ತಾವಿಬ್ಬರು ಜತೆಗಿರುವ ಖಾಸಗಿ ವಿಡಿಯೋ ಚಿತ್ರೀಕರಿಸಿದ್ದಕ್ಕೆ ರೂಮ್ಮೇಟ್ನ ಕೊಲೆ ಮಾಡಿದ ಪ್ರೇಮಿಗಳು
ತಾವಿಬ್ಬರು ಜತೆಗಿರುವ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡಿದ್ದಕ್ಕೆ, ಪ್ರೇಮಿಗಳು ರೂಮ್ಮೇಟ್ನನ್ನು ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಅವರಿಬ್ಬರ ಖಾಸಗಿ ವಿಡಿಯೋ ಮಾಡಿದ್ದಲ್ಲದೆ ಆಕೆಯ ತನ್ನೊಂದಿಗೆ ಇರಲಿ ಇಲ್ಲದಿದ್ರೆ ವಿಡಿಯೋವನ್ನು ಪ್ರಸಾರ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮೂಲದ ಕ್ಯಾಬ್ ಚಾಲಕ ಸಂಜಯ್ ಅಸಾರಾಂ ಪಾಂಡೆ (43) ಏಪ್ರಿಲ್ 5 ರಂದು ಉಲ್ವೆಯ ಸೆಕ್ಟರ್ 24 ರ ಕ್ರಿಯಾಂಶ್ ರೆಸಿಡೆನ್ಸಿಯಲ್ಲಿರುವ ತನ್ನ ಬಾಡಿಗೆ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೂರು ದಿನಗಳ ಕಾಲ ಅವರ ದೇಹವನ್ನು ದಪ್ಪ ಹಾಸಿಗೆಯ ಕೆಳಗೆ ಮರೆಮಾಡಲಾಗಿತ್ತು ಎಂದು ವರದಿಯಾಗಿದೆ.

ಮುಂಬೈ, ಏಪ್ರಿಲ್ 08: ತಾವಿಬ್ಬರು ಜತೆಗಿರುವ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಿದ್ದಕ್ಕೆ ರೂಮ್ಮೇಟ್ನನ್ನು ಪ್ರೇಮಿಗಳಿಬ್ಬರು ಸೇರಿ ಕೊಲೆ(Murder) ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಉಲ್ವೆಯ ಲಾಕ್ಡೌನ್ ಅಪಾರ್ಟ್ಮೆಂಟ್ನಲ್ಲಿ ಕಳೆತ ಶವ ಪತ್ತೆಯಾಗಿತ್ತು. 19 ವರ್ಷದ ಮಹಿಳೆ ಮತ್ತು ಆಕೆಯ ಪ್ರಿಯಕರ ಸೇರಿ ಬರ್ಬರವಾಗಿ ಕೊಲೆ ಮಾಡಿದ್ದರು.
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮೂಲದ ಕ್ಯಾಬ್ ಚಾಲಕ ಸಂಜಯ್ ಅಸಾರಾಂ ಪಾಂಡೆ (43) ಏಪ್ರಿಲ್ 5 ರಂದು ಉಲ್ವೆಯ ಸೆಕ್ಟರ್ 24 ರ ಕ್ರಿಯಾಂಶ್ ರೆಸಿಡೆನ್ಸಿಯಲ್ಲಿರುವ ತನ್ನ ಬಾಡಿಗೆ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ. ಮೂರು ದಿನಗಳ ಕಾಲ ಅವರ ದೇಹವನ್ನು ದಪ್ಪ ಹಾಸಿಗೆಯ ಕೆಳಗೆ ಮರೆಮಾಡಲಾಗಿತ್ತು ಎಂದು ವರದಿಯಾಗಿದೆ.
ಆರೋಪಿಗಳನ್ನು ಪಂಜಾಬ್‌ನ ಉದ್ಯೋಗಾಕಾಂಕ್ಷಿ ರಿಯಾ ದಿನೇಶ್ ಸರ್ಕಲ್ಯನ್‌ಸಿಂಗ್ (19) ಮತ್ತು ಸಂಗಮ್ನೇರ್ ನಿವಾಸಿ ವಿಶಾಲ್ ಸಂಜಯ್ ಶಿಂಧೆ (21) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ರಿಯಾ ಸುಮಾರು ಒಂದು ತಿಂಗಳ ಹಿಂದೆ ಸಂಜಯ್‌ನನ್ನು ಭೇಟಿಯಾಗಿದ್ದಳು, ಅಲ್ಲಿ ಯಾರದ್ದೂ ಪರಿಚಯವಿರದ ಕಾರಣ ಆತನ ಫ್ಲ್ಯಾಟ್ನಲ್ಲೇ ವಾಸಿಸಲು ಶುರುಮಾಡಿದ್ದಳು. ಊಟಕ್ಕೆ ಮಾತ್ರ ಮನೆಗೆ ಹಿಂತಿರುಗುತ್ತಿದ್ದನು ಎಂದು ವರದಿಯಾಗಿದೆ.
ಮತ್ತಷ್ಟು ಓದಿ:ಅಕ್ರಮ ಸಂಬಂಧಕ್ಕೆ ಅಡ್ಡಿ.. ಪತಿ ಕಥೆ ಮುಗಿಸಿದ ಪತ್ನಿ, ಗಂಡನ ಶವದ ಮುಂದೆ ಕಣ್ಣೀರಿಟ್ಟಿದ್ದ ಮಳ್ಳಿ
ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮೊದಲು ಮೂವರು ಸ್ವಲ್ಪ ಸಮಯದವರೆಗೆ ಒಂದೇ ಫ್ಲ್ಯಾಟ್ನಲ್ಲಿದ್ದರು. ವಿಶಾಲ್ ಆಕೆಯೊಂದಿಗಿರುವ ವಿಡಿಯೋವನ್ನು ಸಂಜಯ್ ಮಾಡಿದ್ದ. ನಂತರ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುವ ಬೆದರಿಕೆ ಹಾಕಿ ರಿಯಾ ತನ್ನೊಂದಿಗೂ ಇರಲಿ ಎಂದಿದ್ದ. ಇದರಿಂದ ಕೋಪಗೊಂಡ ಇಬ್ಬರೂ ಆತನನ್ನು ಕೊಲೆ ಮಾಡಿದ್ದಾರೆ.
ಏಪ್ರಿಲ್ 2 ರಂದು, ತೀವ್ರ ವಾಗ್ವಾದದ ನಂತರ, ಪ್ರೇಮಿಗಳು ಸಂಜಯ್ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ, ತಲೆಗೆ ಮಾರಣಾಂತಿಕವಾಗಿ ಹೊಡೆದರು. ನಂತರ ಅವರು ಅವನ ದೇಹವನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟು, ಫ್ಲಾಟ್ ಅನ್ನು ಲಾಕ್ ಮಾಡಿ, ಸಂಜಯ್ ಕಾರಿನಲ್ಲಿ ನಗರದಿಂದ ಪರಾರಿಯಾಗಿದ್ದರು.
ಪುಣೆ ಬಳಿ ಕಾರು ಅಪಘಾತಕ್ಕೀಡಾಗಿತ್ತು, ಇಬ್ಬರಿಗೂ ಯಾವುದೇ ಹಾನಿಯಾಗಿರಲಿಲ್ಲ. ವಾಹನದ ನೋಂದಾಯಿತ ಮಾಲೀಕ ಸಂಜಯ್ ಅವರನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ ಆತಂಕ ಉಂಟಾಯಿತು.
ಕುಟುಂಬ ಸದಸ್ಯರ ಸಲಹೆಯ ಮೇರೆಗೆ ಪ್ರೇಮಿಗಳು ಏಪ್ರಿಲ್ 5 ರಂದು ಸಂಗಮ್ನೇರ್ ಪೊಲೀಸರಿಗೆ ಶರಣಾದರು. ಫ್ಲ್ಯಾಟ್ಗೆ ತೆರಳಿ ಕೊಳೆತ ದೇಹವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ರಿಯಾ ಮತ್ತು ವಿಶಾಲ್ ಇಬ್ಬರನ್ನೂ ಬಂಧಿಸಿದ್ದಾರೆ. ಕೊಲೆಗೆ ಬಳಸಲಾದ ಆಯುಧ ಮತ್ತು ಸಂಜಯ್ ಅವರ ಮೊಬೈಲ್ ಫೋನ್‌ಗಾಗಿ ಹುಡುಕಾಟ ನಡೆಯುತ್ತಿದೆ, ಅದರಲ್ಲಿ ಸ್ಪಷ್ಟ ವೀಡಿಯೊಗಳಿವೆ ಎಂದು ನಂಬಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ