AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂವರ ಬದುಕನ್ನೇ ನುಂಗಿದ ಆರ್ಥಿಕ ಸಮಸ್ಯೆ.. ಮದುವೆ ಮಾಡಲಾಗದೆ ತಾಯಿ, ಮಕ್ಕಳು ಆತ್ಮಹತ್ಯೆ

ತನ್ನ ಇಬ್ಬರು‌ ಹೆಣ್ಣು ಮಕ್ಕಳೊಂದಿಗೆ ವಿಷ ಸೇವಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಖಮ್ಮಂನಲ್ಲಿ ನಡೆದಿದೆ.

ಮೂವರ ಬದುಕನ್ನೇ ನುಂಗಿದ ಆರ್ಥಿಕ ಸಮಸ್ಯೆ.. ಮದುವೆ ಮಾಡಲಾಗದೆ ತಾಯಿ, ಮಕ್ಕಳು ಆತ್ಮಹತ್ಯೆ
ಇಬ್ಬರು ಹೆಣ್ಣುಮಕ್ಕಳ ಜತೆ ತಾಯಿ ಆತ್ಮಹತ್ಯೆ
Follow us
ಆಯೇಷಾ ಬಾನು
|

Updated on:Dec 10, 2020 | 9:15 AM

ತೆಲಂಗಾಣ: ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇರುತ್ತಾನೆಯೇ? ಎಂಬ ಸುಪ್ರಸಿದ್ಧ ಗಾದೆ ಮಾತಿದೆ. ಆದರೆ ಕೆಲವೊಮ್ಮೆ ನಮ್ಮ ಪರಿಸ್ಥಿತಿ ಹೇಗಾಗುತ್ತೇ ಅಂದ್ರೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಎಲ್ಲವೂ ಮರೆಯಾಗಿ ಬರೀ ಕಷ್ಟಗಳ ಸಾಲೇ ಎದುರಿಗೆ ನಿಂತಿರುತ್ತೆ. ಇದನ್ನ ಹಿಮ್ಮೆಟ್ಟಿಸಿ ಬಾಳು ನಡೆಸುವುದು ಕತ್ತಲಲ್ಲಿ ಸೂಜಿ ಹುಡಿಕಿದಂತೆ. ಆಗ ದೇವರ ಮೇಲಿನ ನಂಬಿಕೆ ದೂರವಾಗಿ ಸಾವು, ಆತ್ಮಹತ್ಯೆ ಜೊತೆಯಾಗುತ್ತೆ.

ಇಲ್ಲೂ ಕೂಡ ಅದೇ ರೀತಿಯಾಗಿದೆ. ಹೆತ್ತ ತಾಯಿ ಮಕ್ಕಳಿಗೆ ಧೈರ್ಯ ಹೇಳಿ ಬದುಕುವ ಆಸೆಯನ್ನು ಹುಟ್ಟಿಸಬೇಕು. ಆದರೆ ತನ್ನ ಸ್ವಂತ ಮಕ್ಕಳಿಗೆ ಸಾವಿನ ದಾರಿ ತೋರಿಸಿ ತಾನೂ ಪಯಣ ಬೆಳೆಸಿದ ಕರುಣಾಜನಕ ಘಟನೆ ತೆಲಂಗಾಣದ ಖಮ್ಮಂನಲ್ಲಿ ನಡೆದಿದೆ. ತಾಯಿ ತನ್ನ ಇಬ್ಬರು‌ ಹೆಣ್ಣು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗೋವಿಂದಮ್ಮ(48) ಮಕ್ಕಳಾದ ರಾಧಿಕಾ(30) ಮತ್ತು ರಮ್ಯ(28) ಆತ್ಮಹತ್ಯೆ ಮಾಡಿಕೊಂಡವರು.

ಹಣದ ಮುಂದೆ ಬದುಕು ಶೂನ್ಯ: ಇವರ ಈ ಸಾವಿಗೆ ಆರ್ಥಿಕ ಸಮಸ್ಯೆಯೇ ಕಾರಣ ಎನ್ನಲಾಗುತ್ತಿದೆ. ಜನವರಿಯಲ್ಲಿ ಹಿರಿಯ ಮಗಳು ರಾಧಿಕಾಳ ಮದುವೆ ಫಿಕ್ಸ್ ಆಗಿತ್ತು. ಆದರೆ ಕೊರೊನಾ ಎಫೆಕ್ಟ್​ನಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಕುಟುಂಬಕ್ಕೆ ಮದುವೆ ಮಾಡುವ ಶಕ್ತಿ ಇರಲಿಲ್ಲವಂತೆ. ಈ ಹಿನ್ನೆಲೆಯಲ್ಲಿ ಕ್ರಿಮಿನಾಶಕ ಸೇವಿಸಿ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬಾಬಾ ಆಮ್ಟೆ ಮೊಮ್ಮಗಳು ಡಾ. ಶೀತಲ್​ ಆತ್ಮಹತ್ಯೆ; ಕಳೆದ ವಾರದ ಫೇಸ್​ಬುಕ್ ಪೋಸ್ಟ್​, ಮುಂಜಾನೆಯ ಟ್ವೀಟ್​ ಏನು ಹೇಳತ್ತೆ?

Published On - 9:11 am, Thu, 10 December 20

ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP