
ನವದೆಹಲಿ, ಏಪ್ರಿಲ್ 20: ಮುರ್ಷಿದಾಬಾದ್ ಹಿಂಸಾಚಾರದಿಂದ ನಲುಗುತ್ತಿರುವ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ (Presdent’s Rule) ಜಾರಿಯಾಗಬೇಕೆಂಬ ಆಗ್ರಹ ಕೇಳಿಬಂದಿದೆ. ಇಂಕ್ ಇನ್ಸೈಟ್ (InkInsight) ಐವಿಆರ್ಎಸ್ ಮೂಲಕ ನಡೆಸಿದ ವ್ಯಾಪಕ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಇಂದು ಭಾನುವಾರ ಬಿಡುಗಡೆ ಆದ ಸಮೀಕ್ಷಾ ವರದಿ ಪ್ರಕಾರ, ಮುರ್ಷಿದಾಬಾದ್ ಘಟನೆ ಬಳಿಕ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಬೇಕೋ ಬೇಡವೋ ಎನ್ನುವ ಪ್ರಶ್ನೆಗೆ ಶೇ. 59ರಷ್ಟು ಜನರು ಹೌದು ಎಂದಿದ್ದಾರೆ. ಶೇ. 28ರಷ್ಟು ಜನರು ರಾಷ್ಟ್ರಪತಿ ಆಳ್ವಿಕೆ ಬೇಡ ಎಂದಿದ್ದಾರೆ.
ಇಂಕ್ ಇನ್ಸೈಟ್ ಸಂಸ್ಥೆ ಪಶ್ಚಿಮ ಬಂಗಾಳದೊಳಗೆ ಫೋನ್ ಮೂಲಕ ಕಳೆದ ಎರಡು ಮೂರು ದಿನದಲ್ಲಿ ಈ ಸಮೀಕ್ಷೆ ನಡೆಸಿದೆ. 8,954 ಮಂದಿಯ ಅಭಿಪ್ರಾಯ ಪಡೆಯಲಾಗಿದೆ.
ಮುರ್ಷಿದಾಬಾದ್ ಹಿಂಸಾಚಾರದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ಹಿಂದೂಗಳ ವಿಶ್ವಾಸ ಕುಸಿದಿದೆಯಾ ಎನ್ನುವ ಪ್ರಶ್ನೆಗೆ, ಶೇ. 58 ಮಂದಿ ಹೌದು ಎಂದಿದ್ದಾರೆ. ಶೇ. 22 ಮಂದಿ ಇಲ್ಲ ಎಂದಿದ್ದಾರೆ. ಗೊತ್ತಿಲ್ಲ ಎಂದವರ ಸಂಖ್ಯೆ ಶೇ. 20 ಇದೆ.
ಇದನ್ನೂ ಓದಿ: ರಾಹುಲ್ ಗಾಂಧಿಯಿಂದ ಇತಿಹಾಸ ಕಲಿಯಬೇಡಿ; ನೆಹರು ಬಗ್ಗೆಯೇ ತಪ್ಪು ಹೇಳಿದ್ದಕ್ಕೆ ಬಿಜೆಪಿ ಸಂಸದ ವ್ಯಂಗ್ಯ
ಈ ವಿಚಾರದಲ್ಲಿ ಪುರುಷರು ಮತ್ತು ಮಹಿಳೆಯರ ಅಭಿಪ್ರಾಯ ವರ್ಗೀಕರಿಸಿದರೆ, ಪುರುಷರು ಹೆಚ್ಚು ಹೌದು ಎಂದಿದ್ದಾರೆ. ಅಂದರೆ, ಹಿಂದೂಗಳ ಭಾವನೆಗೆ ಮಮತಾ ಬ್ಯಾನರ್ಜಿ ಧಕ್ಕೆ ತಂದಿದ್ದಾರೆ ಎಂದು ಶೇ. 61.24 ಪುರುಷರು ಅಭಿಪ್ರಾಯಪಟ್ಟಿದ್ದಾರೆ.
ಮುರ್ಷಿದಾಬಾದ್ ಹಿಂಸಾಚಾರದ ಬಳಿಕ ಮಮತಾ ಬ್ಯಾನರ್ಜಿ ಬಗ್ಗೆ ಹಿಂದೂಗಳ ವಿಶ್ವಾಸ ಕಡಿಮೆ ಆಗಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ಬಂಗಾಳದ ಶೇ. 80.85 ಜನರು ಹೌದು ಎಂದಿದ್ದಾರೆ.
ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಇಲ್ಲಿನ ಶೇ. 70.73 ಮಂದಿಯ ಅನಿಸಿಕೆ.
ಮಮತಾ ಬ್ಯಾನರ್ಜಜಿ ಬಗ್ಗೆ ಹಿಂದೂಗಳ ವಿಶ್ವಾಸ ಧಕ್ಕೆಯಾಗಿದೆ ಎಂದು ಪ್ರೆಸಿಡೆನ್ಸಿ ಪ್ರದೇಶದ ಶೇ. 54.29 ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬೇಕು ಎಂಬುದು ಇಲ್ಲಿನ ಶೇ. 55.29 ಮಂದಿಯ ಅನಿಸಿಕೆಯಾಗಿದೆ.
ಮಮತಾ ಬ್ಯಾನರ್ಜಿ ಬಗ್ಗೆ ಹಿಂದೂಗಳ ವಿಶ್ವಾಸ ಕಡಿಮೆ ಆಗಿರಬಹುದು ಎಂದು ಬರ್ಧಮಾನ್ ಜಿಲ್ಲೆಯ ಶೇ. 55.88 ಮಂದಿ ಅಭಿಪ್ರಾಯಪಟ್ಟಿದ್ದಾರೆ. ಶೇ. 17.65 ಮಂದಿ ತದ್ವಿರುದ್ಧದ ಅನಿಕೆ ನೀಡಿದ್ದಾರೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ; ರಾಜಕೀಯ ಪಿತೂರಿಯಿಂದ ನಮ್ಮನ್ನು ಹೆದರಿಸಲಾಗದು ಎಂದ ಖರ್ಗೆ
ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಬೇಕಾ ಬೇಡವಾ ಎನ್ನುವ ಪ್ರಶ್ನೆಗೆ ಬರ್ಧಮಾನ್ನ ಶೇ. 52.38 ಮಂದಿ ಹೌದು ಎಂದರೆ, ಶೇ. 33.33 ಮಂದಿ ಇಲ್ಲ ಎಂದಿದ್ದಾರೆ.
ಮುರ್ಷಿದಾಬಾದ್ ಹಿಂಸಾಚಾರದ ಬಳಿಕ ಸಿಎಂ ಮಮತಾ ಬ್ಯಾನರ್ಜಿ ಹಿಂದೂಗಳ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಜಂಗಲ್ಮಹಲ್ನ ಶೇ. 57.14 ಮಂದಿ ಒಪ್ಪಿಕೊಂಡಿದ್ದಾರೆ. ಹಾಗೇನೂ ಆಗಿಲ್ಲ ಎಂದು ಶೇ. 17.58 ಮಂದಿ ಮಾತ್ರ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರಪತಿ ಆಳ್ವಿಕೆ ಹೇರಬೇಕೆನ್ನುವ ಬಗ್ಗೆ ಶೇ. 65.52 ಮಂದಿ ಹೌದು ಎಂದಿದ್ದಾರೆ. ಶೇ. 20.69 ಮಂದಿ ರಾಷ್ಟ್ರಪತಿ ಆಳ್ವಿಕೆ ಬೇಡ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Sun, 20 April 25