ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಾತ್ಕಾಲಿಕವಾಗಿ ಸ್ಥಗಿತ
ಮುಂಬೈನಲ್ಲಿ ಉಂಟಾದ ಹವಾಮಾನ ವೈಪರೀತ್ಯ ಮತ್ತು ಧೂಳಿನಿಂದ ಕೂಡಿದ ಬಿರುಗಾಳಿಯಿಂದಾಗಿ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (CSMIA) ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಕಡಿಮೆ ಗೋಚರತೆ ಮತ್ತು ರಭಸದ ಗಾಳಿಯಿಂದಾಗಿ ಸುಮಾರು 66 ನಿಮಿಷಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು.
ಮುಂಬೈ: ಮುಂಬೈನಲ್ಲಿ (Mumbai) ಈ ವರ್ಷದ ಮೊದಲ ಮಳೆ ಉಂಟಾಗಿದೆ. ಇದರೊಂದಿಗೆ ಭಾರೀ ಧೂಳಿನಿಂದ ಕೂಡಿದ ಬಿರುಗಾಳಿಯು ಇಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಆಕಾಶವನ್ನು ಕತ್ತಲೆಯಾಗಿಸಿತು. ಮಳೆಯು (Rain in Mumbai) ಮುಂಬೈ ಮತ್ತು ಅದರ ಪಕ್ಕದ ಪ್ರದೇಶದ ನಿವಾಸಿಗಳಿಗೆ ಉರಿ ಬಿಸಿಲಿನಿಂದ ಪರಿಹಾರವನ್ನು ನೀಡುತ್ತದೆ. ಹವಾಮಾನ ವೈಪರೀತ್ಯದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ (Chhatrapati Shivaji Maharaj International Airport) ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮುಂಬೈನ ಘಾಟ್‌ಕೋಪರ್, ಬಾಂದ್ರಾ ಕುರ್ಲಾ, ಧಾರಾವಿ ಪ್ರದೇಶದಲ್ಲಿ ಬಲವಾದ ಗಾಳಿ ಮತ್ತು ಮಳೆಯಾಗಿದೆ. ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮತ್ತು ಟೇಕಾಫ್ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 5:03ಕ್ಕೆ ಕಾರ್ಯಾಚರಣೆ ಪುನರಾರಂಭವಾಯಿತು. ಮುಂಬೈ ವಿಮಾನ ನಿಲ್ದಾಣವು ಕಳೆದ ವಾರ ತನ್ನ ಪೂರ್ವ ಮಾನ್ಸೂನ್ ರನ್‌ವೇ ನಿರ್ವಹಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
ಇದನ್ನೂ ಓದಿ: IPL 2024: ಡ್ರೆಸ್ಸಿಂಗ್ ರೂಮ್ನಲ್ಲಿ ಕಣ್ಣೀರಿಟ್ಟ ರೋಹಿತ್ ಶರ್ಮಾ: ಮುಂಬೈ ತಂಡದಲ್ಲಿ ಏನಾಗುತ್ತಿದೆ?
ಮುಂಬೈನ ಘಾಟ್‌ಕೋಪರ್‌ನ ಚೆಡ್ಡಾನಗರ ಜಂಕ್ಷನ್‌ನಲ್ಲಿ 100 ಅಡಿ ಎತ್ತರದ ಜಾಹೀರಾತು ಫಲಕವು ಉರುಳಿ ಪೆಟ್ರೋಲ್ ಪಂಪ್‌ನ ಮೇಲೆ ಬಿದ್ದಿದ್ದು, ವಾಹನಗಳು ಮತ್ತು ಜನರನ್ನು ಸಿಲುಕಿರುವ ದೃಶ್ಯಗಳು ವೈರಲ್ ಆಗಿವೆ. ಸಿಕ್ಕಿಬಿದ್ದವರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಗೆ ಕರೆ ನೀಡಲಾಗಿದೆ. 100ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
📌Mod to intense thunderstorms over Red marked areas; District of Thane, Palghar, Raigad, Nagar & eastern suburbs of Mumbai during next 2 hrs. Mulund, Tiltwala, Kalyaan 📌Mod to severe thunderstorms over yellow areas covering South ghat areas of Pune, Satara next 2,3 hrs Watch pl pic.twitter.com/WF7qd7LWsE
— K S Hosalikar (@Hosalikar_KS) May 13, 2024
ಇದನ್ನೂ ಓದಿ: ದೆಹಲಿ, ಮುಂಬೈಗಿಂತ ಬೆಂಗಳೂರಿನ ಕಂಪನಿಗಳಿಂದ ಹೆಚ್ಚು ಮ್ಯಾಟರ್ನಿಟಿ ಸೌಲಭ್ಯ
ಬಲವಾದ ಗಾಳಿಯಿಂದಾಗಿ ಬ್ಯಾನರ್‌ನ ತಂತಿಯ ಮೇಲೆ ಬ್ಯಾನರ್ ಬಿದ್ದ ನಂತರ ಆರೆ ಮತ್ತು ಅಂಧೇರಿ ಪೂರ್ವ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೆಟ್ರೋ ರೈಲಿನ ವಕ್ತಾರರು ತಿಳಿಸಿದ್ದಾರೆ. ಜೋರಾದ ಗಾಳಿಯಿಂದಾಗಿ ಹಲವೆಡೆ ಮರಗಳು ಧರೆಗುರುಳಿವೆ. ಮುಂಬೈನ ನೆರೆಯ ನವಿ ಮುಂಬೈನಲ್ಲಿ, ಅರೋಲಿ ಸೆಕ್ಟರ್ 5 ಪ್ರದೇಶದಲ್ಲಿ ಜನನಿಬಿಡ ರಸ್ತೆಯ ಮೇಲೆ ಮರವೊಂದು ಬಿದ್ದಿದೆ. ಯಾರಿಗೂ ಗಾಯಗಳಾಗಿಲ್ಲ ಆದರೆ ನಗರದಲ್ಲಿ ಭಾರೀ ಗಾಳಿ ಬೀಸುತ್ತಿರುವುದರಿಂದ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ತಮ್ಮ ವಾಹನಗಳನ್ನು ಸುರಕ್ಷಿತ ದೂರದಲ್ಲಿ ನಿಲ್ಲಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ