ಮಹಾರಾಷ್ಟ್ರ ,ದಕ್ಷಿಣ ಭಾರತದಲ್ಲಿ ಬಿರುಸುಗೊಳ್ಳಲಿದೆ ಮುಂಗಾರು; ಜೂನ್ 15ಕ್ಕೆ ಒಡಿಶಾ ಮತ್ತು ಬಂಗಾಳಕ್ಕೆ ಆಗಮನ

Monsoon: ಭಾರತದ ದಕ್ಷಿಣ ಪರ್ಯಾಯ ದ್ವೀಪ ಕರಾವಳಿಯಲ್ಲಿ ಮುಂದಿನ 3 ರಿಂದ 4 ದಿನಗಳಲ್ಲಿ ಗಾಳಿ ಗುಡುಗು ಸಹಿತ ವ್ಯಾಪಕ ಮಳೆಯಾಗಲಿದೆ. ಮುಂದಿನ 24 ಗಂಟೆಗಳಲ್ಲಿ ದೇಶದ ವಾಯುವ್ಯ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಮಹಾರಾಷ್ಟ್ರ ,ದಕ್ಷಿಣ ಭಾರತದಲ್ಲಿ ಬಿರುಸುಗೊಳ್ಳಲಿದೆ ಮುಂಗಾರು; ಜೂನ್ 15ಕ್ಕೆ ಒಡಿಶಾ ಮತ್ತು ಬಂಗಾಳಕ್ಕೆ ಆಗಮನ
ಅಜ್ಮೇರ್ ನಲ್ಲಿ ಕಂಡ ದೃಶ್ಯ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 06, 2021 | 3:35 PM

ದೆಹಲಿ: ನೈಋತ್ಯ ಮಾನ್ಸೂನ್ ಭಾನುವಾರ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಮತ್ತು ತಮಿಳುನಾಡಿನ ಉಳಿದ ಭಾಗಗಳಲ್ಲಿ ಮತ್ತಷ್ಟು ತೀವ್ರವಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಮುಂಗಾರು ಜೂನ್ 15 ರೊಳಗೆ ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಬಿಹಾರದ ಕೆಲವು ಭಾಗಗನ್ನು ತಲುಪಲಿದೆ. ಐಎಂಡಿ ತನ್ನ ಇತ್ತೀಚಿನ ಮುನ್ಸೂಚನೆಯಲ್ಲಿ, ಮುಂದಿನ 5 ದಿನಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ನೀಡಿದೆ. ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಜೂನ್ 10 ರವರೆಗೆ ಮಳೆಯಾಗುವ ನಿರೀಕ್ಷೆಯಿದೆ.

ಭಾರತದ ದಕ್ಷಿಣ ಪರ್ಯಾಯ ದ್ವೀಪ ಕರಾವಳಿಯಲ್ಲಿ ಮುಂದಿನ 3 ರಿಂದ 4 ದಿನಗಳಲ್ಲಿ ಗಾಳಿ ಗುಡುಗು ಸಹಿತ ವ್ಯಾಪಕ ಮಳೆಯಾಗಲಿದೆ. ಮುಂದಿನ 24 ಗಂಟೆಗಳಲ್ಲಿ ದೇಶದ ವಾಯುವ್ಯ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 2 ದಿನಗಳಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ. ಭಾರತವು ಜೂನ್ ಮತ್ತು ಸೆಪ್ಟೆಂಬರ್ ನಡುವೆ ಶೇ 70 ಕ್ಕಿಂತ ಹೆಚ್ಚು ವಾರ್ಷಿಕ ಮಳೆ ಪಡೆಯುತ್ತದೆ. ಈ ವರ್ಷ, ಹವಾಮಾನ ಇಲಾಖೆಯು ದೇಶದಲ್ಲಿ ಸಾಮಾನ್ಯ ಮತ್ತು ಅದಕ್ಕಿಂತ ಸ್ವಲ್ಪ ಹೆಚ್ಚು ಮಳೆಯ ನಿರೀಕ್ಷಿಸಿದೆ. ಐಎಂಡಿ ಈ ಜೂನ್‌ನಲ್ಲಿ ಸಾಮಾನ್ಯ ಮಳೆಯಾಗುವ ಮುನ್ಸೂಚನೆಯನ್ನು ಸಹ ನೀಡಿದೆ. ಮುಂದಿನ ಐದು ದಿನಗಳಲ್ಲಿ ದೇಶದಲ್ಲಿ ಯಾವುದೇ ಬಿಸಿ ಗಾಳಿಯ ಪರಿಸ್ಥಿತಿಗಳಿಲ್ಲ ಎಂದು ಅದು ಹೇಳಿದೆ.

ಏತನ್ಮಧ್ಯೆ, ಮಾನ್ಸೂನ್ ತನ್ನ ಸಾಮಾನ್ಯ ಪ್ರಾರಂಭದ ದಿನಾಂಕಕ್ಕಿಂತ ಎರಡು ದಿನಗಳ ಮುಂಚಿತವಾಗಿ ಶನಿವಾರ ಮಹಾರಾಷ್ಟ್ರ ಮತ್ತು ಗೋವಾಕ್ಕೆ ಆಗಮಿಸಿತು.

ಕರ್ನಾಟಕದಲ್ಲಿ ಮುಂಗಾರು ಶುಕ್ರವಾರ ರಾಜ್ಯದ ಉತ್ತರ ಆಂತರಿಕ ಭಾಗಗಳಿಗೆ ತಲುಪಿತು. ಇದು ಭಾರಿ ಮಳೆಗೆ ಕಾರಣವಾಗಿದೆ. ನಿರಂತರ ಮಳೆಯಿಂದಾಗಿ ಬೆಂಗಳೂರಿನ ಅನೇಕ ಭಾಗಗಳು ಮುಳುಗಿದ್ದವು. ಮುಂದಿನ 48 ಗಂಟೆಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: Monsoon Rains: ಈ ವರ್ಷ ಮುಂಗಾರು 2 ದಿನ ತಡ: ಕರ್ನಾಟಕದಲ್ಲಿ ಜೂನ್ 1ರಿಂದ 3ರವರೆಗೆ ಭಾರಿ ಮಳೆ