ಮುಂಬೈ ಬಿಎಂಡಬ್ಲ್ಯು ಗುದ್ದೋಡು ಪ್ರಕರಣ: ಆರೋಪಿ ಮಿಹಿರ್ ಶಾಗೆ ಜುಲೈ 30ರವರೆಗೆ ನ್ಯಾಯಾಂಗ ಬಂಧನ
ಪೊಲೀಸ್ ತನಿಖೆಯ ಪ್ರಕಾರ, ಮಿಹಿರ್ ಶಾ ಕಾರಲ್ಲಿ ಬಾಂದ್ರಾ ವರ್ಲಿ ಸಮುದ್ರ ಸಂಪರ್ಕದ ಕಡೆಗೆ ವೇಗವಾಗಿ ಹೋಗುತ್ತಿದ್ದನು ಎಂದು ಹೇಳಲಾಗುತ್ತದೆ. ಅಪಘಾತ ಸಂಭವಿಸಿ ಮಹಿಳೆ ಕಾರಿನ ಬಾನೆಟ್ ಮೇಲೆ ಬಿದ್ದಿದ್ದು ನಂತರ 1.5 ಕಿಲೋಮೀಟರ್ ದೂರದವರೆಗೆ ಕಾರು ಆಕೆಯನ್ನು ಎಳೆದೊಯ್ದಿದೆ. ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಶಾ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಿದ್ದಾರೆ.
ಮುಂಬೈ ಜುಲೈ 16: ವರ್ಲಿ ಬಿಎಂಡಬ್ಲ್ಯು ಹಿಟ್ ಅಂಡ್ ರನ್ (BMW Hit and Run case) ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾಗೆ (Mihir Shah) ಮುಂಬೈ ನ್ಯಾಯಾಲಯ ಜುಲೈ 30 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. 24ರ ಹರೆಯದ ಮಿಹಿರ್ ಶಾ ಶಿವಸೇನಾ ರಾಜಕಾರಣಿ ರಾಜೇಶ್ ಶಾ (Rajesh Shah) ಅವರ ಪುತ್ರ. ಈತ ಮದ್ಯದ ಅಮಲಿನಲ್ಲಿ BMW ಅನ್ನು ಚಲಾಯಿಸಿದ್ದು, ಈ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ 45 ವರ್ಷದ ಕಾವೇರಿ ನಖ್ವಾ ಎಂಬ ಮಹಿಳೆ ಸಾವಿಗೀಡಾಗಿದ್ದರು. ವರ್ಲಿಯ ಆರ್ಟಿರಿಯಲ್ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಬೆಳಿಗ್ಗೆ 5:30 ಕ್ಕೆ ಬಿಎಂಡಬ್ಲ್ಯು ಸ್ಕೂಟರ್‌ಗೆ ಹಿಂಬದಿಯಿಂದ ಗುದ್ದಿದ್ದರಿಂದ ಮಹಿಳೆ ಸಾವಿಗೀಡಾಗಿದ್ದು, ಆಕೆಯ ಪತಿ ಪ್ರದೀಪ್ ನಖ್ವಾ ಗಾಯಗೊಂಡಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ, ಮಿಹಿರ್ ಶಾ ಕಾರಲ್ಲಿ ಬಾಂದ್ರಾ ವರ್ಲಿ ಸಮುದ್ರ ಸಂಪರ್ಕದ ಕಡೆಗೆ ವೇಗವಾಗಿ ಹೋಗುತ್ತಿದ್ದನು ಎಂದು ಹೇಳಲಾಗುತ್ತದೆ. ಅಪಘಾತ ಸಂಭವಿಸಿ ಮಹಿಳೆ ಕಾರಿನ ಬಾನೆಟ್ ಮೇಲೆ ಬಿದ್ದಿದ್ದು ನಂತರ 1.5 ಕಿಲೋಮೀಟರ್ ದೂರದವರೆಗೆ ಕಾರು ಆಕೆಯನ್ನು ಎಳೆದೊಯ್ದಿದೆ. ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಶಾ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮುಂಬೈ ಪೊಲೀಸ್ ತಂಡವು ಅಪಘಾತದ ದೃಶ್ಯವನ್ನು ಮರುಸೃಷ್ಟಿಸಿತ್ತು.
ಕೋರ್ಟ್ ಹೊರಗೆ ಮಿಹಿರ್ ಶಾ
VIDEO | Mumbai hit-and-run case: Accused Mihir Shah taken out from Sewri court. He has been sent to judicial custody for 14 days, till July 30. pic.twitter.com/aupJQERar9
— Press Trust of India (@PTI_News) July 16, 2024
ಪ್ರಕರಣದಲ್ಲಿ ಮಿಹಿರ್ ಶಾ (24) ಅವರ ಕುಟುಂಬದ ಚಾಲಕ ರಾಜಋಷಿ ಬಿಡಾವತ್ ಕೂಡಾ ಆರೋಪಿಯಾಗಿದ್ದಾರೆ. ಅಪಘಾತದ ವೇಳೆ ಬಿಡಾವತ್ ಕಾರಿನಲ್ಲಿದ್ದರು. ಶಿವಸೇನಾ ರಾಜಕಾರಣಿ ರಾಜೇಶ್ ಶಾ ಅವರ ಸೂಚನೆ ಮೇರೆಗೆ ಚಾಲಕ ಮಿಹಿರ್ ಜೊತೆ ಚಾಲಕನ ಸೀಟನ್ನು ಬದಲಾಯಿಸಿಕೊಂಡಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.
ಅಲ್ಲದೆ, ಪೊಲೀಸರ ವಿಚಾರಣೆ ವೇಳೆ ಮಿಹಿರ್ ಶಾ ಮದ್ಯಪಾನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಪೊಲೀಸರ ಪ್ರಕಾರ, ಅವರು ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ಕ್ಷೌರಿಕನ ಅಂಗಡಿಯಲ್ಲಿ ಗಡ್ಡವನ್ನು ಬೋಳಿಸಿಕೊಂಡಿದ್ದಾರೆ. ಗಿರ್‌ಗಾಂವ್‌ನಿಂದ ಘಟನೆ ನಡೆದ ವರ್ಲಿಯಲ್ಲಿನ ಸಮುದ್ರ ಸಂಪರ್ಕದ ಪ್ರವೇಶ ಬಿಂದುವಿಗೆ ಮಿಹಿರ್ ಶಾ ತಾನೇ ಕಾರನ್ನು ಓಡಿಸಿದ್ದಾನೆ ಎಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಬ್ಯಾಂಕ್ ಸರ್ವರ್ಗೆ ಕನ್ನ ಹಾಕಿ 6.71 ಕೋಟಿ ದೋಚಿದ ವಂಚಕರು
ದಂಪತಿಯ ಸ್ಕೂಟರ್‌ಗೆ ಡಿಕ್ಕಿ ಹೊಡೆದ ನಂತರ, ಮಹಿಳೆ ಐಷಾರಾಮಿ ಕಾರಿನ ಟೈರ್ ಒಂದರಲ್ಲಿ ಸಿಲುಕಿಕೊಂಡಿದ್ದಾಳೆ ಎಂದು ಶಾಗೆ ಗೊತ್ತಿತ್ತು. ಆದರೆ ಅವನು ಅಜಾಗರೂಕತೆಯಿಂದ ಚಾಲನೆ ಮಾಡಿದ್ದಾನೆ. ವಾಹನ ಚಾಲಕರು ಸಿಗ್ನಲ್ ಮಾಡಿ ಕೂಗಿದರು, ನಿಲ್ಲಿಸಲು ಕೇಳಿದರೂ ಅವ ಕಿವಿಗೊಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ