ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿಗೆ 8ನೇ ಸ್ಥಾನ !..ನಂ.1 ಪಟ್ಟ ಯಾರಿಗೆ?

ಭಾರತದ ಇತರ ಕೆಲವು ಬಿಲಿಯನೇರ್​ಗಳೂ ಕೂಡ ಈ ಬಾರಿಯ ಹುರುನ್​ ರಿಚ್​ ಲಿಸ್ಟ್​​ನಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಗೌತಮ್​ ಅದಾನಿ ಮತ್ತು ಕುಟುಂಬದ ಬಳಿ 2.34 ಲಕ್ಷ ಕೋಟಿ ರೂ.ಸಂಪತ್ತು ಇದ್ದು, 48ನೇ ರ‍್ಯಾಂಕ್​​ನಲ್ಲಿದ್ದಾರೆ.

ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿಗೆ 8ನೇ ಸ್ಥಾನ !..ನಂ.1 ಪಟ್ಟ ಯಾರಿಗೆ?
ಮುಕೇಶ್​ ಅಂಬಾನಿ (ಸಂಗ್ರಹ ಚಿತ್ರ)
Follow us
|

Updated on:Mar 02, 2021 | 2:44 PM

ನವದೆಹಲಿ: ಭಾರತದ ಶ್ರೀಮಂತರ ಪಟ್ಟಿಯಲ್ಲಿ ನಂ.1ಸ್ಥಾನದಲ್ಲಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಅಧ್ಯಕ್ಷ ಮತ್ತು ಎಂಡಿ ಮುಕೇಶ್​ ಅಂಬಾನಿ, ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆಂದು ಹುರುನ್​ ಗ್ಲೋಬಲ್ ರಿಚ್ ಲಿಸ್ಟ್​ 2021ರಲ್ಲಿ ಉಲ್ಲೇಖವಾಗಿದೆ. ಹುರುನ್​ ಗ್ಲೋಬಲ್​ ರಿಚ್​ ಲಿಸ್ಟ್ ಇಂದು ಬಿಡುಗಡೆಯಾಗಿದ್ದು, ಅದರಲ್ಲಿ ಮುಕೇಶ್​ ಅಂಬಾನಿಯವರ ಸಂಪತ್ತಿನ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇ.24ರಷ್ಟು ಏರಿಕೆಯಾಗಿ, ಸುಮಾರು 83 ಬಿಲಿಯನ್​ ಡಾಲರ್​ ಅಂದರೆ 6.09 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದೆ ಎಂದು ಹೇಳಲಾಗಿದೆ.

ಇನ್ನು ಭಾರತದ ಇತರ ಕೆಲವು ಬಿಲಿಯನೇರ್​ಗಳೂ ಕೂಡ ಈ ಬಾರಿಯ ಹುರುನ್​ ರಿಚ್​ ಲಿಸ್ಟ್​​ನಲ್ಲಿ ಸ್ಥಾನ ಪಡೆದಿದ್ದಾರೆ. ಅವರಲ್ಲಿ ಗೌತಮ್​ ಅದಾನಿ ಮತ್ತು ಕುಟುಂಬದ ಬಳಿ 2.34 ಲಕ್ಷ ಕೋಟಿ ರೂ.ಸಂಪತ್ತು ಇದ್ದು, 48ನೇ ರ‍್ಯಾಂಕ್​​ನಲ್ಲಿದ್ದಾರೆ. ಹಾಗೇ, ಶಿವ್​ ನಾದರ್​ ಮತ್ತು ಕುಟುಂಬ (58 ನೇ ರ‍್ಯಾಂಕ್​, 1.94 ಲಕ್ಷ ಕೋಟಿ ರೂ. ಮೌಲ್ಯದ ಸಂಪತ್ತು), ಲಕ್ಷ್ಮಿ ಎನ್​ ಮಿತ್ತಲ್​ (104ನೇ ರ‍್ಯಾಂಕ್​, 1.40 ಲಕ್ಷ ಕೋಟಿ ರೂ.), ಸೀರಮ್ ಸಂಸ್ಥೆಯ ಸೈರಸ್ ಪೂನವಾಲ್ಲಾ (113ನೇ ರ‍್ಯಾಂಕ್, 1.35 ಲಕ್ಷ ಕೋಟಿ ರೂ.) ಕೂಡ ಶ್ರೀಮಂತರ ಪಟ್ಟಿಯಲ್ಲಿದ್ದಾರೆ.

ನಂ.1 ಶ್ರೀಮಂತ ಯಾರು? ಹುರುನ್​ ಗ್ಲೋಬಲ್​ ರಿಚ್​ ಲಿಸ್ಟ್​ 2021ರ ಪ್ರಕಾರ ಜಗತ್ತಿನ ನಂಬರ್​ 1 ಶ್ರೀಮಂತ ತೆಸ್ಲಾ ಕಂಪನಿ ಸಿಇಒ ಎಲಾನ್​ ಮಸ್ಕ್​. ಇವರ ಸಂಪತ್ತು ಶೇ.328ರಷ್ಟು ಏರಿಕೆಯಾಗಿದ್ದು, ಒಟ್ಟಾರೆ 197 ಬಿಲಿಯನ್​ ಡಾಲರ್​​ನಷ್ಟಾಗಿದೆ. ಅಂದರೆ ಒಂದೇ ವರ್ಷದಲ್ಲಿ 151 ಬಿಲಿಯನ್ ಡಾಲರ್​ ಏರಿಕೆಯಾಗಿದೆ.

ಬ್ಲೂಮ್​​ಬರ್ಗ್​ ಪಟ್ಟಿಯಲ್ಲಿ ಮುಕೇಶ್​ ಅಂಬಾನಿಗೆ 6ನೇ ಸ್ಥಾನ ಇನ್ನು ಕಳೆದ ವರ್ಷ ಜುಲೈನಲ್ಲಿ ಬ್ಲೂಬ್​ಬರ್ಗ್​ ಬಿಡುಗಡೆ ಮಾಡಿದ್ದ ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್​ ಅಂಬಾನಿ 6ನೇ ಸ್ಥಾನದಲ್ಲಿ ಇದ್ದರು. ಕೊರೊನಾ ಸಂಕಷ್ಟ ಕಾಲದಲ್ಲೂ ಮುಕೇಶ್​ ಅಂಬಾನಿ ಆಸ್ತಿಯ ನಿವ್ವಳ ಮೌಲ್ಯ ಬರೋಬ್ಬರಿ 72.4 ಬಿಲಿಯನ್​ ಡಾಲರ್​ (5.44 ಲಕ್ಷ ಕೋಟಿ) ಇತ್ತು.

ಇದನ್ನೂ ಓದಿ: ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾದ ಕಾರಿನಲ್ಲಿ ಸ್ಫೋಟಕದ ಜತೆಗಿತ್ತು ಬೆದರಿಕೆ ಪತ್ರ

ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ಇರಿಸಿದ ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಸಂಘಟನೆ

Published On - 2:44 pm, Tue, 2 March 21

ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ