾಗೂ 2019ರಲ್ಲಿ ನರೇಂದ್ರ ಮೋದಿ ಪಕ್ಷಕ್ಕೆ ಮತಯಾಚಿಸಿದ್ದಕ್ಕಾಗಿ ಕ್ಷಮೆ ಯಾಚಿಸಿದರು. ನಿಮ್ಮ ಉತ್ತರಾಧಿಕಾರಿ ಬಗ್ಗೆ ನಿಮಗೆ ಯೋಚನೆ ಇದೆಯೇ ಎಂದು ಮೋದಿಯವರನ್ನು ಪ್ರಶ್ನಿಸುತ್ತೇನೆ.
ಗುಜರಾತ್‌ನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಮತ್ತು ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ರೈತರ ನಡುವೆ ತಾರತಮ್ಯ ಮಾಡುವ ಮೂಲಕ 40 ಕ್ಕೂ ಹೆಚ್ಚು ಸಂಸದರನ್ನು ಆಯ್ಕೆ ಮಾಡಿದ ಬಿಜೆಪಿ ಮತ್ತು ಪ್ರಧಾನಿ ಮೋದಿ ಮಹಾರಾಷ್ಟ್ರದ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ಓದಿ: Lok Sabha Election: ನಿಮ್ಮ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆಗೆ ಪ್ರಧಾನಿ ಮೋದಿ ಹೇಳಿದ್ದೇನು?
ನೀವು ಇನ್ನು ಮುಂದೆ ಪ್ರಧಾನಿಯಾಗಿ ಇರಲಾರಿರಿ. ಪಕ್ಷದ ಚಟುವಟಿಕೆಗಳನ್ನು ಮುನ್ನಡೆಸಲು ನಿಮ್ಮ ಪಕ್ಷಕ್ಕೆ ಯಾವ ಮುಖವೂ ಇರುವುದಿಲ್ಲ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.
ಪ್ರಧಾನಿ ಮೋದಿ ನಿವೃತ್ತಿ ಬಗ್ಗೆ ಅಮಿತ್ ಶಾ ಮಾತು
ಗೃಹ ಸಚಿವ ಅಮಿತ್ ಶಾ ಸುದ್ದಿಸಂದ್ಥೆ ಎಎನ್ಐಗೆ ನೀಡಿದ ಸಂದರ್ಶನದಲ್ಲಿ 2029ರ ನಂತರವೂ ಪ್ರಧಾನಿ ಮೋದಿ ದೇಶವನ್ನು ಮುನ್ನಡೆಸುತ್ತಾರೆ ಎಂದು ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:58 am, Thu, 16 May 24