Shraddha Walker: ಲಿವ್-ಇನ್ ಸಂಗಾತಿಯಿಂದ ಕೊಲೆಯಾಗಿದ್ದ ಶ್ರದ್ಧಾ ವಾಕರ್ ತಂದೆ ಹೃದಯಾಘಾತದಿಂದ ಸಾವು
ಲಿವ್ -ಇನ್ ಸಂಗಾತಿಯ ಕೈಯಿಂದ ಬರ್ಬರವಾಗಿ ಕೊಲೆಯಾಗಿದ್ದ ಶ್ರದ್ಧಾ ವಾಕರ್ ಅವರ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮುಂಬೈನ ವಸಾಯಿಯಲ್ಲಿ ನಿಧನರಾದರು. ಮಗಳ ಮರಣದ ನಂತರ ಆಕೆಯ ತಂದೆ ಜರ್ಜರಿತರಾಗಿದ್ದರು. ಮಗಳ ಅಂತಿಮ ವಿಧಿವಿಧಾನವನ್ನು ನೆರವೇರಿಸಲು, ದೇಹದ ಉಳಿದ ಭಾಗಗಳನ್ನು ಪಡೆಯಲು ಕಾಯುತ್ತಿದ್ದರು ಎಂದು ಹೇಳಲಾಗುತ್ತಿದೆ.

ಶ್ರದ್ಧಾ ವಾಕರ್ ಲಿವ್ ಇನ್ ಸಂಗಾತಿ ಅಫ್ತಾಬ್ ಪೂನಾವಾಲಾ ಎಂಬಾತ ಆಕೆಯನ್ನು ಕ್ರೂರವಾಗಿ ಕೊಲೆ ಮಾಡಿದ್ದ, ದೇಹವನ್ನು ತುಂಡುಗಳಾಗಿ ಕತ್ತರಿಸಿ ವಾರಗಳ ಕಾಲ ಮನೆಯ ಫ್ರಿಡ್ಜ್ನಲ್ಲಿ ಇರಿಸಿದ್ದ. ಬಳಿಕ ಮೆಹ್ರೌಲಿಯಲ್ಲಿ ದೇಹದ ಭಾಗಗಳಲ್ಲಿ ಬೇರೆ ಬೇರೆ ಕಡೆ ಎಸೆದುಬಂದಿದ್ದ. ಪ್ರಸ್ತುತ ಅಫ್ತಾಬ್ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಶ್ರದ್ಧಾಳ ದೇಹದ ಭಾಗಗಳು ಇನ್ನೂ ಪೊಲೀಸರ ವಶದಲ್ಲಿವೆ.
ಆಕೆಯ ಅಂತ್ಯಕ್ರಿಯೆಯನ್ನು ಅವರಿಂದ ನಡೆಸಲು ಸಾಧ್ಯವಾಗಲಿಲ್ಲ, ಹೀಗಾಗಿ ತುಂಬಾ ಕುಗ್ಗಿಹೋಗಿದ್ದರು. ಏಕಾಏಕಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.ಶ್ರದ್ಧಾ ವಾಕರ್ ಕೊಲೆ ಪ್ರಕರಣವು ನವೆಂಬರ್ 12, 2022 ರಂದು ಮೆಹ್ರೌಲಿಯಲ್ಲಿ ಅಫ್ತಾಬ್ ದೇಹದ ಭಾಗಗಳನ್ನು ವಿಲೇವಾರಿ ಮಾಡುವಾಗ ಸಿಕ್ಕಿಬಿದಿದ್ದ.
ನಂತರ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ, ಮೇ 18 ರಂದು ಶ್ರದ್ಧಾಳನ್ನು ಕೊಂದಿದ್ದಾಗಿ ಹೇಳಿದ್ದಾನೆ. ಇದಾದ ನಂತರ, ಅವನು ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ನಿಧಾನವಾಗಿ ಮೆಹ್ರೌಲಿಯ ಕಾಡಿನಲ್ಲಿ ಎಸೆದಿದ್ದ.
ಮತ್ತಷ್ಟು ಓದಿ: Shraddha Walker: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ, ಆಫ್ತಾಬ್ ಪೂನಾವಾಲಾ ವಿರುದ್ಧ ದೆಹಲಿ ಕೋರ್ಟ್ ಇಂದು ಆದೇಶ ನೀಡುವ ಸಾಧ್ಯತೆ
ಬಹಳ ಸಮಯ ಕಳೆದಿತ್ತು, ಮತ್ತು ಪೊಲೀಸರಿಗೆ ಶ್ರದ್ಧಾಳ ದೇಹದ ಕೆಲವು ಭಾಗಗಳು ಮಾತ್ರ ಸಿಕ್ಕಿದ್ದವು. ಡಿಎನ್ಎ ಪರೀಕ್ಷೆಯ ನಂತರ, ಅದು ಅವಳದೇ ಎಂದು ಸಾಬೀತಾಯಿತು. ನವೆಂಬರ್‌ನಲ್ಲಿ ಬದುಕಿಲ್ಲ ಎಂಬುದು ಮೊದಲು ಶ್ರದ್ಧಾಳ ತಂದೆಗೆ ತಿಳಿಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ