ಬಾಯ್​ಫ್ರೆಂಡ್ನ ಮದುವೆಯಾಗಲು ಹೆತ್ತವರಿಗೆ ವಿಷ ಉಣಿಸಿದ ಅಪ್ರಾಪ್ತ ಮಗಳು

ಮಧ್ಯಪ್ರದೇಶದ ಮೊರೆನಾದಲ್ಲಿ ಆಘಾತಕಾರಿ ಘಟನೆ: ಬಾಯ್​ಫ್ರೆಂಡ್​ನನ್ನು ಮದುವೆಯಾಗಲು ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಹೆತ್ತವರಿಗೆ ಚಪಾತಿಯಲ್ಲಿ ಇಲಿ ವಿಷ ಬೆರೆಸಿ ಕೊಲೆಗೆ ಯತ್ನಿಸಿದ್ದಾಳೆ. ಪೋಷಕರ ಆರೋಗ್ಯ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಡಿಯೋ ಸಾಕ್ಷ್ಯದ ಆಧಾರದ ಮೇಲೆ ಬಾಲಕಿ ಮತ್ತು ಆಕೆಯ ಗೆಳೆಯನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಈ ಕೃತ್ಯ ಸಮಾಜದಲ್ಲಿ ಸಂಬಂಧಗಳ ಬಗ್ಗೆ ಆತಂಕ ಮೂಡಿಸಿದೆ.

ಬಾಯ್​ಫ್ರೆಂಡ್ನ ಮದುವೆಯಾಗಲು ಹೆತ್ತವರಿಗೆ ವಿಷ ಉಣಿಸಿದ ಅಪ್ರಾಪ್ತ ಮಗಳು
ಚಪಾತಿ
Image Credit source: Chaitra's Food Book

Updated on: Apr 13, 2026 | 10:48 AM

ಮರೆನಾ, ಏಪ್ರಿಲ್ 13: ಅಪ್ರಾಪ್ತ ಬಾಲಕಿಯೊಬ್ಬಳು ಬಾಯ್​ಫ್ರೆಂಡ್​ನನ್ನು ಮದುವೆಯಾಗಲು ತನ್ನ ಹೆತ್ತವರಿಗೆ ವಿಷ(Poison) ಉಣಿಸಿರುವ ಘಟನೆ ಮಧ್ಯಪ್ರದೇಶದ ಮರೆನಾದಲ್ಲಿ ನಡೆದಿದೆ. ಮನುಷ್ಯತ್ವಕ್ಕೇ ಕಪ್ಪುಚುಕ್ಕಿ ಇಡುವಂತಹ ಘಟನೆಯೊಂದು ನಡೆದಿದೆ. ಪ್ರೀತಿಯ ಅಮಲಿನಲ್ಲಿ ಕುರುಡಾದ ಮಗಳೊಬ್ಬಳು, ಹೆತ್ತವರನ್ನೇ ಮುಗಿಸಲು ಸಂಚು ರೂಪಿಸಿದ ಕರಾಳ ಕಥೆ ಇಲ್ಲಿದೆ.
ಹೆತ್ತವರು ಮಗಳ ಮೇಲೆ ಇಟ್ಟಿದ್ದ ನಂಬಿಕೆ ಹುಸಿಯಾಗಿದೆ, ಚಪಾತಿಯಲ್ಲಿ ಇಲಿ ಪಾಷಾಣ ಬೆರೆಸಿ ಪೋಷಕರಿಗೆ ನೀಡಿರುವ ಘಟನೆ ಬೆಳಕಿಗೆ . ಮೊರೆನಾ ಜಿಲ್ಲೆಯ ಪೋರ್ಸಾ ಎಂಬಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಗೆಳೆಯನ ಜೊತೆ ಸೇರಿ ತಂದೆ-ತಾಯಿಯನ್ನೇ ಕೊಲೆ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ತನ್ನ ಪ್ರೇಮಕ್ಕೆ ಅಡ್ಡಿಯಾಗುತ್ತಾರೆಂಬ ಕಾರಣಕ್ಕೋ ಏನೋ, ಈ ಬಾಲಕಿ ತನ್ನ ಗೆಳೆಯ ಸುದಾಮನ ಜೊತೆ ಸೇರಿ ಕ್ರೂರ ಯೋಜನೆಯೊಂದನ್ನು ರೂಪಿಸಿದ್ದಳು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ತಾನೇ ಅಡುಗೆ ಮಾಡುವ ಜವಾಬ್ದಾರಿ ವಹಿಸಿಕೊಂಡ ಬಾಲಕಿ, ಚಪಾತಿಯ ಹಿಟ್ಟಿನಲ್ಲಿ ಇಲಿ ವಿಷವನ್ನು ಬೆರೆಸಿದ್ದಾಳೆ. ಇದನ್ನು ತಿಂದ ತಾಯಿ ಮಿಥಿಲೇಶ್ ಮತ್ತು ತಂದೆ ಗಬ್ಬರ್ ಪ್ರಜಾಪತಿ ಅವರ ಆರೋಗ್ಯ ತಕ್ಷಣವೇ ಹದಗೆಟ್ಟಿದೆ. ಸದ್ಯ ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದ್ದು, ಮೊರೆನಾದಿಂದ ಗ್ವಾಲಿಯರ್‌ನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ.

ಈ ಪ್ರಕರಣವು ಆರಂಭದಲ್ಲಿ ಕೇವಲ ಫುಡ್​ಪಾಯ್ಸನ್​ನಂತೆ ತೋರಿತ್ತು. ಆದರೆ ಪೊಲೀಸರಿಗೆ ಸಿಕ್ಕ ಒಂದು ಆಡಿಯೋ ಕ್ಲಿಪ್ ಇಡೀ ಕಥೆಯನ್ನೇ ಬದಲಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಆಡಿಯೋದಲ್ಲಿ ಬಾಲಕಿ ಮತ್ತು ಆಕೆಯ ಗೆಳೆಯ ಸುದಾಮ ಪರಸ್ಪರ ಸಂಚು ಹೂಡುತ್ತಿರುವುದು ಸ್ಪಷ್ಟವಾಗಿದೆ.

ಮತ್ತಷ್ಟು ಓದಿ: ಮೌಂಟ್ ಎವರೆಸ್ಟ್​ ಪರ್ವತಾರೋಹಿಗಳಿಗೆ ವಿಷ ನೀಡಿದ ಆರೋಪ; 185 ಕೋಟಿ ರೂ. ಹಗರಣ ಬಯಲು

ಹತ್ತಿರದಲ್ಲೇ ಗೊಬ್ಬರದ ಅಂಗಡಿ ಇದೆ, ಅಲ್ಲಿಂದ ಇಲಿ ವಿಷ ತಂದಿಟ್ಟುಕೊ. ಇವತ್ತು ನಾನೇ ರೊಟ್ಟಿ ಮಾಡುತ್ತಿದ್ದೇನೆ, ನನಗೆ ಒಳ್ಳೆಯ ಅವಕಾಶ ಸಿಕ್ಕಿದೆ. ರೊಟ್ಟಿಯಲ್ಲಿ ವಿಷ ಬೆರೆಸಿ ಅವರಿಗೆ ತಿನ್ನಿಸಿಬಿಡುತ್ತೇನೆ ಎಂದು ಆಕೆ ಹೇಳಿದ್ದಳು. ಈ ಒಂದು ಸಂಭಾಷಣೆ ಪೊಲೀಸರ ಕೈಗೆ ಸಿಕ್ಕ ನಂತರವೇ ಮಗಳ ಕ್ರೂರ ಮುಖ ಅನಾವರಣಗೊಂಡಿತು.

ಪೋಷಕರಾದ ಮಿಥಿಲೇಶ್ ಮತ್ತು ಗಬ್ಬರ್ ಪ್ರಜಾಪತಿ ಅವರು ಪ್ರಾಣಾಪಾಯದಿಂದ ಪಾರಾದ ನಂತರ ಪೋರ್ಸಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಡಿಯೋ ಸಾಕ್ಷ್ಯ ಮತ್ತು ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ಅಪ್ರಾಪ್ತ ಬಾಲಕಿ ಮತ್ತು ಆಕೆಯ ಗೆಳೆಯ ಸುದಾಮನ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಈ ಇಬ್ಬರನ್ನೂ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಪ್ರೀತಿಯ ಹೆಸರಿನಲ್ಲಿ ಹೆತ್ತವರನ್ನೇ ಬಲಿ ಕೊಡಲು ಹೊರಟ ಮಗಳ ಈ ಕೃತ್ಯ ಇಡೀ ಸಮಾಜವನ್ನು ಬೆಚ್ಚಿಬೀಳಿಸಿದೆ. ಸಂಬಂಧಗಳ ನಡುವಿನ ನಂಬಿಕೆ ಎಷ್ಟು ಶಿಥಿಲವಾಗಿದೆ ಎಂಬುದಕ್ಕೆ ಈ ಘಟನೆ ಕನ್ನಡಿಯಂತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us