ಮುಂಬೈ: ವಿಮಾನ ಡಿಕ್ಕಿ, 36 ಫ್ಲೆಮಿಂಗೋ ಪಕ್ಷಿಗಳ ಸಾವು
ಮುಂಬೈನ ಘಾಟ್ಕೋಪರ್ ಬಳಿಯ ಪ್ರದೇಶದಲ್ಲಿ 36 ಫ್ಲೆಮಿಂಗೋ ಪಕ್ಷಿಗಳ ಮೃತದೇಹಗಳು ಪತ್ತೆಯಾಗಿದೆ. ವಿಮಾನಕ್ಕೆ ಡಿಕ್ಕಿಯಾಗಿ ಇವು ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ.
ಮುಂಬೈಗೆ ಬರುವ ಫ್ಲೆಮಿಂಗೋ ಪಕ್ಷಿಗಳೇ ಜನರ ಪ್ರಮುಖ ಆಕರ್ಷಣೆಯಾಗಿರುತ್ತದೆ. ಅದನ್ನು ನೋಡಲು ಎಲ್ಲೆಲ್ಲಿಂದಲೋ ಜನರು ಆಗಮಿಸುತ್ತಾರೆ. ಆದರೆ ಏಕಾಏಕಿ 30ಕ್ಕೂ ಅಧಿಕ ಫ್ಲೆಮಿಂಗೋಗಳು ಸಾವನ್ನಪ್ಪಿರುವುದು ಆತಂಕ ಸೃಷ್ಟಿಮಾಡಿತ್ತು.
ಮುಂಬೈನ ಘಾಟ್‌ಕೋಪರ್‌ನ ಪಂತ್‌ನಗರದ ಲಕ್ಷ್ಮಿ ನಗರ ಪ್ರದೇಶದಲ್ಲಿ ವಿಮಾನವೊಂದು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 36 ಫ್ಲೆಮಿಂಗೋಗಳು ಸಾವನ್ನಪ್ಪಿವೆ. ಘಾಟ್ಕೋಪರ್ ಪೂರ್ವ ಪ್ರದೇಶದ ರಸ್ತೆಯಲ್ಲಿ ಫ್ಲೆಮಿಂಗೊ ಪಕ್ಷಿಗಳ ಮೃತ ದೇಹಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡಿವೆ.
ಈ ಫ್ಲೆಮಿಂಗೊಗಳ (ಫ್ಲೆಮಿಂಗೊ ಪಕ್ಷಿಗಳು) ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಫ್ಲೆಮಿಂಗೋಗಳ ಹಿಂಡು ಆಕಾಶದಲ್ಲಿ ಹಾರಾಡುತ್ತಿದ್ದಾಗ ವಿಮಾನ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಸಾಧ್ಯತೆಯನ್ನು ಪಕ್ಷಿ ಪ್ರೇಮಿಗಳು ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ವಿಮಾನ ಅಪಘಾತದಿಂದ ಪಕ್ಷಿಗಳು ಸಾಯಲಿಲ್ಲ ಎಂದು ಹೇಳುತ್ತಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು ವಿಮಾನಗಳು ಘಾಟ್ಕೋಪರ್ ಪ್ರದೇಶದ ಮೂಲಕ ಹಾದು ಹೋಗುತ್ತವೆ. ಆದ್ದರಿಂದ ವಿಮಾನಗಳು ಕಡಿಮೆ ಎತ್ತರದಿಂದ ಹಾರುತ್ತವೆ. ಆದ್ದರಿಂದ, ವಿಮಾನದ ಪ್ರಭಾವದಿಂದ ರಾಜಹಂಸಗಳು ಸಾವನ್ನಪ್ಪಿವೆ ಎಂದು ಅಂದಾಜಿಸಲಾಗಿದೆ.
ಮತ್ತಷ್ಟು ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ
ಮುಂಬೈಗೆ ಬರುವ ಗುಲಾಬಿ ಬಣ್ಣದ ಫ್ಲೆಮಿಂಗೋಗಳು ಪಕ್ಷಿ ಪ್ರಿಯರ ಪ್ರಮುಖ ಆಕರ್ಷಣೆಯಾಗಿದೆ. ಆದರೆ ಸೋಮವಾರ ರಾತ್ರಿ ಘಾಟ್‌ಕೋಪರ್ ಅಂಧೇರಿ ಸಂಪರ್ಕ ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸತ್ತ ಫ್ಲೆಮಿಂಗೋಗಳು ಮತ್ತು ಅವುಗಳ ಛಿದ್ರಗೊಂಡ ದೇಹಗಳು ಆಕಾಶದಿಂದ ಬಿದ್ದಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ನವಿ ಮುಂಬೈ ಒಂದು ಬದಿಯಲ್ಲಿ ವಿಶಾಲವಾದ ಕೊಲ್ಲಿಯನ್ನು ಹೊಂದಿರುವುದರಿಂದ, ಪ್ರತಿ ವರ್ಷ ಲಕ್ಷಾಂತರ ಫ್ಲೆಮಿಂಗೋಗಳು ಈ ಸ್ಥಳಕ್ಕೆ ಭೇಟಿ ನೀಡುತ್ತವೆ. ಘಟನೆಯು ರಾತ್ರಿ 8.40 ರಿಂದ 8.50 ರ ನಡುವೆ ನಡೆದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಭಯಾರಣ್ಯ ಪ್ರದೇಶದ ಮೂಲಕ ಹೊಸ ವಿದ್ಯುತ್ ಮಾರ್ಗಗಳು ಪಕ್ಷಿಗಳಿಗೆ ತೊಂದರೆ ಉಂಟುಮಾಡುತ್ತಿವೆ ಇದಕ್ಕೆ ಅನುಮತಿಸಬಾರದು ಎಂದು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:37 am, Tue, 21 May 24