AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಜಾಫರ್‌ಪುರ ಅಗ್ನಿ ದುರಂತ; ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಆಸ್ಪತ್ರೆ ನೋಂದಣಿ ರದ್ದು, ಮೂವರ ಬಂಧನ

ಬಿಹಾರದ ಮುಜಾಫರ್‌ಪುರದಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ಐಸಿಯುನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ. ಅಗ್ನಿ ಅವಘಡ ಸಂಭವಿಸಿದಾಗ ಐಸಿಯುನಲ್ಲಿದ್ದ ರೋಗಿಗಳನ್ನು ತಕ್ಷಣವೇ ರಕ್ಷಿಸಿ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಹೊಗೆಯನ್ನು ಉಸಿರಾಡಿದ ಕಾರಣ ಮತ್ತು ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಈಗಾಗಲೇ ಆರು ಜನ ಮೃತಪಟ್ಟಿದ್ದರು. ಇದೀಗ ಐಸಿಯುನಲ್ಲಿದ್ದ ಮತ್ತೊಬ್ಬ ರೋಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಮುಜಾಫರ್‌ಪುರ ಅಗ್ನಿ ದುರಂತ; ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಆಸ್ಪತ್ರೆ ನೋಂದಣಿ ರದ್ದು, ಮೂವರ ಬಂಧನ
Muzaffarpur Hospital Fire Tragedy
ಸುಷ್ಮಾ ಚಕ್ರೆ
|

Updated on: Jun 06, 2026 | 9:14 PM

Share

ಮುಜಾಫರ್‌ಪುರ, ಜೂನ್ 6: ಬಿಹಾರದ ಮುಜಾಫರ್‌ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Fire Accident) ಚಿಕಿತ್ಸೆ ಫಲಕಾರಿಯಾಗದೆ ಇಂದು ಮತ್ತೊಬ್ಬ ರೋಗಿ ಮೃತಪಟ್ಟಿದ್ದಾರೆ. ಇದರೊಂದಿಗೆ ದುರಂತದಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಆಸ್ಪತ್ರೆಯ ನೋಂದಣಿಯನ್ನು ತಕ್ಷಣದಿಂದಲೇ ರದ್ದುಗೊಳಿಸಿದ್ದು, ಸುರಕ್ಷತಾ ಲೋಪಗಳ ಆರೋಪದ ಮೇಲೆ ಮೂವರು ಸಿಬ್ಬಂದಿಯನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಇಂದು ಮೃತಪಟ್ಟ ಸಂತ್ರಸ್ತರನ್ನು ಮುಜಾಫರ್‌ಪುರ ಜಿಲ್ಲೆಯ ಪಾರ್ರಿ ಗ್ರಾಮದ ನಿವಾಸಿ ಅಂಜನಿ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ‘ಪ್ರಸಾದ್ ಆಸ್ಪತ್ರೆ’ಯ ತೀವ್ರ ನಿಗಾ ಘಟಕದಲ್ಲಿ (ICU) ಬೆಂಕಿ ಕಾಣಿಸಿಕೊಂಡಾಗ ಅಂಜನಿ ಸಿಂಗ್ ಅವರನ್ನು ರಕ್ಷಿಸಲಾಗಿತ್ತು. ಆದರೆ, ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ತಡರಾತ್ರಿ ಮುಜಾಫರ್‌ಪುರದ ಪ್ರಸಾದ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಧಿಕಾರಿಗಳ ಪ್ರಕಾರ, ಬೆಂಕಿ ಕಾಣಿಸಿಕೊಂಡ ತಕ್ಷಣ ಐಸಿಯು ತುಂಬಾ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಅಲ್ಲಿ ಹಲವು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಐವರು ರೋಗಿಗಳು ಮೃತಪಟ್ಟರೆ, ಶುಕ್ರವಾರ ಮತ್ತೊಬ್ಬರು ಸಾವನ್ನಪ್ಪಿದ್ದರು. ಇಂದು ಅಂಜನಿ ಸಿಂಗ್ ಅವರ ಸಾವಿನೊಂದಿಗೆ ಒಟ್ಟು ಮೃತರ ಸಂಖ್ಯೆ 7ಕ್ಕೇರಿದೆ.

ಇದನ್ನೂ ಓದಿ: ದೆಹಲಿಯ ಬೆಂಕಿ ದುರಂತದಲ್ಲಿ ಬಾಂಗ್ಲಾ, ಅಫ್ಘಾನ್, ಆಫ್ರಿಕಾದ ಪ್ರವಾಸಿಗರೂ ಸಾವು; ಹೋಟೆಲ್ ಮಾಲೀಕ ಪರಾರಿ

ಈ ದುರಂತದ ಬೆನ್ನಲ್ಲೇ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಪ್ರಸಾದ್ ಆಸ್ಪತ್ರೆಯ ನೋಂದಣಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಅಲ್ಲದೆ, ಜಿಲ್ಲಾ ಸಿವಿಲ್ ಸರ್ಜನ್ ಅವರು ಆಸ್ಪತ್ರೆ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದು, ಮುಂದಿನ 7 ದಿನಗಳ ಒಳಗಾಗಿ ಸೂಕ್ತ ದಾಖಲೆಗಳು ಮತ್ತು ಸಾಕ್ಷ್ಯಗಳೊಂದಿಗೆ ವಿವರವಾದ ಸ್ಪಷ್ಟೀಕರಣವನ್ನು ನೀಡುವಂತೆ ಆದೇಶಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಮೂವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ತುರ್ತು ಪ್ರತಿಕ್ರಿಯೆ ಕ್ರಮಗಳಲ್ಲಿ ಏನಾದರೂ ವೈಫಲ್ಯಗಳಾಗಿದ್ದವೇ? ಮತ್ತು ರೋಗಿಗಳನ್ನು ಸ್ಥಳಾಂತರಿಸಲು ಸರಿಯಾದ ಪ್ರಯತ್ನಗಳನ್ನು ಮಾಡಲಾಗಿತ್ತೇ? ಎಂಬಿತ್ಯಾದಿ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ದೆಹಲಿ ಬೆಂಕಿ ದುರಂತ; ಹೋಟೆಲ್ ಮಾಲೀಕ ಬಂಧನ, ನ್ಯಾಯಾಂಗ ತನಿಖೆಗೆ ಆದೇಶ

ಬೆಂಕಿ ಅವಘಡದ ಸಮಯದಲ್ಲಿ ಕೆಲವು ಸಿಬ್ಬಂದಿ ರೋಗಿಗಳನ್ನು ಬಿಟ್ಟು ಆಸ್ಪತ್ರೆಯಿಂದ ಓಡಿಹೋಗಿದ್ದರು ಎಂಬ ಗಂಭೀರ ಆರೋಪಗಳೂ ಕೇಳಿಬಂದಿದ್ದು, ತನಿಖಾಧಿಕಾರಿಗಳು ಈ ಬಗ್ಗೆಯೂ ಪರಿಶೀಲಿಸುತ್ತಿದ್ದಾರೆ. ಈ ದುರಂತವು ಆರೋಗ್ಯ ರಕ್ಷಣಾ ಕೇಂದ್ರಗಳಲ್ಲಿ, ವಿಶೇಷವಾಗಿ ರೋಗಿಗಳು ಸ್ವತಃ ಸ್ಥಳಾಂತರಗೊಳ್ಳಲು ಸಾಧ್ಯವಾಗದ ಐಸಿಯುನಂತಹ ನಿರ್ಣಾಯಕ ವಿಭಾಗಗಳಲ್ಲಿನ ಅಗ್ನಿ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ತೀವ್ರ ಕಳವಳ ಮೂಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
‘ಮ್ಯಾಂಗೊ ಪಚ್ಚ’ ಕಟೌಟ್​​ನಲ್ಲಿ ನಟ ದರ್ಶನ್ ಚಿತ್ರ: ಸುದೀಪ್ ಹೇಳಿದ್ದೇನು?
‘ಮ್ಯಾಂಗೊ ಪಚ್ಚ’ ಕಟೌಟ್​​ನಲ್ಲಿ ನಟ ದರ್ಶನ್ ಚಿತ್ರ: ಸುದೀಪ್ ಹೇಳಿದ್ದೇನು?
ನೂತನ ಸಿಎಂ ಡಿಕೆ ಶಿವಕುಮಾರ್​​ಗೆ ಶುಭ ಹಾರೈಸಿದ ಲಿಂಗಾಯತ ಸ್ವಾಮೀಜಿಗಳು
ನೂತನ ಸಿಎಂ ಡಿಕೆ ಶಿವಕುಮಾರ್​​ಗೆ ಶುಭ ಹಾರೈಸಿದ ಲಿಂಗಾಯತ ಸ್ವಾಮೀಜಿಗಳು
ರಾಜೀನಾಮೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಹೇಳಿಕೆ
ರಾಜೀನಾಮೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಹೇಳಿಕೆ
ಕ್ಲಿಯರ್ ಔಟ್ ಆಗಿದ್ದರೂ... ನಾಟಕವಾಡಿ ಬಚಾವಾದ ಕೆಎಲ್ ರಾಹುಲ್!
ಕ್ಲಿಯರ್ ಔಟ್ ಆಗಿದ್ದರೂ... ನಾಟಕವಾಡಿ ಬಚಾವಾದ ಕೆಎಲ್ ರಾಹುಲ್!
ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡದ್ದಕ್ಕೆ ಕೆಕೆಆರ್​ಟಿಸಿ ಬಸ್ ಜಪ್ತಿ
ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡದ್ದಕ್ಕೆ ಕೆಕೆಆರ್​ಟಿಸಿ ಬಸ್ ಜಪ್ತಿ
‘ಮ್ಯಾಂಗೋ ಪಚ್ಚ’ ರಿಲೀಸ್ ಬೆನ್ನಲ್ಲೇ ಕಿಚ್ಚ ಸುದೀಪ್ ಸುದ್ದಿಗೋಷ್ಠಿ
‘ಮ್ಯಾಂಗೋ ಪಚ್ಚ’ ರಿಲೀಸ್ ಬೆನ್ನಲ್ಲೇ ಕಿಚ್ಚ ಸುದೀಪ್ ಸುದ್ದಿಗೋಷ್ಠಿ
ಕೆಸಿಇಟಿ ಫಲಿತಾಂಶ ಪ್ರಕಟ: ಸಚಿವರ ಸುದ್ದಿಗೋಷ್ಠಿ ನೇರಪ್ರಸಾರ
ಕೆಸಿಇಟಿ ಫಲಿತಾಂಶ ಪ್ರಕಟ: ಸಚಿವರ ಸುದ್ದಿಗೋಷ್ಠಿ ನೇರಪ್ರಸಾರ
2 ದಿನಗಳಲ್ಲಿ 33 ವಿಕೆಟ್ ಪತನ: ರೋಚಕ ಘಟ್ಟದತ್ತ 'ಲಾರ್ಡ್ಸ್'​ ಟೆಸ್ಟ್
2 ದಿನಗಳಲ್ಲಿ 33 ವಿಕೆಟ್ ಪತನ: ರೋಚಕ ಘಟ್ಟದತ್ತ 'ಲಾರ್ಡ್ಸ್'​ ಟೆಸ್ಟ್
ಬರ್ತ್ ಡೇ ಪಾರ್ಟಿ ವೇಳೆ ಕುಸಿದು ಬಿದ್ದ ಕಟ್ಟಡ: 15 ಯುವಕರು ಜಸ್ಟ್ ಮಿಸ್
ಬರ್ತ್ ಡೇ ಪಾರ್ಟಿ ವೇಳೆ ಕುಸಿದು ಬಿದ್ದ ಕಟ್ಟಡ: 15 ಯುವಕರು ಜಸ್ಟ್ ಮಿಸ್
ಜೂನ್ ತಿಂಗಳ ಈ ದಿನದಂದು ವಾಹನ ಖರೀದಿ ಮಾಡಿದರೆ ಶುಭ!
ಜೂನ್ ತಿಂಗಳ ಈ ದಿನದಂದು ವಾಹನ ಖರೀದಿ ಮಾಡಿದರೆ ಶುಭ!