ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಈ ನಿಟ್ಟಿನಲ್ಲಿ ಅನೇಕ ಪರಿಸರ ಪ್ರೇಮಿಗಳು ದುಡಿಯುತ್ತಿದ್ದಾರೆ. ಈ ಪರಿಸರ ಸಂರಕ್ಷಣೆಗೆ ನೀಡಿದ ಕೊಡುಗೆ ಅಪಾರ. ದೇಶದ ಕೆಲವೊಂದು ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಇಂತಹವರನ್ನು ಸರ್ಕಾರ ಕೂಡು ಗುರುತಿಸಿ ಗೌರವಸಿದೆ. ಆದರೆ ಇನ್ನೂ ಇಂತಹ ಸ್ಫೂರ್ತಿ ನೀಡುವ ವ್ಯಕ್ತಿಗಳು ಮತ್ತು ವ್ಯಕ್ತಿಗಳು ಇದೆ, ಅಂತಹ ವ್ಯಕ್ತಿಗಳನ್ನು My India My Life Goals ಅಭಿಯಾನದ ಮೂಲಕ ಟಿವಿ9 ಗುರುತಿಸುತ್ತಿದೆ, ಈ ಮೂಲಕ ಅವರ ಜೀವನದಲ್ಲಿ ಪರಿಸರಕ್ಕೆ ನೀಡಿದ ಅಮೂಲ್ಯ ಸೇವೆಯನ್ನು ತಿಳಿಸುತ್ತಿದ್ದಾರೆ. My India My Life Goals ಅಭಿಯಾನ ಮೂಲಕ ಕನಾ ರಾಮ್ ಮೇವಾಡ ಎಂಬ ಪರಿಸರ ಪ್ರೇಮಿಯ ಸ್ಪೂರ್ತಿದಾಯಕ ಸಂದರ್ಶನವನ್ನು ನಡೆಸಿದೆ.
ಪರಿಸರ ಸಂರಕ್ಷಣೆ ಎಂದರೆ ಕನಾ ರಾಮ್ ಮೇವಾಡ ಅವರಿಗೆ ಪ್ರಾಣ. ಅದಕ್ಕಾಗಿ ಪರಿಸರ ಹಾಳು ಮಾಡುವ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ದೊಡ್ಡ ಆಂದೋಲವನ್ನು ಪ್ರಾರಂಭಿಸಿದ್ದಾರೆ. ಈ ಮೂಲಕ ಅವರು ಮನೆಮನೆಗೆ ತೆರಳಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಸಂಗ್ರಹಿಸುತ್ತಾರೆ. ಮರುಬಳಕೆ ಮಾಡುತ್ತಾರೆ. ಪ್ರತಿ ತಿಂಗಳು 200 ಕೆಜಿ ಪ್ಲಾಸ್ಟಿಕ್ ಸಂಗ್ರಹ ಮಾಡುತ್ತಾರೆ. ಅದಕ್ಕೆ ಇವರನ್ನು ಪ್ರೇಮಿಕುದಾಯಿ ಎಂದು ಕರೆಯಲಾಗುತ್ತದೆ. ಜತೆಗೆ ಇವರು ಇಂದಿನ ಜನರಿಗೆ ಇವರು ಎಲ್ಲರಿಗೂ ಆದರ್ಶ.
ಕನಾ ರಾಮ್ ಮೇವಾಡ ಅವರು ರಾಜಸ್ಥಾನದ ಟೀ ಸ್ಟಾಲ್ ಮಾಲೀಕ. ಕೆಲ ವರ್ಷಗಳ ಹಿಂದೆ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ. ತಮ್ಮ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಿಲೋಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಮಾಡುವ ವಿಶಿಷ್ಟ ವಿಧಾನವನ್ನು ಕಂಡುಕೊಂಡಿದ್ದಾರೆ. ಟೀ ಸ್ಟಾಲ್ ನಡೆಸುತ್ತಲೇ ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕಾಗಿ ವಿನೂತನ ಪ್ರಯೋಗಗಳನ್ನು ಮಾಡಿದ್ದಾರೆ. ಕೆಜಿ ಪ್ಲಾಸ್ಟಿಕ್ ಸಂಗ್ರಹಿಸಿದವರಿಗೆ ಬಹುಮಾನ ನೀಡಲಾಗುತ್ತದೆ. ಗ್ರಾಮದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಪ್ರತಿ ಮನೆಯಿಂದ ನೀರಿನ ಬಾಟಲಿ, ಹಾಲಿನ ಪ್ಯಾಕೆಟ್, ಚಿಪ್ಸ್ ಕವರ್, ಕ್ಯಾರಿ ಬ್ಯಾಗ್ ಸಂಗ್ರಹಿಸಲು ಆರಂಭಿಸಿದರು. ತಮ್ಮ ಅಂಗಡಿಗೆ ಪ್ಲಾಸ್ಟಿಕ್ ತಂದವರಿಗೆ ವಿಶೇಷ ಬಹುಮಾನ ನೀಡುವುದಾಗಿಯೂ ಘೋಷಿಸುತ್ತಿದ್ದರು.
ಗ್ರಾಮಸ್ಥರು ತಂದ ತ್ಯಾಜ್ಯಕ್ಕೆ ಬದಲಾಗಿ ನಾನು ಅವರಿಗೆ ಏನಾದರು ನೀಡಬೇಕು ಎಂದು ಅನ್ನಿಸಿತ್ತು ಎಂದು ಕನಾ ರಾಮ್ ಮೇವಾಡ ಹೇಳುತ್ತಾರೆ. ಈ ಕಾರಣಕ್ಕೆ ಅವರಿಗೆ ತಮ್ಮ ಅಂಗಡಿಯಿಂದ ಸಕ್ಕರೆ ಅಥವಾ ಗಿಡಗಳನ್ನು ನೀಡುತ್ತಿದ್ದರು. ತಿಂಗಳು ಪೂರ್ತಿ ಸಂಗ್ರಹಿಸಿದ ಪ್ಲಾಸ್ಟಿಕ್ನ್ನು ಸಂಸ್ಕರಣೆಗಾಗಿ ಹತ್ತಿರದ ನಗರದಲ್ಲಿರುವ ಮರುಬಳಕೆ ಕಂಪನಿಗೆ ಕೊಂಡೊಯ್ಯಲಾಗುತ್ತದೆ. ಕ್ಯಾರಿ ಬ್ಯಾಗ್‌ಗಳು ಕೂಡ ಸಂಗ್ರಹ ಮಾಡಲಾಗಿದೆ. ತಮ್ಮ ಅಂಗಡಿಗೆ ಪ್ಲಾಸ್ಟಿಕ್ ತಂದವರಿಗೆ ವಿಶೇಷ ಬಹುಮಾನ ನೀಡಲಾಗುತ್ತಿತ್ತು.
ಇದನ್ನೂ ಓದಿ:My India My Life Goals: ವೆರ್ಸೋವಾ ಬೀಚ್ ಪ್ಲಾಸ್ಟಿಕ್ ಮುಕ್ತ ಆಗಲು ಆಫ್ರೋಜ್ ಷಾ ಪ್ರಮುಖ ಕಾರಣ
ಎನ್‌ಜಿಒ ಮೂಲಕವೇ ಕಂಪನಿಯ ಸಂಪರ್ಕ ಮಾಡಿ ಈ ಪ್ಲಾಸ್ಟಿಕ್ಗಳನ್ನು ನೀಡುತ್ತಿದ್ದರು. ಈ ತ್ಯಾಜ್ಯವನ್ನು ಅಂಗಡಿಯ ಪಕ್ಕದ ಕೊಠಡಿಯಲ್ಲಿ ಸಂಗ್ರಹಿಸಲಾಗಿದೆ. ಅಕ್ಕಪಕ್ಕದ ಗ್ರಾಮಗಳಲ್ಲಿಯೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಇಡೀ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ಕೆಲಸ ಮಾಡುತ್ತಿದ್ದಾರೆ. “ನನ್ನಂತಹ ಸಾಮಾನ್ಯ ವ್ಯಕ್ತಿ ಒಂದು ಪ್ರಯತ್ನವನ್ನು ಪ್ರಾರಂಭಿಸಲು ನಿರ್ಧರಿಸಿದಾಗ, ಇಡೀ ಹಳ್ಳಿಯು ಅದನ್ನು ಬೆಂಬಲಿಸುತ್ತದೆ. ನಾವೆಲ್ಲರೂ ಭವಿಷ್ಯಕ್ಕಾಗಿ ಈ ಕಾರ್ಯ ಮಾಡಬೇಕಿದೆ. ನಾವು ಮಾಡಬೇಕಾಗಿರುವುದು ಒಂದು ಹೆಜ್ಜೆ ಮುಂದಿಡಬೇಕು” ಎಂದು ಕಾನಾ ರಾಮ್ ಮೇವಾಡ ಹೇಳಿದರು.
ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರವು ಪರಿಸರ ಸಂರಕ್ಷಣಾ ಆಂದೋಲನವನ್ನು ಆರಂಭಿಸಿದೆ. ಇದರ ಜತೆಗೆ ಟಿವಿ9 ನೆಟ್‌ವರ್ಕ್ ಕೂಡ ಮೈ ಇಂಡಿಯಾ – ಮೈ ಲೈಫ್ ಗೋಲ್ಸ್.. ಲೈಫ್ ಸ್ಟೈಲ್ ಫಾರ್ ಎನ್ವಿರಾನ್‌ಮೆಂಟ್ ಮೂವ್‌ಮೆಂಟ್ ಎಂಬ ಘೋಷಣೆಯಡಿಯಲ್ಲಿ ಈ ಆಂದೋಲನದಲ್ಲಿ ಪಾಲುದಾರಿಕೆ ಹೊಂದಿದೆ.
ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:42 am, Tue, 4 July 23