ಪ್ರಯಾಣಿಕರ ಗಮನಕ್ಕೆ: ಮುಂಬೈನ ವಿಮಾನ ನಿಲ್ದಾಣ ಬೆಳಿಗ್ಗೆ 11ರಿಂದ ಸಾಯಂಕಾಲ 5ರವರೆಗೆ ಬಂದ್
ಮುಂಬೈನ ಛತ್ರಪತಿ ಮಹರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಾಳೆ 6 ಗಂಟೆ ಕಾಲ ಬಂದ್

ಮುಂಬೈ: ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಮುಂಬೈನ (Mumbai) ಛತ್ರಪತಿ ಮಹರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Chhatrapati Shivaji Maharaj International Airport) ನಾಳೆ (ಅ.18) ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಬಂದ್ ಇರಲಿದೆ. ಕಾರಣ ವಿಮಾನ ನಿಲ್ದಾಣದ RWY 14/32 ಮತ್ತು 9/27 ಎರಡು ರನ್ವೇಗಳ ವಾರ್ಷಿಕ ದುರಸ್ತಿ ಮತ್ತು ನವೀಕರಣ ಕಾರ್ಯ ನಡೆಯುವುದರಿಂದ ಬಂದ್ ಇರಲಿದೆ ಎಂದು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಅಧಿಕಾರಿಗಳು ತಿಳಿಸಿದ್ದಾರೆ.
14/32 ಮತ್ತು 9/27 ಎರಡು ರನ್ವೇಗಳಲ್ಲಿ ಎಡ್ಜ್ ಲೈಟ್ಗಳ ದುರಸ್ತಿ, ಎಜಿಎಲ್ (ಏರೋನಾಟಿಕಲ್ ಗ್ರೌಂಡ್ ಲೈಟ್ಸ್) ನವೀಕರಣ ಕಾರ್ಯಗಳು ನಡೆಯುವುದರಿಂದ 6 ಗಂಟೆಗಳ ಕಾಲ ವಿಮಾನ ನಿಲ್ದಾಣ ಬಂದ್ ಇರಲಿದೆ. ಇನ್ನೂ ಪ್ರಯಾಣಿಕರಿಗೆ ಅನಾನುಕೂಲತೆಯಿಂದ ತಪ್ಪಿಸಲು ಅ.18ರ ವಿಮಾನ ವೇಳಾಪಟ್ಟಿಯನ್ನು ಆಯಾ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸುವಂತೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ.
ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿದಿನ 800 ಕ್ಕೂ ಹೆಚ್ಚು ವಿಮಾನಗಳು ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಆಗುತ್ತವೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರನ್ವೇ ದುರಸ್ತಿ ಮತ್ತು ನವೀಕರಣ ಕಾರ್ಯ ನಡೆಸಲಾಗುತ್ತಿದೆ. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕು ಎಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಮತ್ತಷ್ಟು ಅಂತರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:51 pm, Mon, 17 October 22